ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ವೈದ್ಯಕೀಯ ಕೋರ್ಸ್​ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಹಾಗೂ ಇಂಜಿನಿಯರಿಂಗ್​ ಕೋರ್ಸ್​ಗಾಗಿ ನಡೆಸುವ ಜೆಇಇ (ಮೇನ್​) ಪರೀಕ್ಷಾರ್ಥಿಗಳಿಗೆ ಅರ್ಜಿ ತಿದ್ದುಪಡಿಗೆ ಇನ್ನೊಮ್ಮೆ ಅವಕಾಶ ನೀಡಿದೆ.ಏಪ್ರಿಲ್​ 1ರಿಂದ 14ರವರೆಗೆ ಅರ್ಜಿಗಳಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಬಹುದು.
ಕೋವಿಡ್​-19 ಲಾಕ್​ಡೌನ್​ನಿಂದಾಗಿ ಅಭ್ಯರ್ಥಿಗಳು ಅರ್ಜಿಗಳಲ್ಲಿ ತಿದ್ದುಪಡಿ ಮಾಡಲು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಇನ್ನಷ್ಟು ಅವಧಿಯನ್ನು ನೀಡಲಾಗುತ್ತಿದೆ ಎಂದು ಪರೀಕ್ಷಾ ಏಜೆನ್ಸಿ ತಿಳಿಸಿದೆ. ಈ ಅವಧಿಯ ನಂತರ ಅರ್ಜಿಗಳ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಪರೀಕ್ಷಾಂಕ್ಷಿಗಳು ಅರ್ಜಿಗಳಲ್ಲಿರುವ ವಿವರವನ್ನು ತಿದದುಪಡಿ ಮಾಡಬೇಕೆಂದು ಎನ್​ಟಿಎ ಸೂಚಿಸಿದೆ. ವಿವರಗಳಿಗೆ ntaneet.nic.in, jeemain.nta.nic.in. ಸಂಪರ್ಕಿಸಬಹುದು.
ಒಟ್ಟಾರೆ ನೀಟ್​ 2020ರ ಆವೃತ್ತಿಗೆ 15,93,952 ವಿದ್ಯಾರ್ಥಿಗಳು ವೈದ್ಯ ಸೀಟು ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ, ಪ್ರತಿಷ್ಠಿತ ಇಂಜಿನಿಯರಿಂಗ್​ ಕಾಲೇಜುಗಳು ಹಾಗೂ ಐಐಟಿಗಳಲ್ಲಿ ಪ್ರವೇಶ ಬಯಸಿ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ ಎರಡೂ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಏಪ್ರಿಲ್​ 14ರ ನಂತರ ಲಾಕ್​ಡೌನ್​ ಪರಿಸ್ಥಿತಿಯನ್ನು ಅವಲೋಕಿಸಿ ನಿಗದಿತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಎನ್​ಟಿಎ ತಿಳಿಸಿದೆ.
ಜೆಇಇ (ಅಡ್ವಾನ್ಸ್​) ಕೂಡ ಮುಂದೂಡಿಕೆ:ಜೆಇಇ ಮೇನ್ಸ್​ ಪರೀಕ್ಷೆ ಮುಂದೂಡಿಕೆಯಾಘಿರುವ ಕಾರಣ ಜೆಇಇ (ಅಡ್ವಾನ್ಸ್​) ಕೂಡ ಮುಂದೂಡಲಾಗಿದೆ ಎಂದು ದೆಹಲಿ ಐಐಟಿ ಪ್ರಕಟಿಸಿದೆ. ಜೆಇಇ ಮೇನ್ಸ್​ನಲ್ಲಿ ಅರ್ಹತೆ ಪಡೆಯುವ ಅಥವಾ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಜೆಇಇ (ಅಡ್ವಾನ್ಸ್​) ನಡೆಸಲಾಗುತ್ತದೆ. ಜೆಇಇ ಮೇನ್ಸ್​ ಪರೀಕ್ಷೆ ಮುಗಿದ ಬಳಿಕ ಈ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ದೆಹಲಿ ಐಐಟಿ ತಿಳಿಸಿದೆ.
7, 8ನೇ ಕ್ಲಾಸ್​ಗೆ ಪರೀಕ್ಷೆ ಇರಲ್ಲ, ಏಪ್ರಿಲ್​ 14ರ ನಂತರ ಎಸ್​ಎಸ್ಎಲ್ಸಿ ವೇಳಾಪಟ್ಟಿ ನಿಗದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
