ನವದೆಹಲಿ:ಮಾಸ್ಟರ್​ ಆಫ್​ ಕಂಪ್ಯೂಟರ್​ ಅಪ್ಲಿಕೇಷನ್​ (ಎಂಸಿಎ) ಆಕಾಂಕ್ಷಿಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಕೋರ್ಸ್​ ಮೂರು ವರ್ಷದ ಬದಲಾಗಿ ಎರಡು ವರ್ಷದ್ದಾಗಿರಲಿದೆ.
ಕಳೆದ ವರ್ಷವೇ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ 2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಇಸಿಟಿಇ) ತಿಳಿಸಿದೆ. ಆದರೆ ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೂರು ವರ್ಷ ಇದನ್ನು ವ್ಯಾಸಂಗ ಮಾಡಬೇಕಿದೆ.
ಇದನ್ನೂ ಓದಿ;ರೆಕ್ಕೆಗಳಿಲ್ಲ…! ಇದು ಅಪ್ಪಟ ಹಾರುವ ಕಾರು; ಇಸ್ರೇಲ್​ ಕಂಪನಿ ಸಾಧನೆ
ಕಳೆದ ಹಲವು ವರ್ಷಗಳಿಂದ ಇದರ ವ್ಯಾಸಂಗ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಜತೆಗೆ, ಇದರ ಜನಪ್ರಿಯತೆ ಕೂಡ ಕುಂದಿತ್ತು. ಹಲವು ಕಾಲೇಜುಗಳಲ್ಲಿ ಎಂಸಿಎ ಕೋರ್ಸ್​ ರದ್ದು ಮಾಡಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಕೋರ್ಸ್​ ಅವಧಿಯನ್ನು ಎರಡು ವರ್ಷಕ್ಕೆ ಇಳಿಸಲಾಗಿದೆ.
ಕೋರ್ಸ್​ ಅವಧಿಯನ್ನು ಕಡಿಮೆ ಮಾಡಿದ್ದರೂ, ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಮಂಡಳಿ ಸ್ಪಷ್ಟಪಡಿಸಿದೆ. ಏಕೆಂದರೆ, ಎಂಸಿಎಗೆ ಲ್ಯಾಟರಲ್​ ಎಂಟ್ರಿ ಕೂಡ ನೀಡಲಾಗುತ್ತದೆ. ಆ ಅಭ್ಯರ್ಥಿಗಳಿಗೆ ತೊಂದರೆಯಾಗದಿರಲು ಪಠ್ಯಕ್ರಮದಲ್ಲಿ ಬದಲಾವಣೆ ಇಲ್ಲವೆಂದು ಹೇಳಿದೆ.
ಇದನ್ನೂ ಓದಿ;ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ
ಎಂಸಿಎಗೆ ಬಿಸಿಎ, ಬಿಎಸ್ಸಿ, ಬಿಕಾಂ, ಬಿಎ ಪದವೀಧರರಿಗೂ ಅವಕಾಶವಿದೆ. ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು. ಕರ್ನಾಟಕದಲ್ಲಿ ಪಿಜಿಸಿಇಟಿ ಮೂಲಕ ಎಂಸಿಎ ಸೀಟುಗಳ ಹಂಚಿಕೆ ಮಾಡಲಾಗುತ್ತದೆ.
ಕಾಲೇಜು, ವಿಶ್ವವಿದ್ಯಾಲಯಗಳ ಪರೀಕ್ಷೆಗಳೂ ರದ್ದು; ಇವರೇ ಭಾಗ್ಯವಂತರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seventeen =
Remember me
