ಲಡಾಖ್‌:ದೇಶದಲ್ಲೇ ಮೊದಲ ಬಾರಿಗೆ ಹೈಡ್ರೋಜನ್ ಇಂಧನ ಬಸ್ ಲೇಹ್ ರಸ್ತೆಗಳಲ್ಲಿ ಓಡಾಡಲಿದ್ದು, ಸಾರ್ವಜನಿಕ ವಲಯದ ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ಇದರ ಪ್ರಾಯೋಗಿಕ ಚಾಲನೆಯನ್ನು ಕೈಗೊಂಡಿದೆ.
ಇದನ್ನೂ ಓದಿ:ಹೆರಿಗೆಯಾದ ಮಹಿಳೆಯ ಪಿತ್ತಕೋಶದಿಂದ ಸುಮಾರು 1000 ಕಲ್ಲುಗಳನ್ನು ಹೊರತೆಗೆದ ವೈದ್ಯರು..!
ಲಡಾಖ್‌ನ ಅತಿ ಎತ್ತರದ ಪ್ರದೇಶದಲ್ಲಿ ಹೈಡ್ರೋಜನ್ ಇಂಧನ ಕೇಂದ್ರ ಮತ್ತು ಸೌರ ಸ್ಥಾವರವನ್ನು ಸ್ಥಾಪಿಸುತ್ತಿರುವ ಎನ್‌ಟಿಪಿಸಿ, ಐದು ಹೈಡ್ರೋಜನ್ ಚಾಲಿತ ಬಸ್‌ಗಳನ್ನು ಲೇಹ್ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಈ ಯೋಜನೆಯೊಂದಿಗೆ NTPC ಎರಡು ಸಾಧನೆಗಳನ್ನು ಸಾಧಿಸಿದೆ.
ದೇಶದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಹೈಡ್ರೋಜನ್ ಇಂಧನ ಬಸ್ಸುಗಳ ವಾಣಿಜ್ಯ ಬಳಕೆ ಹಾಗೂ 11,500 ಅಡಿ ಎತ್ತರದಲ್ಲಿ ಕಡಿಮೆ ಆಮ್ಲಜನಕದ ಅಪರೂಪದ ವಾತಾವರಣದಲ್ಲಿ ತಂತ್ರಜ್ಞಾನವನ್ನು ಪರೀಕ್ಷಿಸಿರುವುದು ಇದೇ ಮೊದಲಾಗಿದೆ. ಮೊದಲ ಬಸ್ ಗುರುವಾರ ಲೇಹ್ ತಲುಪಿತು, ಇದು ಮೂಲತಃ ಸ್ವಾತಂತ್ರ್ಯ ದಿನದಂದು ಪ್ರಾರಂಭವಾಗಬೇಕಿತ್ತು, ಆದರೆ ಪ್ರವಾಹ ಮತ್ತು ಭೂಕುಸಿತದಂತಹ ಕೆಟ್ಟ ಹವಾಮಾನದಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ‘ಅವರು’ ನಿಮ್ಮ ಹೆಂಡತಿಯ ಹತ್ಯೆಗೈದು ಅಂತ್ಯಕ್ರಿಯೆ ಮಾಡಿದ್ದಾರೆ: ಸ್ನೇಹಿತನ ಕರೆಗೆ ಪತಿ ತತ್ತರ
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಯೋಜನೆಯಡಿ ಈ ಬಸ್​ ವಿನ್ಯಾಸಗೊಳಿಸಿಲಾಗಿದ್ದು, ಹೈಡ್ರೋಜನ್​ನ್ನು ವಾಹನಗಳಿಗೆ ಇಂಧನವಾಗಿ ಬಳಸುವುದರಿಂದ ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುವುದಲ್ಲದೆ, ನಿರ್ವಹಣಾ ಶುಲ್ಕವೂ ಕಡಿಮೆಯಾಗಲಿದೆ ಎನ್ನುತ್ತಾರೆ ತಜ್ಞರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆ ಎನ್ ಟಿಪಿಸಿ ಈ ಯೋಜನೆಗೆ ಶ್ರಮಿಸಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಇಂಧನ ಬಸ್‌ಗಳನ್ನು ಬಳಸಲಾಗುತ್ತಿದೆ. NTPC 11,562 ಅಡಿ ಎತ್ತರದಲ್ಲಿ ಗ್ರೀನ್ ಹೈಡ್ರೋಜನ್ ಮೊಬಿಲಿಟಿ ಯೋಜನೆಯ ಭಾಗವಾಗಿ 1.7 MW ಮೀಸಲಾದ ಸೌರ ಸ್ಥಾವರವನ್ನು ಸ್ಥಾಪಿಸಿದೆ. ಈ ಉದ್ದೇಶಕ್ಕಾಗಿ ಲೇಹ್ ಆಡಳಿತವು 7.5 ಎಕರೆ ಭೂಮಿಯನ್ನು ಗುತ್ತಿಗೆಗೆ ನೀಡಿತು. ಅಪರೂಪದ ಹವಾಮಾನ, ಮೈನಸ್ ಡಿಗ್ರಿ ತಾಪಮಾನದಲ್ಲಿ ಕಾರ್ಯನಿರ್ವಹಿಸಲು ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. NTPC 2032ರ ವೇಳೆಗೆ 60 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − five =
Remember me
