ನವದೆಹಲಿ:ವಿಶ್ವ ಹಿಂದೂ ಪರಿಷತ್​ ಆಯೋಜಿಸಿದ್ದ ಬ್ರಜ್ ಮಂಡಲ್ ಯಾತ್ರೆ ಮತ್ತೆ ಮುಂದುವರಿಯಲಿದೆ. ಗಲಭೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಯಾತ್ರೆಯನ್ನು ಇದೇ ಆಗಸ್ಟ್ 28ರಿಂದ ಮುಂದುವರಿಸಲು ಇಂದು ನಿರ್ಧಾರ ತಳೆಯಲಾಗಿದೆ.
ಹರ್ಯಾಣದ ಪೊಂಡ್ರಿ ಗ್ರಾಮದಲ್ಲಿ ಇಂದು ವಿಶ್ವ ಹಿಂದೂ ಪರಿಷತ್​ನಿಂದ ನಡೆದ ಮಹಾಪಂಚಾಯತ್​ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ನುಹ್​ನ ನಲ್ಹರ್​ನಲ್ಲಿ ಆ. 28ರಂದು ಮರು ಆರಂಭಗೊಳ್ಳಲಿರುವ ಈ ಬ್ರಜ್ ಮಂಡಲ್ ಯಾತ್ರೆ ಫಿರೋಜ್​ಪುರ ಝಿರ್ಕಾಸ್​ನ ಝಿರ್ ಮತ್ತು ಸಿಂಗಾರ್ ದೇವಸ್ಥಾನಗಳ ಮೂಲಕ ಮುಂದುವರಿಯಲಿದೆ.
ವಿಶ್ವ ಹಿಂದೂ ಪರಿಷತ್ ಆರಂಭಿಸಿದ್ದ ಬ್ರಜ್ ಮಂಡಲ್ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಜು. 31 ನುಹ್ ಬಳಿ ನಡೆದ ಗಲಭೆಯಲ್ಲಿ ಇಬ್ಬರು ಹೋಮ್​ಗಾರ್ಡ್ಸ್​ ಮತ್ತು ಒಬ್ಬ ಕ್ಲರ್ಕ್ ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದು, ಪರಿಸ್ಥಿತಿ ಪಕ್ಷುಬ್ಧಗೊಂಡಿದ್ದರಿಂದ ಯಾತ್ರೆ ಸ್ಥಗಿತಗೊಂಡಿತ್ತು. –ಏಜೆನ್ಸೀಸ್
ರಾಹುಲ್ ಗಾಂಧಿಗೆ ಹಾಲಿವುಡ್​​ನಿಂದ ಪ್ರಪೋಸಲ್ಸ್​ ಇವೆ, ಅವರ್ಯಾಕೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಡ್ತಾರೆ?: ಸಾರಿಕಾ ಪಾಸ್ವಾನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
