ಬೆಂಗಳೂರು:ಯಾವುದೇ ಎಫ್​ಐಆರ್​ ಕಾಪಿ, ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿಗಳನ್ನು ನೋಡಿದವರಿಗೆ ಪೊಲೀಸರ ಬರಹ ಸಾಮಾನ್ಯವಾಗಿ ಸಪ್ಪೆಯಾಗಿ ಇರುತ್ತದೆ ಎಂಬುದು ಗೊತ್ತಿರುವಂಥ ವಿಚಾರವೇ. ಆದರೆ ಪೊಲೀಸರ ಬರವಣಿಗೆ ಸುಧಾರಿಸಿರುವುದಷ್ಟೇ ಅಲ್ಲ, ಅದರಲ್ಲೂ ಸೃಜನಶೀಲತೆ ಹೊರಹೊಮ್ಮುತ್ತಿರುವುದು ಕಂಡುಬರುತ್ತಿದೆ.
ಪೊಲೀಸರು ಕ್ರಿಯೇಟಿವ್ ಆಗುತ್ತಿರುವುದನ್ನು ಪೊಲೀಸ್ ಇಲಾಖೆಯ ಸೋಷಿಯಲ್ ಮೀಡಿಯಾ ಖಾತೆಗಳು ಅನಾವರಣಗೊಳಿಸುತ್ತಿವೆ. ಈ ವಿಚಾರದಲ್ಲಿ ಬೆಂಗಳೂರು, ಹುಬ್ಬಳ್ಳಿ ಪೊಲೀಸರ ಬಳಿಕ ಇಂದು ದೆಹಲಿ ಪೊಲೀಸರು ಕ್ರಿಯೇಟಿವಿಟಿ ತೋರಿರುವುದು ಕಂಡುಬಂದಿದೆ. ಇಂಥದ್ದೊಂದು ಕ್ರಿಯೇಟಿವಿಟಿಯನ್ನು ಹೊರಹೊಮ್ಮಿಸಿರುವುದು ಇವತ್ತಿನ ಕ್ರಿಕೆಟ್ ಮ್ಯಾಚ್​.
ನಿಮ್ಮ ಪಾಸ್‌ವರ್ಡ್‌ ಹೇಗಿರಬೇಕು
'ಓಣಂ ಸಧ್ಯ' ಭೋಜನದಲ್ಲಿರುವ ವೈವಿಧ್ಯತೆ ಗಮನಿಸಿದ್ದೀರಾ? ನಿಮ್ಮ ಪಾಸ್‌ವರ್ಡ್‌ಗಳನ್ನು ಹಾಕುವಾಗಲೂ ಅದನ್ನು ವೈವಿಧ್ಯಮಯವಾಗಿ ಮಾಡುವ ಮೂಲಕ ಯಾರೂ ಊಹಿಸಿ ವಂಚನೆ ಮಾಡದಂತೆ ಸದೃಢಪಡಿಸಿಕೊಳ್ಳಿ.
ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು !#BeCyberSafe#CyberScampic.twitter.com/WEsXEUI46e
— ಬೆಂಗಳೂರು ನಗರ ಪೊಲೀಸ್‌ BengaluruCityPolice (@BlrCityPolice)August 29, 2023

ಕೊಲಂಬೊದ ಆರ್​.ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಏಷ್ಯಾಕಪ್​ ಫೈನಲ್ ಫೈನಲ್​ ಪಂದ್ಯದಲ್ಲಿ ಭಾರತದ ದಾಳಿಗೆ ಶ್ರೀಲಂಕಾ ನಲುಗಿ ಹೋಗಿ ಐವತ್ತೇ ರನ್​ಗಳಲ್ಲಿ ಆಲೌಟ್ ಆಗಿದೆ.
August 23ಆವತ್ತು ಎರಡು ಘಟನೆಗಳು ನಡೆದವು..👇
1. 'ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ 🚀 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು'..💐
2. ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು..💪🚔#Chandrayaan3#VikramLander#IndiaOnMoon#ISROpic.twitter.com/4QfOfeZYnd
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc)August 23, 2023

ಅದರಲ್ಲೂ ಭಾರತದ ವೇಗಿ ಮೊಹಮ್ಮದ್​ ಸಿರಾಜ್​ ಒಂದೇ ಓವರ್​ನಲ್ಲಿ ನಾಲ್ಕು ವಿಕೆಟ್​ ಪಡೆಯುವ ಮೂಲಕ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್​ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟಿಗ ಸಿರಾಜ್​ಗೆ ದೆಹಲಿ ಪೊಲೀಸರು ಮೆಚ್ಚುಗೆ ಸೂಚಿಸಿರುವುದು ಗಮನ ಸೆಳೆದಿದೆ. ಸಿರಾಜ್ ಅವರ ಅತಿವೇಗಕ್ಕೆ ಇಂದು ಯಾವುದೇ ದಂಡವಿಲ್ಲ ಎಂದು ದೆಹಲಿ ಪೊಲೀಸರು ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಇಂಗ್ಲಿಷ್​ನಲ್ಲಿ ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನ ಸೆಳೆದಿದ್ದು, ಅವರ ಪೋಸ್ಟ್​ಗೂ ಭರ್ಜರಿ ಮೆಚ್ಚುಗೆ ಸಿಕ್ಕಿದೆ.
No speed challans for#Sirajtoday.#AsiaCupFinals#AsiaCup2023#INDvsSL
— Delhi Police (@DelhiPolice)September 17, 2023

ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 + 8 =
Remember me
