ಬೆಂಗಳೂರು:ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಚುನಾವಣಾ ಫಲಿತಾಂಶಗಳಿಗೆ ಮುಂಚಿತವಾಗಿ, ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತ ರೀತಿಯಲ್ಲಿ ಬಳಸಿಕೊಳ್ಳಲು ಮತ್ತು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ತಡೆಯಲು ಬಳಕೆದಾರರನ್ನು ಸಂವೇದನಾಶೀಲಗೊಳಿಸಲು ಕೂ ಆ್ಯಪ್​ ಸಲಹೆಯನ್ನು ಪ್ರಾರಂಭಿಸಿದೆ.
ಆ ಸಲಹೆಯ ಭಾಗವಾಗಿ, ಕೂ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ಎಲ್ಲ 10 ಭಾಷೆಗಳಲ್ಲಿ ತನ್ನ ಸಮುದಾಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಭಾರತೀಯ ಸನ್ನಿವೇಶಕ್ಕೆ ತಕ್ಕಂತಿದ್ದು ಜವಾಬ್ದಾರಿಯುತ ಆನ್​​ಲೈನ್​ ವರ್ತನೆಯನ್ನು ವಿವರಿಸುವಾಗ ಹೊಸ ಬಳಕೆದಾರರಿಗೆ ಆರೋಗ್ಯಕರ ವಿಷಯ ಹಂಚಿಕೊಳ್ಳಲು ಬಳಕೆದಾರರನ್ನು ಸಶಕ್ತಗೊಳಿಸುತ್ತದೆ. ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಗೆ ನಿರ್ದಿಷ್ಟ ಉಲ್ಲೇಖಗಳನ್ನು ಸೂಚಿಸುವ ಜತೆಗೆ ಪೋಸ್ಟ್ ಮಾಡುವ ಮೊದಲು ಮಾಹಿತಿಯನ್ನು ಪರಿಶೀಲಿಸುವ ಪ್ರಾಮುಖ್ಯತೆಯ ಕುರಿತು ಬಳಕೆದಾರರಿಗೆ ಕೂ ತಿಳಿಸುತ್ತದೆ. ಆದರೆ ಸಾಕಷ್ಟು ಪುರಾವೆಗಳಿಲ್ಲದೆ ಮಾಹಿತಿಯನ್ನು ‘ನಕಲಿ’ ಎಂದು ಕರೆಯುವುದನ್ನು ತಡೆಯುತ್ತದೆ.
ಚುನಾವಣಾ ಫಲಿತಾಂಶದ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯ ಹೆಚ್ಚಳ ಸಾಮಾನ್ಯವಾಗಿ ಕಂಡು ಬರುವುದರಿಂದ ಮಾಹಿತಿಯನ್ನು ದೃಡೀಕರಿಸುವುದಕ್ಕಾಗಿ ಕೂ ಬಳಕೆದಾರರನ್ನು ಪರಿಶೀಲಿಸುವ ಅನುಮತಿಯನ್ನು ಮೂರನೇ ವ್ಯಕ್ತಿಗಳಾದ ಸತ್ಯ-ಪರೀಕ್ಷಕರಿಗೆ ಸಕ್ರಿಯಗೊಳಿಸಿದೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿಯಾಗಿರುವುದರಿಂದ, ಕೂ ಸ್ವತಃ ನಿಖರತೆಯನ್ನು ನಿರ್ಣಯಿಸುವುದಿಲ್ಲ ಅಥವಾ ಕಾನೂನಿನಿಂದ ಅಗತ್ಯವಿಲ್ಲದಿದ್ದರೆ ವಿಷಯದೊಂದಿಗೆ ಹಸ್ತಕ್ಷೇಪ ಮಾಡುವುದಿಲ್ಲ; ಹೀಗಾಗಿ ಸತ್ಯ-ಪರೀಕ್ಷಕರಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಮೂಲಕ, ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಆನ್‌ಲೈನ್‌ನಲ್ಲಿ ನಿರ್ಮಿಸಲು ಅದರ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಬಾಟ್‌ಗಳು ಅಥವಾ ಸ್ಪ್ಯಾಮ್ ಖಾತೆಗಳಿಂದ ನಕಲಿ ಸುದ್ದಿಗಳು ಹೆಚ್ಚಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ, ಕೂ – ವಿಶ್ವಾಸಾರ್ಹ ವೇದಿಕೆಯಾಗಿರುವುದರಿಂದ – ತಪ್ಪು ಮಾಹಿತಿಯನ್ನು ಮಿತಿಗೊಳಿಸಲು ಅಂತಹ ಖಾತೆಗಳ ಕ್ರಿಯೆಗಳನ್ನು ಮೊದಲೇ ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಿರ್ಬಂಧಿಸುತ್ತದೆ. 2021 ಡಿಸೆಂಬರ್ 1ರಿಂದ 2022ರ ಫೆ. 28ರವರೆಗೆ ಕೂ 4,720ಕ್ಕೂ ಹೆಚ್ಚು ಹ್ಯಾಂಡಲ್‌ಗಳನ್ನು ಗುರುತಿಸಿದೆ. ಸುದ್ದಿ ವಾಹಿನಿಗಳು ಅಥವಾ ಪತ್ರಕರ್ತರೆಂದು ಅಥವಾ ಸುದ್ದಿ ಮಾಧ್ಯಮಗಳಿಗೆ ಸಂಬಂಧಿಸಿದ್ದೇವೆಂದು ಗುರುತಿಸಿಕೊಂಡ 834 ಹ್ಯಾಂಡಲ್‌ಗಳನ್ನು ಸ್ಪ್ಯಾಮ್​ ಅಥವಾ ಅನಗತ್ಯ ವಿಷಯದ ಕಾರಣ ನಿರ್ಬಂಧಿಸಲಾಗಿದೆ. ಕೂ ಅವರ ನಡವಳಿಕೆಯನ್ನು ಗಮನಿಸುತ್ತಲೇ ಇರುತ್ತದೆ.
‘ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗಾಗಿ, ಹೆಚ್ಚು ಸೃಜನಶೀಲತೆ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಆನ್​​ಲೈನ್​ನಲ್ಲಿ ಅಧಿಕ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಕೂ ಶಕ್ತಿ ನೀಡುತ್ತದೆ. ನಕಲಿ ಸುದ್ದಿ ಮತ್ತು ದುರುದ್ದೇಶಪೂರಿತ ಪ್ರಸರಣವನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ, ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ. ಸಲಹೆಯು ಬಳಕೆದಾರರನ್ನು, ವಿಶೇಷವಾಗಿ ಹೊಸ ಬಳಕೆದಾರರನ್ನು ಆನ್​​ಲೈನ್​ನಲ್ಲಿ ಹೆಚ್ಚು ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸಲು ಧನಾತ್ಮಕವಾಗಿ ಗೌರವಪೂರ್ವಕವಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಕೂ ಬಳಕೆದಾರರಿಗೆ ಸುರಕ್ಷಿತವಾಗಿ ತೊಡಗಿಸಿಕೊಳ್ಳುವ ಅನುಭವವನ್ನು ಒದಗಿಸಲು ನಿರಂತರ ಶ್ರಮಿಸುತ್ತಿದ್ದು ಈ ವಿಷಯವಾಗಿ ಉತ್ತಮ ಅಭ್ಯಾಸಗಳನ್ನು ಗುರುತಿಸಲು ಕೂ ಪ್ರಯತ್ನಿಸುತ್ತದೆ ಎಂದು ಕೂ, ಸಿಇಒ ಮತ್ತು ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ತಿಳಿಸಿದ್ದಾರೆ.
ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ನೈತಿಕ ಬಳಕೆಯನ್ನು ಬಯಸುತ್ತಿರುವ ಇಂಟರ್​​ನೆಟ್​ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಮೂಲಕ ಸ್ವಯಂಪ್ರೇರಿತ ನೀತಿ ಸಂಹಿತೆಗೆ ಸಹಿ ಹಾಕಿರುವ ಕೂ, ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ನಂಬಿಕೆಯನ್ನು ನಿರ್ಮಿಸಲು ಮತದಾರರಲ್ಲಿ ಅರಿವು ಮೂಡಿಸುತ್ತದೆ. ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳ ಆಧಾರದ ಮೇಲೆ ಮೊದಲ ಬಾರಿಗೆ ಮತದಾರರನ್ನು ಸಬಲೀಕರಣಗೊಳಿಸಲು, ವೇದಿಕೆಯು ಬಹು ಭಾಷೆಗಳಲ್ಲಿ ಚುನಾವಣೆಗೆ ಮುಂಚಿತವಾಗಿ ಕೂ ಮತದಾರರ ಮಾರ್ಗದರ್ಶಿ ಮತ್ತು PledgeToVote, UP ಕಾ ಪ್ರಣಾಳಿಕೆಯಂತಹ ಮತದಾರರ ಜಾಗೃತಿ ಅಭಿಯಾನಗಳನ್ನು ಯಶಸ್ವಿಯಾಗಿ ಕೂ ಬಿಡುಗಡೆ ಮಾಡುವ ಮೂಲಕ ಕಾರ್ಯಗತಗೊಳಿಸಿದೆ ಎಂದು ಅವರು ತಿಳಿಸಿದರು.
52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
