ಚೆನ್ನೈ:ಕುಖ್ಯಾತ ಕಾಡುಗಳ್ಳ ವೀರಪ್ಪನ್​ ಪುತ್ರಿ ವಿದ್ಯಾರಾಣಿ ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಈಕೆಯ ಜತೆಗೆ ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್​ ಅವರ ಸಂಬಂಧಿಕರು ಕೂಡ ರಾಜ್ಯ ಬಿಜೆಪಿ ಘಟಕದ ಪದಾಧಿಕಾರಿಯಾಗಿ ನೇಮಕವಾಗಿದ್ದಾರೆ.
ಕನ್ನಡದ ವರನಟ ಡಾ. ರಾಜ್​ಕುಮಾರ್​ ಅವರನ್ನು ಅಪಹರಿಸಿದ್ದ ಕಾಡುಗಳ್ಳ ವೀರಪ್ಪನ್​, 2004ರಲ್ಲಿ ತಮಿಳುನಾಡು ರಾಜ್ಯ ಪೊಲೀಸ್​ನ ವಿಶೇಷ ಕಾರ್ಯಪಡೆಯ ಗುಂಡಿಗೆ ಬಲಿಯಾಗಿದ್ದ. ಈತನ ಪುತ್ರಿ ಈಗ ರಾಜಕೀಯವಾಗಿ ಜೀವನಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ.
2020ರ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಂದಿನಿಂದಲೂ ಪಕ್ಷದ ಯುವಘಟಕದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದೀಗ ಆಕೆಗೆ ಯುವ ಮೋರ್ಚಾದ ಉಪಾಧ್ಯಕ್ಷೆ ಹುದ್ದೆ ದೊರೆತಿದೆ.
ಇದನ್ನೂ ಓದಿ:ಕೋವಿಡ್ ಆಸ್ಪತ್ರೆಗೆ ಹೋದ ದಿನವೇ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಡಿಸ್ಚಾರ್ಜ್​
ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್​ ಅವರ ದತ್ತುಪುತ್ರಿ ಗೀತಾ ಮತ್ತು ಮೊಮ್ಮಗ ಎಂ.ಸಿ. ಚಕ್ರಪಾಣಿ ಆರ್​ ಪ್ರವೀಣ್​ 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇವರೊಂದಿಗೆ ನಟ ರಾಧಾ ರವಿgಊ ಪಕ್ಷ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗುವ ಅದೃಷ್ಟ ಒಲಿದಿದೆ.
ನಟ ವಿಜಯಕುಮಾರ್​, ನಿರ್ದೇಶಕರಾದ ಗಂಗೈ ಅಮರನ್​ ಮತ್ತು ರಾಜನಿಕಾಂತ್​ ಅವರ ಅಳಿಯ ಧನುಷ್​ ಅವರ ತಂದೆ ಕಸ್ತೂರಿ ರಾಜ ಕೂಡ ವಿಶೇಷ ಸಂಘಟಕರಾಗಿ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸಂಗೀತ ನಿರ್ದೇಶಕ ಧಿನಾ, ನಿರ್ದೇಶಕ ಪೇರಾರಸು ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಮೋರ್ಚಾಕ್ಕೆ ನೇಮಕವಾಗಿದ್ದಾರೆ.
ಒಳನುಸುಳಿದ ಪಾಕ್ ವ್ಯಕ್ತಿ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 12 =
Remember me
