ನವದೆಹಲಿ:ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಇಂದು ಆರಂಭವಾಗುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ, ಚತುರ್ಥಿಯ ಹಿನ್ನೆಲೆಯಲ್ಲಿ ಗಣಪತಿಯನ್ನು ಸ್ಮರಿಸಿದ್ದಾರೆ. ಮಾತ್ರವಲ್ಲ, ಈಗ ದೇಶದ ಅಭಿವೃದ್ಧಿಗೆ ಯಾವುದೇ ವಿಘ್ನವಿಲ್ಲ ಎಂದೂ ಹೇಳಿದ್ದಾರೆ.ನಾಳೆ ನಾವು ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಾವು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದೇವೆ ಎಂದ ಪ್ರಧಾನಿ ಮೋದಿ, ದೇವರು ಗಣೇಶ ವಿಘ್ನನಿವಾರಕ ಎಂದೇ ಪ್ರಸಿದ್ಧಿ ಪಡೆದಿದ್ದಾನೆ. ಈಗ ದೇಶದ ಅಭಿವೃದ್ಧಿಗೂ ಯಾವುದೇ ವಿಘ್ನವಿಲ್ಲ. ಭಾರತವೂ ಯಾವುದೇ ವಿಘ್ನವಿಲ್ಲದೆ ಎಲ್ಲ ಸಂಕಲ್ಪ-ಕನಸುಗಳನ್ನು ಪೂರ್ಣಗೊಳಿಸಲಿದೆ ಎಂದು ಮೋದಿ ಹೇಳಿದರು.
ಈ ಅಧಿವೇಶನ ಸಣ್ಣ ಅವಧಿಯದ್ದಾದರೂ ಐತಿಹಾಸಿಕವಾಗಿ ಮಹತ್ವದ್ದು ಎಂದ ಮೋದಿ, ಸಂಸದರಿಂದ ಈ ಅಧಿವೇಶನದಲ್ಲಿ ಏನನ್ನು ನಿರೀಕ್ಷಿಸುತ್ತಿದ್ದೇನೆ ಎಂಬುದನ್ನೂ ಹೇಳಿದರು. ಇದು ಕಿರು ಅಧಿವೇಶನ, ಹೀಗಾಗಿ ಸಂಸದರು ತಮ್ಮ ಸಮಯವನ್ನು ಉಲ್ಲಾಸ ಹಾಗೂ ಉತ್ಸಾಹದಿಂದ ಸಂಪೂರ್ಣವಾಗಿ ಇದರಲ್ಲಿ ಸದ್ಬಳಕೆ ಮಾಡಬೇಕು ಎಂದರು.
ಇದನ್ನೂ ಓದಿ:ಇಂದಿನಿಂದ 5 ದಿನಗಳ ವಿಶೇಷ ಅಧಿವೇಶನ; ನೂತನ ಭವನಕ್ಕೆ ಸ್ಥಳಾಂತರ ನಿರೀಕ್ಷೆ
75 ವರ್ಷಗಳ ಪ್ರಯಾಣ ಹೊಸ ಸಂಸತ್ ಭವನದಿಂದ ಆರಂಭವಾಗುತ್ತಿರುವುದು ಈ ಸಲದ ವಿಶೇಷ. ಇದು ಐತಿಹಾಸಿಕವಾಗಿ ಮಹತ್ವಪೂರ್ಣವಾದುದು. ಈ ಹೊಸ ಪ್ರಯಾಣದೊಂದಿಗೆ ನಾವು 2047 ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ಗುರಿಯೊಂದಿಗೆ ಮುನ್ನಡೆಯೋಣ ಎಂದರು.
ಮೀನನ್ನು ತಿಂದ ಈ ಮಹಿಳೆ ಕೈ-ಕಾಲು ಎರಡೂ ಕಳೆದುಕೊಂಡಳು: ಆಗಿದ್ದಾದರೂ ಏನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
