ನವದೆಹಲಿ:ಕರೊನಾ ವೈರಸ್​ ದಿನವೊಂದರಲ್ಲಿ ಎಷ್ಟು ಮಂದಿಗೆ ಹರಡುತ್ತಿದೆ ಎಂದೇ ಹೇಳಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲೂ ಕೂಡ ವೇಗವಾಗಿ ಹಬ್ಬುತ್ತಿದೆ.
ಇಂದು ಮಧ್ಯಾಹ್ನದ ವೇಳೆ ಭಾರತದಲ್ಲಿ ಒಟ್ಟು 147 ಮಂದಿಗೆ ಕರೊನಾ ವೈರಸ್​ ಇದೆ ಎಂದು ವರದಿಯಾಗಿತ್ತು. ಆ ಸಂಖ್ಯೆ ಸಂಜೆಯಷ್ಟರಲ್ಲಿ ಹೆಚ್ಚಾಗಿದೆ. ಸದ್ಯ 151 ಮಂದಿಗೆ ಸೋಂಕು ಇದೆ. ಈ 151 ಜನರಲ್ಲಿ 126 ಮಂದಿ ಭಾರತೀಯರಾಗಿದ್ದು, ಉಳಿದ 25 ಜನರು ವಿದೇಶಿಗರು.
ಸಂಜೆ ವೇಳೆ ಮಹಾರಾಷ್ಟ್ರದಲ್ಲಿ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ 147 ಇದ್ದ ಸೋಂಕು ಪೀಡಿತರ ಸಂಖ್ಯೆ 151ಕ್ಕೆ ಏರಿತು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯ ಇಲಾಖೆ ನೀಡಿದ ಅಂಕಿಅಂಶಗಳ ಪ್ರಕಾರ ಸದ್ಯ ಮಹಾರಾಷ್ಟ್ರದಲ್ಲೇ ಅತಿಹೆಚ್ಚು ಮಂದಿ ಅಂದರೆ 42 ಜನ ಸೋಂಕಿತರು ಇದ್ದಾರೆ. ಕೇರಳದಲ್ಲಿ 27 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಎರಡನೇ ಸ್ಥಾನದಲ್ಲಿದೆ. ಅದಾದ ಬಳಿಕ ಉತ್ತರ ಪ್ರದೇಶದಲ್ಲಿ 16 ಮತ್ತು ಕರ್ನಾಟಕದಲ್ಲಿ 11 ಕರೊನಾ ವೈರಸ್​ ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಓರ್ವ ವಿದೇಶಿಗ ಸೇರಿ ಒಟ್ಟು 10 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಹಾಗೆ ಕರೊನಾ ಪಾಸಿಟಿವ್​ ವರದಿ ಬಂದ ರೋಗಿಗಳ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾದ ಸುಮಾರು 5700 ಜನರ ಮೇಲೆ ವೈದ್ಯಕೀಯ ನಿಗಾ ಇಡಲಾಗಿದೆ ಎಂದು ಇಲಾಖೆ ತಿಳಿಸಿದೆ. (ಏಜೆನ್ಸೀಸ್​)
ಭಾರತೀಯರ ನಿದ್ದೆ ಕಸಿಯುತ್ತಿರೋದು ಕರೊನಾ ವೈರಸ್​ Covid19 ಅಲ್ಲ; ಮತ್ತೇನು?

ಇಟಲಿಯ ನಗರದ ಚಿತಾಗಾರದಲ್ಲಿ ದಿನದ 24 ಗಂಟೆಯೂ ಕೆಲಸ: ಪತ್ರಿಕೆಯ 10 ಪುಟಗಳಲ್ಲಿ ಶ್ರದ್ಧಾಂಜಲಿ ಜಾಹೀರಾತು- ಇದು ಕರೊನಾ ಎಫೆಕ್ಟ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 4 =
Remember me
