ಮುಂಬೈ:ಬ್ಯಾಂಕಿಂಗ್ ಉದ್ಯಮದಲ್ಲಿ, ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸುವುದರ ಜೊತೆಗೆ, ನಿಧಿ ನಿರ್ವಹಣೆಯನ್ನು ಸಹ ಮಾಡಲಾಗುತ್ತದೆ. ಅಲ್ಲದೆ, ವಿವಿಧ ಹಣಕಾಸು ಸೇವೆಗಳನ್ನು ಸಹ ಒದಗಿಸಲಾಗುತ್ತದೆ. ಬ್ಯಾಂಕಿಂಗ್ ವ್ಯವಸ್ಥೆಯು ವಾಣಿಜ್ಯ, ಹೂಡಿಕೆ ಮತ್ತು ಕೇಂದ್ರೀಯ ಬ್ಯಾಂಕುಗಳನ್ನು ಒಳಗೊಂಡಿದೆ. ಬ್ಯಾಂಕಿಂಗ್ ವ್ಯವಸ್ಥೆಯು ಆರ್ಥಿಕ ಬೆಳವಣಿಗೆಯನ್ನು ಚಾಲನೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿತ್ತೀಯ ಸ್ಥಿರತೆ ಮತ್ತು ನಿಧಿ ನಿರ್ವಹಣೆಯನ್ನು ನಿರ್ವಹಿಸುತ್ತದೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅನುತ್ಪಾದಕ ಆಸ್ತಿಗಳನ್ನು (NPAs) ಹೊಂದಿರುತ್ತವೆ. ಇದು ಸಾಲ ನೀಡುವ ಬ್ಯಾಂಕ್‌ಗೆ ಇನ್ನು ಮುಂದೆ ಆದಾಯವನ್ನು ತರುವುದಿಲ್ಲ. NPA ಗಳು ಬ್ಯಾಂಕಿಗೆ ಹಣಕಾಸಿನ ತೊಂದರೆಯನ್ನು ಸೂಚಿಸುತ್ತವೆ ಮತ್ತು ಸಾಲಗಾರರು ನಿರ್ದಿಷ್ಟ ಅವಧಿಗೆ ತಮ್ಮ ಮರುಪಾವತಿಯ ಬದ್ಧತೆಗಳನ್ನು ಪೂರೈಸದಿದ್ದಾಗ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಮೇಲೆ ಪರಿಣಾಮ ಬೀರುತ್ತದೆ.
ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ (Utkarsh Small Finance Bank Ltd):ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಬ್ಯಾಂಕಿನ ಉತ್ಪನ್ನ ಮತ್ತು ಸೇವಾ ಕೊಡುಗೆಗಳು ಗ್ರಾಹಕರಿಗೆ ಒದಗಿಸುವ ಆಸ್ತಿ ಉತ್ಪನ್ನಗಳನ್ನು ಒಳಗೊಂಡಿರುತ್ತದೆ. ವಿಶೇಷವಾಗಿ ಬ್ಯಾಂಕ್ ಇಲ್ಲದ ಮತ್ತು ಕಡಿಮೆ ಬ್ಯಾಂಕ್​ ಸೌಲಭ್ಯಗಳಿರುವ ಪ್ರದೇಶಗಳಲ್ಲಿ ಇದು ಸೇವೆ ಸಲ್ಲಿಸುತ್ತದೆ.
ಈ ಬ್ಯಾಂಕಿನ ಮಾರುಕಟ್ಟೆ ಬಂಡವಾಳ 6,136 ಕೋಟಿ ರೂ. ಈ ಬ್ಯಾಂಕಿನ ಎನ್‌ಪಿಎ 2022-23ರ ಹಣಕಾಸು ವರ್ಷದಲ್ಲಿ ರೂ. 50 ಕೋಟಿಯಿಂದ 23-24ರ ಹಣಕಾಸು ವರ್ಷದಲ್ಲಿ ರೂ .4 ಕೋಟಿಗೆ, ಅಂದರೆ ಶೇಕಡಾ 92ರಷ್ಟು ಕಡಿಮೆಯಾಗಿದೆ. 2023-24ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 896 ಕೋಟಿ ರೂ.ಗಳಷ್ಟಿತ್ತು, ಇದೇ ಅವಧಿಯಲ್ಲಿ ನಿವ್ವಳ ಲಾಭವು 160 ಕೋಟಿ ರೂ. ಇದೆ.
ಯೆಸ್ ಬ್ಯಾಂಕ್ ಲಿಮಿಟೆಡ್​ (Yes Bank Ltd):ಯೆಸ್ ಬ್ಯಾಂಕ್ ಲಿಮಿಟೆಡ್, ಕಾರ್ಪೊರೇಟ್ ಮತ್ತು ಸಾಂಸ್ಥಿಕ ಬ್ಯಾಂಕಿಂಗ್, ಹಣಕಾಸು ಮಾರುಕಟ್ಟೆಗಳು, ಹೂಡಿಕೆ ಬ್ಯಾಂಕಿಂಗ್, ಕಾರ್ಪೊರೇಟ್ ಹಣಕಾಸು, ಶಾಖೆ ಬ್ಯಾಂಕಿಂಗ್, ವ್ಯಾಪಾರ ಮತ್ತು ವಹಿವಾಟು ಬ್ಯಾಂಕಿಂಗ್ ಮತ್ತು ನಿಧಿ ನಿರ್ವಹಣೆಯಂತಹ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತದೆ.
71,805 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿರುವ ಈ ಬ್ಯಾಂಕ್‌ನ ಎನ್‌ಪಿಎ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಬ್ಯಾಂಕಿನ ಎನ್‌ಪಿಎ 2022-23ರ ಹಣಕಾಸು ವರ್ಷದಲ್ಲಿ 1,658 ಕೋಟಿ ರೂ.ಗಳಿಂದ 2023-24ರಲ್ಲಿ 1,329 ಕೋಟಿ ರೂ.ಗೆ, ಅಂದರೆ ಶೇ. 20ರಷ್ಟು ಕಡಿಮೆಯಾಗಿದೆ. 2023-24ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 7,458 ಕೋಟಿ ರೂ.ಗಳಾಗಿದ್ದು, ಇದೇ ಅವಧಿಯಲ್ಲಿ ನಿವ್ವಳ ಲಾಭವು 467 ಕೋಟಿ ರೂ. ಆಗಿದೆ.
ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್ (IDFC First Bank Ltd):ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್ ನಾಲ್ಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಖಜಾನೆ, ಕಾರ್ಪೊರೇಟ್/ಸಗಟು ಬ್ಯಾಂಕಿಂಗ್, ಚಿಲ್ಲರೆ ಬ್ಯಾಂಕಿಂಗ್ ಮತ್ತು ಇತರ ಬ್ಯಾಂಕಿಂಗ್ ವ್ಯವಹಾರಗಳು. ಖಜಾನೆ ವಿಭಾಗವು ಹೆಚ್ಚಾಗಿ ಬ್ಯಾಂಕಿನ ಹೂಡಿಕೆ ಬಂಡವಾಳ, ಹಣದ ಮಾರುಕಟ್ಟೆ ಸಾಲ ಮತ್ತು ಹೂಡಿಕೆ ಚಟುವಟಿಕೆಗಳು ಮತ್ತು ಬ್ಯಾಂಕಿನ ಸಂಪೂರ್ಣ ವಿದೇಶಿ ವಿನಿಮಯ ಮತ್ತು ಉತ್ಪನ್ನಗಳ ಬಂಡವಾಳವನ್ನು ಒಳಗೊಂಡಿದೆ.
ಐಡಿಎಫ್​ಸಿ ಫಸ್ಟ್ ಬ್ಯಾಂಕ್ ನ ಮಾರುಕಟ್ಟೆ ಬಂಡವಾಳ 57,235 ಕೋಟಿ ರೂ. ಇದೆ. ಇದರ NPA 2022-23 ಹಣಕಾಶು ವರ್ಷದಲ್ಲಿ ರೂ. 1,304 ಕೋಟಿಯಿಂದ 2023-24 ಹಣಕಾಸು ವರ್ಷದಲ್ಲಿ ರೂ. 1,160 ಕೋಟಿಗೆ 11 ಶೇಕಡಾ ಕಡಿಮೆಯಾಗಿದೆ. 2023-24ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 8,220 ಕೋಟಿ ರೂ.ಗಳಾಗಿದ್ದು, ಇದೇ ಅವಧಿಯಲ್ಲಿ ನಿವ್ವಳ ಲಾಭವು 732 ಕೋಟಿ ರೂ. ಇದೆ.
ವಿಶ್ಲೇಷಕರು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸ್ಟಾಕ್‌ನಲ್ಲಿ ಬುಲಿಶ್ ಆಗಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಷೇರುಗಳ ಬೆಲೆ ಪ್ರಸ್ತುತ ಮಟ್ಟಕ್ಕಿಂತ ದ್ವಿಗುಣಗೊಳ್ಳಬಹುದು ಎಂದು ಹೇಳುತ್ತಾರೆ.

ಪಿಎಸ್​ಯು ಬ್ಯಾಂಕ್​ಗಳ ಷೇರು ಬೆಲೆಯಲ್ಲಿ ಅಪಾರ ಕುಸಿತ: ಮೂಲಸೌಕರ್ಯ ಕಂಪನಿಗಳಿಗೆ ಸಾಲ ನಿಯಮದಲ್ಲಿ ಬದಲಾವಣೆ ಏನು?

ಅದಾನಿ ಸಮೂಹದ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರೀ ಕುಸಿತ: ಸೆಬಿ ನೋಟಿಸ್ ನೀಡಿದ್ದೇಕೆ?

ಸೋಮವಾರ ಕುಸಿತ ಕಂಡ ಷೇರುಗಳು: ಈ 7 ಸ್ಟಾಕ್​ಗಳನ್ನು ಈಗ ಖರೀದಿಸಿದರೆ ಮುಂದೆ ಲಾಭ ಮಾಡಿಕೊಳ್ಳುವ ಅವಕಾಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 3 =
Remember me
