ನವದೆಹಲಿ:ದೇಶದಾದ್ಯಂತ ಹಠಾತ್ ಸಾವುಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು), ಈ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಸ್ವಪ್ರೇರಿತವಾಗಿ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡಿರುವ ಆಯೋಗ, ಈ ಸಾವುಗಳ ತನಿಖೆಗೆ ಸಮಿತಿಯೇನಾದರೂ ರಚಿಸಲಾಗಿದೆಯೇ ಎಂದು ಕೇಳಿದ್ದು ವಿವರಗಳನ್ನು ಒದಗಿಸುವಂತೆ ಕೋರಿದೆ.
‘ಈ ಸಾವುಗಳು ಗಂಭೀರ ಕಳವಳ ಹುಟ್ಟಿಸಿವೆ. ಅವುಗಳು ಯಾವುದಾದರೊಂದು ರೀತಿಯಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿವೆ ಎಂಬ ಗುಮಾನಿ ವ್ಯಾಪಕವಾಗಿದೆ’ ಎಂದು ಆಯೋಗ ಹೇಳಿದೆ. ಲಖನೌನಲ್ಲಿ ಇತ್ತೀಚೆಗೆ ಮದುವೆ ಸಮಾರಂಭ ನಡೆಯುತ್ತಿರುವಾಗಲೇ 20 ಹರೆಯದ ವಧು ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದ ಪ್ರಕರಣದ ಮಾಧ್ಯಮ ವರದಿಯನ್ನು ಆಯೋಗ ಉಲ್ಲೇಖಿಸಿದೆ.
16 ವರ್ಷದ ಬಾಲಕನೊಬ್ಬ ಕ್ರಿಕೆಟ್ ಆಡುವಾಗ ಮೃತಪಟ್ಟಿದ್ದು ಹಾಗೂ ಮಧ್ಯಪ್ರದೇಶದಲ್ಲಿ ವ್ಯಕ್ತಿಯಬ್ಬ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಾಗ ನಿಧನರಾದ ಪ್ರಕರಣಗಳನ್ನೂ ಆಯೋಗವು ಸರ್ಕಾರಗಳ ಗಮನಕ್ಕೆ ತಂದಿದೆ. ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ಸಂಬಂಧ ಕೇಂದ್ರ ಆರೋಗ್ಯ ಸೇವೆಗಳ ಮಹಾ ನಿರ್ದೇಶಕರಿಗೆ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೂ (ಐಸಿಎಂಆರ್) ನೋಟಿಸ್ ಜಾರಿಯಾಗಿದೆ.
ಜನಜಾಗೃತಿ:ಇಂಥ ಸಾವುಗಳಿಗೆ ಕಾರಣದ ಬಗ್ಗೆ ಜನಜಾಗೃತಿ ಮೂಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದೂ ಆಯೋಗ ಪ್ರಶ್ನಿಸಿದೆ. ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ವಿವರ ಕೋರಿದೆ.
ವೈರಲ್ ವಿಡಿಯೋ:ಹಠಾತ್ ಸಾವುಗಳ ಅನೇಕ ವಿಡಿಯೋಗಳು ವೈರಲ್ ಆಗಿವೆ. ಮಾಮೂಲಿ ಚಟುವಟಿಕೆಗಳಲ್ಲಿ ತೊಡಗಿದ ಯುವಜನರು ಮತ್ತು ವಯಸ್ಸಾದ ವರಿಬ್ಬರೂ ಹಠಾತ್ತನೆ ಸಾಯುವುದನ್ನು ನೋಡುತ್ತಿದ್ದೇವೆ. ಇಂಥ ಸಾವುಗಳ ಕುರಿತ ಕಾರಣಗಳ ಬಗ್ಗೆ ತುರ್ತಾಗಿ ತನಿಖೆ ನಡೆಸ ಬೇಕಾಗಿದೆ ಎಂದು ಮಲಿವಾಲ್ ಅಭಿಪ್ರಾಯ ಪಟ್ಟಿದ್ದಾರೆ. ಇವುಗಳಿಗೂ ಕೋವಿಡ್​ಗೂ ಯಾವುದಾದರೂ ರೀತಿಯಲ್ಲಿ ಸಂಬಂಧ ವಿದೆಯೇ ಎಂದು ನೋಡಬೇಕಿದೆ ಎಂದಿದ್ದಾರೆ.
ಕೋವಿಡ್ ಪರಿಣಾಮ:ಜನತೆಯ ಆರೋಗ್ಯದ ಮೇಲೆ ಕೋವಿಡ್-19 ಬೀರಬಹುದಾದ ದೀರ್ಘಾವಧಿ ಪರಿಣಾಮದ ಬಗ್ಗೆ ಅಧ್ಯಯನಕ್ಕೆ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನೂ ಆಯೋಗ ತಿಳಿಯಬಯಸಿದೆ.
ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

ಮೇಕಪ್​ನಿಂದ ಲುಕ್ ಹಾಳಾಯ್ತು ಅಂತ ಬ್ಯೂಟಿಪಾರ್ಲರ್​ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ ವಧು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 11 =
Remember me
