ನವದೆಹಲಿ:ದೇಶದಲ್ಲಿ ಸೋಮವಾರ ( ಮೇ 18)ದಿಂದ ಲಾಕ್​ಡೌನ್​ 4.0 ಶುರುವಾಗಲಿದ್ದು ಮೇ 31ರವರೆಗೆ ಜಾರಿಯಲ್ಲಿ ಇರಲಿದೆ. ನಾಲ್ಕನೇ ಹಂತದ ಲಾಕ್​ಡೌನ್ ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಬಿಡುಗಡೆ ಮಾಡಿದ್ದು, ಬಹುತೇಕ ಲಾಕ್​ಡೌನ್​ 3.0ದಲ್ಲಿನ ನಿಯಮಗಳೇ ಇವೆ.
ಈ ಹಿಂದಿನಂತೆ ದೇಶಾದ್ಯಂತ ಸಂಜೆ 7ರಿಂದ ಮುಂಜಾನೆ 7ಗಂಟೆಯವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ವಾಹನಗಳಾಗಲಿ, ವ್ಯಕ್ತಿಗಳಾಗಲೀ ಸಂಚರಿಸುವಂತಿಲ್ಲ. ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇರುತ್ತದೆ. ಆಯಾ ಜಿಲ್ಲೆಗಳು, ಪ್ರದೇಶಗಳಲ್ಲಿನ ಕೊವಿಡ್​ ಸ್ಥಿತಿಗತಿ ನೋಡಿಕೊಂಡು ಸ್ಥಳೀಯ ಆಡಳಿತಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ.65 ವರ್ಷ ಮೇಲ್ಪಟ್ಟು ಅಸ್ವಸ್ಥರಾಗಿರುವವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆ ಬಿಟ್ಟು ಹೊರಬರುವಂತಿಲ್ಲ. ವೈದ್ಯಕೀಯ ಅಗತ್ಯತೆಗಳಿಗೆ ಮಾತ್ರ ಹೊರಬರಬಹುದು.
ಇದನ್ನೂ ಓದಿ:ಲಾಕ್​ಡೌನ್​ 4.0: ಹೊಸ ಮಾರ್ಗಸೂಚಿ ಅನ್ವಯ ದೇಶದಲ್ಲಿ ಈ ಎಲ್ಲವೂ ಬಂದ್​…
ಕಂಟೇನ್​ಮೆಂಟ್ ವಲಯಗಳನ್ನು ಹೊರತು ಪಡಿಸಿದ ಏರಿಯಾಗಳಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ. ಅಂತರ ರಾಜ್ಯ ಬಸ್​, ವಾಹನ ಸಂಚಾರ ಮಾಡಬಹುದು. ಆದರೆ ಹೀಗೆ ಪ್ರಾರಂಭ ಮಾಡುವ ಮೊದಲು ಆಯಾ ರಾಜ್ಯಗಳು ಪರಸ್ಪರ ಒಪ್ಪಿರಬೇಕು.
ಒಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಒಳಗಡೆ ವಾಹನ, ಬಸ್​ಗಳ ಸಂಚಾರ ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಬಿಟ್ಟ ವಿಚಾರ. ಸ್ಥಳೀಯ ಆಡಳಿತಗಳೇ ನಿರ್ಧಾರ ಮಾಡಿಕೊಳ್ಳಬೇಕು. ಆದರೆ ಕರೊನಾ ಕಂಟೇನ್​ಮೆಂಟ್ ವಲಯಗಳಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿನ  ಕರೊನಾ ರೆಡ್​ಝೋನ್​, ಗ್ರೀನ್ ಝೋನ್​, ಆರೆಂಜ್​ ಝೋನ್​, ಕಂಟೇನ್​ಮೆಂಟ್ ವಲಯಗಳನ್ನು ಗುರುತಿಸಿಕೊಳ್ಳಬೇಕು. ಅಲ್ಲಿ ಈ ಹಿಂದಿನ ನಿಯಮಗಳೇ ಅನ್ವಯ ಆಗುತ್ತವೆ.  ಸ್ಥಳೀಯ ಆಡಳಿತಗಳೇ ನಿರ್ಧಾರ ಮಾಡಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ಕೇಂದ್ರ ಗೃಹ ಸಚಿವಾಲಯ, ಆರೋಗ್ಯ ಸೇತು ಆ್ಯಪ್​ನ್ನು ಕಡ್ಡಾಯವಾಗಿ ಡೌನ್​ ಲೋಡ್​ ಮಾಡಿಕೊಳ್ಳಲು ಮಾರ್ಗಸೂಚಿಯಲ್ಲಿಯೂ ತಿಳಿಸಿದೆ.
ಇದನ್ನೂ ಓದಿ:ದೇಶದಲ್ಲಿ ಮೇ 31ರವರೆಗೂ ಲಾಕ್​ಡೌನ್​…
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ 2005ರ ಕಾಯ್ದೆ ಅನ್ವಯ ಲಾಕ್​ಡೌನ್​ 4.0 ಮಾರ್ಗಸೂಚಿ ರಚನೆಯಾಗಿದ್ದು, ಇದರಲ್ಲಿ ಹೇಳಲಾದ ಯಾವುದೇ ನಿಯಮವನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:16 − 5 =
Remember me
