ನವದೆಹಲಿ:ಸಿಎಎ ಪರ-ವಿರೋಧ ಬಣದಿಂದ ಈಶಾನ್ಯ ದೆಹಲಿಯಲ್ಲಿ ಉಲ್ಬಣಗೊಂಡಿರುವ ಹಿಂಸಾಚಾರವನ್ನು ತಹಬದಿಗೆ ತರಲು ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್​ರಿಗೆ ಉಸ್ತುವಾರಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಹಿಂಸಾಚಾರದ ಪ್ರದೇಶಗಳಿಗೆ ಭೇಟಿ ನೀಡಿದ ದೋವಲ್ ರಕ್ಷಣೆಯನ್ನು ಪರಿಶೀಲಿಸಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.​ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಜನರು ಆರಾಮವಾಗಿದ್ದಾರೆ. ಕಾನೂನು ಜಾರಿ ಸಂಸ್ಥೆಗಳ ಮೇಲೆ ನನಗೆ ಬಲವಾದ ನಂಬಿಕೆ ಇದೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ದೋವಲ್​ ಅವರು ಪೊಲೀಸ್​ ಅಧಿಕಾರಿಗಳ ಬೆಂಗಾವಲಿನೊಂದಿಗೆ ಭಾನುವಾರದಿಂದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಾಫರಾಬಾದ್​ಗೆ ಆಗಮಿಸಿದರು. ಈಗಾಗಲೇ ಹಿಂಸಾಚಾರದಲ್ಲಿ 23 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ದೋವಲ್​ ಅವರಿಗೆ ಮೊದಲು ಯುವತಿಯೊಬ್ಬಳು ಎದುರಾದಳು. ಈ ವೇಳೆ ಮಾತನಾಡಿದ ಆಕೆ, ನಾನೋರ್ವ ವಿದ್ಯಾರ್ಥಿನಿ, ನಾನು ರಾತ್ರಿಯಿಡಿ ನಿದ್ದೆಯನ್ನೇ ಮಾಡಿಲ್ಲ. ನಾವ್ಯಾರು ಹೋರಾಟವನ್ನು ಮಾಡುತ್ತಿಲ್ಲ. ಓದಲು ಹೊರಗೆ ಹೋಗಲು ಆಗುತ್ತಿಲ್ಲ ಎಂದು ನೋವು ತೋಡಿಕೊಂಡಳು. ಇದಕ್ಕೆ ಪ್ರತಿಕ್ರಿಯಿಸಿದ ದೋವಲ್​, ನೀನು ಚಿಂತಿಸಬೇಡ. ಇದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ ಎಂದರು.
ಈ ವೇಳೆ ಧೈರ್ಯವಾಗಿಯೇ ದೋವಲ್​ ಮಾತಿನ ಮಧ್ಯ ಪ್ರವೇಶಿಸಿದ ವಿದ್ಯಾರ್ಥಿನಿ ಪೊಲೀಸರು ಅವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಆರೋಪಿಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ದೋವಲ್​, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ನೀಡಿದರು.
ಗೃಹ ಸಚಿವ ಅಮಿತ್​ ಷಾ ಸಲಹೆಯಂತೆ ರಾಷ್ಟ್ರೀಯ ಭದ್ರತೆ ಸಲಹೆಗಾರರಾಗಿರುವ ಅಜಿತ್​ ದೋವಲ್​ ಹಿಂಸಾಚಾರ ನಡೆದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಭೇಟಿಗೂ ಮುನ್ನ ದೋವಲ್​ ಅವರು ನಿನ್ನೆ ಸಂಜೆಯಷ್ಟೇ ನೇಮಕವಾದ ದೆಹಲಿ ಪೊಲೀಸ್​ ವಿಶೇಷ ಆಯುಕ್ತ(ಕಾನೂನು ಸುವ್ಯವಸ್ಥೆ) ಎಸ್​.ಎಸ್​.ಶ್ರೀವಾಸ್ತವ, ವಿಶೇಷ ಪೊಲೀಸ್​ ಆಯುಕ್ತ (ಅಪರಾಧ) ಸತೀಶ್​ ಗೊಲ್ಚ ಮತ್ತು ಈಶಾನ್ಯ ದೆಹಲಿಯ ಡೆಪ್ಯುಟಿ ಪೊಲೀಸ್​ ಆಯುಕ್ತ ವೇದ್​ ಪ್ರಕಾಶ್​ ಸೂರ್ಯ ಅವರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲದೆ, ಬೆಳಗ್ಗೆಯಿಂದ ನಡೆದಿರುವ ಹೊಸ ಬೆಳವಣಿಗೆಯನ್ನು ಅವಲೋಕಿಸಿದರು. ಕಳೆದ ರಾತ್ರಿ ದೋವಲ್​ ಅವರು ಸೀಲಾಂಪುರ್​, ಜಾಫರಾಬಾದ್​, ಮೌಜ್​ಪುರ್​ ಮತ್ತು ಗೋಕುಲ್​ಪುರಿ ಚೌಕ್​ಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ಜನರು ದೆಹಲಿ ಪೊಲೀಸರ ಉದ್ದೇಶಗಳು ಮತ್ತು ಸಾಮರ್ಥ್ಯದ ಮೇಲೆ ಅನುಮಾನವಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಸಮವಸ್ತ್ರದಲ್ಲಿರುವ ಪೊಲೀಸರನ್ನು ಜನರು ನಂಬಬೇಕಿದೆ ಎಂದು ಹೇಳಿದ್ದರು.(ಏಜೆನ್ಸೀಸ್​)
#WATCHDelhi: National Security Advisor (NSA) Ajit Doval interacts with the local residents of#NortheastDelhi. While speaking to a woman resident he says, "Prem ki bhaavna bana kar rakhiye. Hamara ek desh hai, hum sab ko milkar rehna hai. Desh ko mil kar aage badhana hai."pic.twitter.com/Y1tyAz2LXQ
— ANI (@ANI)February 26, 2020

#WATCHDelhi: National Security Advisor (NSA) Ajit Doval takes stock of the situation in Maujpur area of#NortheastDelhipic.twitter.com/f8Jc7LR7P0
— ANI (@ANI)February 26, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
