ಜೈಪುರ:ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ತಾರ್ಕಿಕ ಹಂತ ತಲುಪಿದ್ದು, ಸಚಿನ್​ ಪೈಲಟ್​ ಮತ್ತು ಬಳಗವನ್ನು ಪಕ್ಷದ ಮತ್ತು ಸರ್ಕಾರದ ಪ್ರಮುಖ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಲಾಗಿದೆ. ಈ ನಡುವೆ ಸಚಿನ್ ಪೈಲಟ್​ ಬುಧವಾರ ನಡೆಸುವುದಾಗಿ ಘೋಷಿಸಿರುವ ಸುದ್ದಿಗೋಷ್ಠಿಯ ಕಡೆಗೆ ಎಲ್ಲರ ಗಮನನೆಟ್ಟಿದೆ. ಏತನ್ಮಧ್ಯೆ, ಬಣಗಳ ಬಲ ಪ್ರದರ್ಶನದ ಕಾರಣ ಗೆಹ್ಲೋಟ್ ಸರ್ಕಾರದ ಅಸ್ತಿತ್ವ ಪ್ರಶ್ನಿಸುವಂತೆ ನಂಬರ್​ ಗೇಮ್ ಶುರುವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಅಶೋಕ್​ ಗೆಹ್ಲೋಟ್​ ಸರ್ಕಾರ ಬಹಳ ಕಡಿಮೆ ಅಂತರದ ಬಹುಮತವನ್ನು ಹೊಂದಿದೆ. ಈ ನಂಬರ್​ ಗೇಮ್​ ಲೆಕ್ಕಾಚಾರದ ಚಿತ್ರಣ ಹೀಗಿದೆ ನೋಡಿ:ರಾಜಸ್ಥಾನದ ವಿಧಾಸಭೆಯ ಸದಸ್ಯ ಬಲ 200ಸರಳ ಬಹುಮತಕ್ಕೆ ಬೇಕಾದ ಸದಸ್ಯ ಬಲ 101ಸ್ಪೀಕರ್ ಸೇರಿ ಕಾಂಗ್ರೆಸ್ ಶಾಸಕರ ಸಂಖ್ಯಾಬಲ 107
ಬದಲಾದ ಸನ್ನಿವೇಶದಲ್ಲಿ ಜೈಪುರದ ಫೇರ್​ಮೋಂಟ್​ ಹೋಟೆಲ್​ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾದ ಶಾಸಕರ ಸಂಖ್ಯೆ ಗೆಹ್ಲೋಟ್ ಅವರನ್ನೂ ಸೇರಿಸಿ 88.ಗೆಹ್ಲೋಟ್ ಸರ್ಕಾರಕ್ಕೆ ಭಾರತೀಯ ಟ್ರೈಬಲ್ ಪಾರ್ಟಿಯ ಇಬ್ಬರು, ಸಿಪಿಐ(ಎಂ)ನ ಒಬ್ಬ ಶಾಸಕ ಮತ್ತು 10 ಪಕ್ಷೇತರರ ಬೆಂಬಲವಿದೆ. ಹೀಗೆ ಒಟ್ಟು ಸದಸ್ಯ ಬಲ 101.ರಾಜ್ಯಪಾಲರನ್ನು ಮಂಗಳವಾರ ಭೇಟಿ ಮಾಡಿರುವ ಅಶೋಕ್ ಗೆಹ್ಲೋಟ್ ಸಲ್ಲಿಸಿದ ಪಟ್ಟಿಯ ಪ್ರಕಾರ ಸರ್ಕಾರಕ್ಕೆ ಇರುವ ಶಾಸಕರ ಬೆಂಬಲ 104.ಈ ನಡುವೆ, ಫೇರ್​ಮೋಂಟ್ ಸಭೆಯ ನಂತರ ಹಿಂದಿರುಗಿದ ಬಿಟಿಪಿಯ ಇಬ್ಬರು ಶಾಸಕರ ನಿಲುವು ಬದಲಾಗಿದ್ದು, ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಸರಿಯಾದ ಸಮಯದಲ್ಲಿ ತಿಳಿಸುತ್ತೇವೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ನಿರ್ಧಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ:ಹಾಸಿಗೆ ಮಾರಾಟಕ್ಕೆ ಹೊರಟು 91,000 ರೂಪಾಯಿ ಕಳ್ಕೊಂಡ್ರು..
ಇದೇ ರೀತಿ ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡಿದ್ದ ನಾಲ್ವರು ಶಾಸಕರು ಭಾನುವಾರ ಬಣ ಬದಲಾಯಿಸಿ ಗೆಹ್ಲೋಟ್​ಗೆ ಬೆಂಬಲ ಘೋಷಿಸಿದ್ದಾರೆ. ಈ ಬೆಳವಣಿಗೆ ನಡುವೆ, ಸಚಿನ್ ಪೈಲಟ್ ಸೇರಿ ಅವರೊಂದಿಗೆ ಇರುವ ಕಾಂಗ್ರೆಸ್ ಶಾಸಕರ ಸಂಖ್ಯಾ ಬಲ 19. ಮೂವರು ಪಕ್ಷೇತರ ಶಾಸಕರ ಬೆಂಬಲವಿದೆ.
ಹೀಗೂ ಆಗಬಹುದು: ಸಚಿನ್ ಪೈಲಟ್​ ಅವರೂ ಸೇರಿ 19 ಶಾಸಕರನ್ನು ಅನರ್ಹಗೊಳಿಸಿದರೆ, ಆಗ ಸದನದ ಸದಸ್ಯ ಬಲ 181ಕ್ಕೆ ಕುಸಿಯಲಿದೆ. ಬಹುಮತಕ್ಕೆ 91 ಸಂಖ್ಯಾ ಬಲ ಇದ್ದರೆ ಸಾಕು. ಈ ದಾರಿಯೂ ಗೆಹ್ಲೋಟ್ ಮುಂದಿದೆ. ಹಾಗೇನಾದರೂ ಆದರೆ, ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸಂಖ್ಯಾಬಲ 75. ಇವರು ಪ್ರಯತ್ನಿಸಿ ಪೈಲಟ್ ಜತೆಗಿರುವ ಮೂವರು ಪಕ್ಷೇತರರು, 10 ಇತರೆ ಪಕ್ಷೇತರು, ಇಬ್ಬರು ಸಿಪಿಐಎಂ ಸದಸ್ಯರು, ಇಬ್ಬರು ಬಿಟಿಪಿ ಸದಸ್ಯರ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಗೆಹ್ಲೋಟ್​ಗೆ ಸಂಕಷ್ಟ ಶುರುವಾಗಲಿದೆ. (ಏಜೆನ್ಸೀಸ್)
ಮದುವೆ ನಿರಾಕರಿಸಿದಕ್ಕೆ ಕುಪಿತನಾಗಿ ಪ್ರೇಯಸಿಯನ್ನು ಇರಿದು ಕೊಂದೇ ಬಿಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + sixteen =
Remember me
