ನವದೆಹಲಿ:ಕಳೆದ ವಾರವಷ್ಟೇ ದೆಹಲಿಯ ಪಶ್ಚಿಮ್ ವಿಹಾರ್ ಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮತ್ತು ಇರಿದಿದ್ದಾನೆ ಎಂದು ಆರೋಪಿಸಲಾಗಿತ್ತು. ಅಂಥ ಹಲವು ಪ್ರಕರಣಗಳಿಂದಾಗಿರಾಷ್ಟ್ರ ರಾಜಧಾನಿ ಮಹಿಳೆಯರಿಗೆ ಅಸುರಕ್ಷಿತ ನಗರವೆಂದೇ ಹಣಪಟ್ಟಿಕಟ್ಟಿಕೊಂಡಿತ್ತು. ಅದೃಷ್ಟವಶಾತ್, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಅಂದರೆ, ದೆಹಲಿ ಪೊಲೀಸರ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ ವರ್ಷದ ದತ್ತಾಂಶಗಳಿಗೆ ಹೋಲಿಸಿದರೆ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಶೇ.60 ರಷ್ಟು ಇಳಿಕೆಯಾಗಿರುವುದರಿಂದ ರಾಜಧಾನಿ ಮಹಿಳೆಯರಿಗೆ ಸುರಕ್ಷಿತವಾಗಿದೆ ಎಂದೇ ಹೇಳಬಹುದು. ‘
ಇದನ್ನೂ ಓದಿ:ಎಂಟು ವರ್ಷಗಳ ಹಿಂದಿನ ಕರೊನಾ: ಚೀನಾದ ಕುತಂತ್ರ ಬಿಚ್ಚಿಟ್ಟ ಅಮೆರಿಕದ ಸಂಶೋಧಕರು!
ಅಂಕಿಅಂಶಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಕಿರುಕುಳ ಪ್ರಕರಣಗಳಲ್ಲಿ ಶೇ 70 ಕುಸಿತ ಕಂಡುಬಂದಿದೆ. ಜನವರಿಯಿಂದ ಜುಲೈವರೆಗೆ ರಾಷ್ಟ್ರ ರಾಜಧಾನಿಯಲ್ಲಿ 800 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸಂಖ್ಯೆ 1,299 ಆಗಿತ್ತು. ಕಿರುಕುಳ ಪ್ರಕರಣಗಳ ಸಂಖ್ಯೆ ಒಂದು ವರ್ಷದೊಳಗೆ 1,734 ರಿಂದ 1,023 ಕ್ಕೆ ಕಡಿಮೆಯಾಗಿದೆ.  ಆದರೆ ಸರಗಳ್ಳತನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ.ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣಗಳಲ್ಲಿ ಕಳ್ಳತನದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ದತ್ತಾಂಶ ತಿಳಿಸುತ್ತದೆ. ಕಳೆದ ವರ್ಷ 3,806 ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷ ದೆಹಲಿಯಲ್ಲಿ ಒಟ್ಟು 3,935 ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ :ಎಚ್​ಆರ್​ಡಿ ಸಚಿವಾಲಯ ಇನ್ನು ಶಿಕ್ಷಣ ಸಚಿವಾಲಯ
ಎಫ್‌ಐಆರ್‌ಗಳ ಅಸಮರ್ಪಕ ನೋಂದಣಿಗೆ ಶೂನ್ಯ ಸಹಿಷ್ಣು ವಿಧಾನವನ್ನು ಅಳವಡಿಸಿಕೊಳ್ಳಲು ಜಿಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎಸ್‌.ಎನ್. ಶ್ರೀವಾಸ್ತವ ತಿಳಿಸಿದ್ದಾರೆ. ಸ್ಯ್ನಾಚಿಂಗ್ ಮತ್ತು ಕಳ್ಳತನಕ್ಕೆ ಸಂಬಂಧಿಸಿದಂತೆ ಕಳಪೆ ಎಫ್‌ಐಆರ್‌ ನೋಂದಣಿಗಾಗಿ ಕಳೆದ ವರ್ಷ ದೆಹಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಲಾಗಿತ್ತು.ದೆಹಲಿ ಪೊಲೀಸರ ಅಂಕಿಅಂಶಗಳ ಪ್ರಕಾರ, ಈ ವರ್ಷ 285 ಕೊಲೆ ಪ್ರಕರಣಗಳು ವರದಿಯಾಗಿದ್ದರೆ, 2019 ರ ಜುಲೈ 31 ರವರೆಗೆ ಈ ಸಂಖ್ಯೆ 295 ಆಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ದರೋಡೆ ಪ್ರಕರಣಗಳಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷ 1,278 ಪ್ರಕರಣಗಳು ವರದಿಯಾಗಿದ್ದರೆ ಈ ವರ್ಷ 995 ಪ್ರಕರಣಗಳು ವರದಿಯಾಗಿವೆ. ಎರಡೂ ವರ್ಷಗಳಲ್ಲಿ ತಲಾ 9 ಅಪಹರಣ ಪ್ರಕರಣಗಳು ವರದಿಯಾಗಿವೆ.ಕಳೆದ ವರ್ಷ ಜುಲೈ 31 ರವರೆಗೆ 27,187 ವಾಹನ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಈ ಸಂಖ್ಯೆ 18,143 ಕ್ಕೆ ಇಳಿದಿದೆ. ವಾಹನ ಕಳ್ಳತನದ ಸಂಖ್ಯೆಯಲ್ಲಿ ಇಳಿಮುಖ ಕಂಡುಬರಲು ಲಾಕ್‌ಡೌನ್ ಮತ್ತು ಗಡಿಗಳಲ್ಲಿ ಹೆಚ್ಚಿನ ಸುರಕ್ಷತೆ ಕಾರಣವಾಗಿದೆ.
ಗೋವಾ ರಾಜ್ಯಪಾಲರು ಮೇಘಾಲಯಕ್ಕೆ, ಮಹಾ ರಾಜ್ಯಪಾಲರಿಗೆ ಗೋವಾ ಹೆಚ್ಚುವರಿ ಹೊಣೆಗಾರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
