ನವದೆಹಲಿ: ಭಾರತದಲ್ಲಿ ಸಿಲುಕಿರುವ ಎನ್​ಆರ್​ಐಗಳು ತಮ್ಮ ಉದ್ಯೋಗ ಹಾಗೂ ವೀಸಾ ಕಳೆದುಕೊಳ್ಳುವ ಭೀತಿಯಿಂದ ಅಮೆರಿಕಕ್ಕೆ ಮರಳಲು ಶತ ಪ್ರಯತ್ನ ನಡೆಸಿದ್ದಾರೆ.
ಇದೇ ವೇಳೆ ಅಮೆರಿಕಕ್ಕೆ ತೆರಳಲು ವಿಮಾನ ವ್ಯವಸ್ಥೆ ಮಾಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.ವೀಸಾ ಅವಧಿ ಜೂನ್’ನಲ್ಲಿ ಪೂರ್ಣಗೊಳ್ಳಲಿದ್ದು, ಒಂದು ವೇಳೆ ಅದು ಮುಗಿದು ಹೋದರೆ ಕಷ್ಟ ಪಟ್ಟು ಪಡೆದ ಕೆಲಸ ಹೋಗುತ್ತದೆ ಮತ್ತು 40 ಲಕ್ಷ ರೂ. ಶೈಕ್ಷಣಿಕ ಸಾಲವನ್ನು ಭರಿಸಲು ಕಷ್ಟವಾಗುತ್ತದೆ ಎಂದು 25 ವರ್ಷದ ಡೇಟಾ ಸೈಂಟಿಸ್ಟ್ ಒಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
700 ಕ್ಕೂ ಹೆಚ್ಚು ಜನ ಲಾಕ್​ಡೌನ್​​ನಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದು, ಅವರು ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸದಿದ್ದರೆ ತಮ್ಮ ವೃತ್ತಿಯನ್ನೂ ಕಳೆದುಕೊಳ್ಳಲಿದ್ದಾರೆ.
ಭಾರತದಿಂದ ವಿಮಾನ ವ್ಯವಸ್ಥೆ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ಮನವಿ ಮಾಡಿಕೊಂಡಿದ್ದಾರೆ.ಅಮೆರಿಕಕ್ಕೆ ವಲಸೆ ಹೋಗುವುದನ್ನುನಿಷೇಧಿಸುವ ಅಧ್ಯಕ್ಷೀಯ ಆದೇಶದಿಂದಾಗಿ ಟ್ರಂಪ್ ಆಡಳಿತದ ಬದಲಾಗಬಹುದಾದ ನೀತಿಯ ಬಗ್ಗೆ ಇವರು ಹೆಚ್ಚು ಆತಂಕಕ್ಕೀಡಾಗಿದ್ದಾರೆ.ಅತ್ತ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರುವಲ್ಲಿ ಸರ್ಕಾರ ಯೋಜಿಸುತ್ತಿದ್ದರೆ, ಇತ್ತ ತಾಯ್ನಾಡಿನಲ್ಲಿ ಸಿಲುಕಿರುವ ಭಾರತೀಯರು ಅಮೆರಿಕಕ್ಕೆ ಹೋಗಲು ತಮಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಬೇಕೆಂದು ವಿನಂತಿಸುತ್ತಿದ್ದಾರೆ.
ಇದನ್ನೂ ಓದಿhttp://ಕರೊನಾ ಸೋಂಕು ತಡೆಗೆ ನೇಮಕವಾಗಿರುವ ವಾರಿಯರ್ಸ್​ ವಾಹನ ತಳ್ಳುತ್ತಿರುವುದು ಏಕೆ?
ಸಮಸ್ಯೆಗಳೇನು?:ಅಮೆರಿಕದ ವ್ಯಾಪ್ತಿಯಲ್ಲೇ ವೀಸಾ ಅವಧಿ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕೆಂದು ಯುನೈಟೆಡ್ ಸ್ಟೇಟ್ಸ್ ಸಿಟಿಜನ್​ಷಿಪ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್​ಸಿಐಎಸ್) ನಿಯಮಗಳು ಹೇಳುತ್ತವೆ. ವಿಶೇಷ ಸಂದರ್ಭಗಳಲ್ಲಿ ವೆಬ್​ಸೈಟ್​​ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ವೀಸಾ ಮುಕ್ತಾಯದ ಗಡುವು ಸಮೀಪಿಸುತ್ತಿದೆ. ಅದರ ನಂತರ ಯುಎಸ್’ಗೆ ಹೋಗಲು ಸಾಧ್ಯವಿಲ್ಲ. ಉದ್ಯೋಗ ಕಳೆದುಕೊಂಡರೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ. ಬೃಹತ್ ಸಾಲವನ್ನು ಮರು ಪಾವತಿಸಬೇಕಾದ ಅನಿವಾರ್ಯತೆ ಇದೆ. ಹಲವರು ಕುಟುಂಬಗಳಿಂದ ದೂರವಾಗಿದ್ದಾರೆ. ಅಮೆರಿಕದಲ್ಲಿ ಪಾಲಕರು, ಮಕ್ಕಳು ಸಿಲುಕಿದ್ದಾರೆ. ಬಹಳಷ್ಟು ಜನ ಈಗಾಗಲೇ ವರ್ಕ್ ಫ್ರಮ್ ಹೋಂ ಅವಧಿ ಮುಗಿಸಿ ಆಗಿದೆ. ಇನ್ನು ಮತ್ತೆ ಮುಂದಿನ ದಿನಗಳಲ್ಲಿ ಮನೆಯಿಂದ ಕೆಲಸ ಮಾಡಲು ಉದ್ಯೋಗದಾತರು ಅನುಮತಿಸಲಿಕ್ಕಿಲ್ಲ.
ಉದ್ಯೋಗದಾತರು ದಂಡವಿಧಿಸಬಹುದು. ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಲು ಹಲವು ವರ್ಷ ಶ್ರಮ ಪಟ್ಟಿದ್ದು, ಕುಟುಂಬದ ಜವಾಬ್ದಾರಿಗಳಿವೆ. ಅಲ್ಲಿ ಮತ್ತೆ ಪ್ರವೇಶಕ್ಕೆ ನಿರ್ಬಂಧ ಹೇರಿದರೆ ಇದೆಲ್ಲವೂ ವ್ಯರ್ಥವಾಗುತ್ತವೆ ಎಂಬ ಅಳಲು ಅವರದು.
ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಈ ಕುರಿತು ಮನವಿ ಮಾಡಿಕೊಳ್ಳಲಾಗಿದೆ. ಯಾವುದೇ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಸಚಿವಾಲಯ ಹೇಳಿದೆ ಎನ್ನುತ್ತಾರೆ ಸ್ಯಾನ್​ಫ್ರಾನ್ಸಿಸ್ಕೋದ ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಸೈಂಟಿಸ್ಟ್ ಆಗಿರುವ ಆಯುಷ್ ಸಿನ್ಹಾ. (ಏಜೆನ್ಸೀಸ್​)
ದುಬೈ ಮಾಲ್​ ಮತ್ತೆ ಆರಂಭ, ವಿಶ್ವದ ಅತ್ಯಂತ ದೊಡ್ಡ ಮಾಲ್​ ಸ್ಥಗಿತಗೊಂಡಿದ್ದಾದರೂ ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 2 =
Remember me
