ನವದೆಹಲಿ:ದೇಶದ ಗಡಿಭಾಗದಲ್ಲಿ ಈ ವರ್ಷ ನಡೆದ ಎನ್​ಕೌಂಟರ್​ಗಳು ಹಾಗೂ ಉಗ್ರರ ಹತ್ಯೆಗಳ ಅಂಕಿ-ಅಂಶ ಬಹಿರಂಗಗೊಂಡಿದ್ದು, ದೇಶದ ಸಶಸ್ತ್ರ ಪಡೆಗಳು ದೊಡ್ಡ ಸಂಖ್ಯೆಯಲ್ಲೇ ದೇಶದ್ರೋಹಿಗಳನ್ನು ಸದೆಬಡಿದಿದ್ದಾರೆ. ಈ ವರ್ಷದಲ್ಲಿ ಅಕ್ಟೋಬರ್ ವರೆಗೆ ನಡೆದ ಎನ್​ಕೌಂಟರ್ ಮತ್ತು ಉಗ್ರರ ಹತ್ಯೆಗಳ ವಿವರ ಹೊರಬಿದ್ದಿದೆ.
ಲಭ್ಯ ಮಾಹಿತಿ ಪ್ರಕಾರ 2020ರಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ 200 ಉಗ್ರರನ್ನು ಯೋಧರು ಇನ್ನಿಲ್ಲವಾಗಿಸಿದ್ದಾರೆ. ಕೇಂದ್ರ ಮೀಸಲು ಪೊಲೀಸ್​ ಪಡೆ, ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಈ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದು, ಜೂನ್​ನಲ್ಲಿ ಅತಿಹೆಚ್ಚು ಎಂದರೆ 49 ಉಗ್ರರನ್ನು ಬಲಿ ಪಡೆಯಲಾಗಿದೆ. ಏಪ್ರಿಲ್​ನಲ್ಲಿ 28 ಹಾಗೂ ಜುಲೈ ಮತ್ತು ಅಕ್ಟೋಬರ್​​ನಲ್ಲಿ ತಲಾ 21 ಉಗ್ರರು ಹತರಾಗಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಅತಿಹೆಚ್ಚು ಎನ್​ಕೌಂಟರ್​ಗಳಾಗಿದ್ದು, ಶೋಪಿಯನ್ ಮತ್ತು ಪುಲ್ವಾಮಾ ಎನ್​ಕೌಂಟರ್ ಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿವೆ. ಪಾಕ್​ ಸೇನಾ ಪಡೆ ಬೆಂಬಲಿತ ಹಿಜ್​​ಬುಲ್​ ಮುಜಾಹಿದೀನ್​ನ 72 ಉಗ್ರರು ಭಾರತದ ಸಶಸ್ತ್ರ ಪಡೆಗಳಿಂದ ಹತರಾಗಿದ್ದಾರೆ. ಹಾಗೇ ಎಲ್​ಇಟಿನ 59, ಜೈಷೇ ಮಹಮೊದ್​ನ 37 ಉಗ್ರರು ಹತರಾಗಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
