ನವದೆಹಲಿ:ನಟಿ ಸನ್ನಿ ಲಿಯೋನ್ ಜೊತೆ ಮ್ಯೂಸಿಕ್ ಆಲ್ಬಂನಲ್ಲಿ ಕೆಲಸ ಮಾಡಿದ್ದ ಮಾಜಿ ಐಎಎಸ್ ಅಧಿಕಾರಿ ಈಗ ಚುನಾವಣೆಗೆ ಸ್ಪರ್ಧಿಸಲು ಹೊರಟಿದ್ದಾರೆ. ಸದಾ ವಿವಾದಗಳಲ್ಲೇ ಸಿಲುಕಿಕೊಳ್ಳುವ 2011ರ ಬ್ಯಾಚ್​​​ನ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು, ಅಕ್ಟೋಬರ್ 2023 ರಲ್ಲಿ ಅಭಿಷೇಕ್ ರಾಜೀನಾಮೆ ನೀಡಿದ್ದರು. ಇದೀಗ ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ಎದ್ದಿವೆ.
ಅಭಿಷೇಕ್ ಸಿಂಗ್ ಯುಪಿ ಕೇಡರ್‌ನ 2011 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದರು. ಅವರು 82 ದಿನಗಳ ಕಾಲ ಮಾಹಿತಿ ನೀಡದೆ ಕರ್ತವ್ಯದಿಂದ ಕಾಣೆಯಾಗಿರುವುದನ್ನು ಸರ್ಕಾರ ಪತ್ತೆ ಮಾಡಿ, ಫೆಬ್ರವರಿ 2023 ರಲ್ಲಿ ಅವರನ್ನು ಸಕ್ರಿಯ ಕರ್ತವ್ಯದಿಂದ ತೆಗೆದುಹಾಕಲಾಯಿತು. ಅಭಿಷೇಕ್ ಸಿಂಗ್ ಪತ್ನಿ ದುರ್ಗಾ ಶಕ್ತಿ ನಾಗ್ಪಾಲ್ ಕೂಡ ಐಎಎಸ್ ಅಧಿಕಾರಿ. ಅಂದಹಾಗೆ ಅಭಿಷೇಕ್ ಸಿಂಗ್ ಜಾನ್‌ಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅಭಿಷೇಕ್ ವಿರುದ್ಧ ಅನೇಕ ಅಶಿಸ್ತಿನ ಆರೋಪಗಳಿವೆ. 2015ರಲ್ಲಿ ಡೆಪ್ಯುಟೇಶನ್ ಮೇಲೆ ದೆಹಲಿಗೆ ಹೋಗಿದ್ದರು. ಐದು ವರ್ಷಗಳ ನಂತರ ಹಿಂದಿರುಗಿದ ಮೇಲೆ ಅವರನ್ನು ಗುಜರಾತ್ ವಿಧಾನಸಭೆ ಚುನಾವಣೆಗೆ ವೀಕ್ಷಕರನ್ನಾಗಿ ಕಳುಹಿಸಲಾಯಿತು. ಅಲ್ಲಿ, ಕಾರಿನ ಮುಂದೆ ಅವರ ಸೆಲೆಬ್ರಿಟಿ ಶೈಲಿಯಲ್ಲಿ ತೆಗೆಸಿಕೊಂಡ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಚುನಾವಣಾ ಆಯೋಗ ಕ್ರಮ ಕೈಗೊಂಡು ಅವರನ್ನು ಕರ್ತವ್ಯದಿಂದ ವಜಾಗೊಳಿಸಿತ್ತು. ಇದಾದ ಬಳಿಕ ವಿಆರ್​​​​ಎಸ್ ಗೆ ಅರ್ಜಿ ಸಲ್ಲಿಸಿದ್ದರು.

ಸಿನಿಮಾ ಮತ್ತು ಸಂಗೀತ ಆಲ್ಬಂಗಳಲ್ಲಿ ಕೆಲಸಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಆರಂಭದಲ್ಲಿ ಸಿನಿಮಾ ನಟನಾಗಲು ಬಯಸಿದ್ದರು. ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನ ‘ದೆಹಲಿ ಕ್ರೈಮ್’ ನಲ್ಲಿನ ನಟನೆ ಅವರಿಗೆ ಮನ್ನಣೆಯನ್ನು ತಂದುಕೊಟ್ಟಿತು. ಕಿರುಚಿತ್ರ ‘ಚಾರ್ ಪಂದ್ರಾಹ್’ ಮತ್ತು ಬಿ ಪ್ರಾಕ್ ಅವರ ‘ದಿಲ್ ತೋಡ್ ಕೆ..’ ಹಾಡಿನಲ್ಲೂ ಕಾಣಿಸಿಕೊಂಡರು. ಸನ್ನಿ ಲಿಯೋನ್ ಜೊತೆಗೆ ‘ಥರ್ಡ್ ಪಾರ್ಟಿ’ಯಲ್ಲಿಯೂ ಕಾಣಿಸಿಕೊಂಡರು, ಇದು ಸಾಕಷ್ಟು ಸುದ್ದಿ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಭಿಷೇಕ್ ಸಿಂಗ್ ಮತ್ತು ಸನ್ನಿ ಲಿಯೋನ್ ರಾತ್ರಿ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ವಾರಣಾಸಿಗೆ ತೆರಳಿದ್ದರು.
ರಾಜೀನಾಮೆ ನೀಡಿದ ನಂತರ ಅಭಿಷೇಕ್ ಸಿಂಗ್ ರಾಜಕೀಯದತ್ತ ಮುಖ ಮಾಡಿದ್ದಾರೆ. ಅಭಿಷೇಕ್ ಸಿಂಗ್ ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬಹುದು, ಆದರೂ ಅವರು ವಿಶೇಷವಾಗಿ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅಭಿಷೇಕ್ ಸಿಂಗ್ ಉತ್ತರ ಪ್ರದೇಶದ ಜೌನ್‌ಪುರ ನಿವಾಸಿ. ಅವರ ಪತ್ನಿ ದುರ್ಗಾ ಶಕ್ತಿ ನಾಗ್ಪಾಲ್ ಕೂಡ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಬಂಡಾ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆಗಿ ನೇಮಕಗೊಂಡಿದ್ದಾರೆ.
ಭಾರತದ ಇಂಟರ್​​​​​ನೆಟ್​​​ ಬಳಕೆದಾರರು ಹೆಚ್ಚು ಇಷ್ಟಪಟ್ಟು ನೋಡುವ ವಿಷಯಗಳಿವು, ಇದರಲ್ಲಿ ಹಳ್ಳಿ ಮಂದಿಯೂ ಹಿಂದೆ ಬಿದ್ದಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 18 =
Remember me
