ನವದೆಹಲಿ:ಈಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವದೇಶ ವಸ್ತುಗಳನ್ನು ಬಳಕೆ ಮಾಡುವಂತೆ ಹಾಗೂ ಸಾಧ್ಯವಾದಷ್ಟು ಸ್ವದೇಶಿ ಉತ್ಪನ್ನಗಳನ್ನೇ ತಯಾರು ಮಾಡುವಂತೆ ಕರೆ ಕೊಟ್ಟಿದ್ದರು. ಈ ಕರೆಯ ಬೆನ್ನಲ್ಲೇ ಇದೀಗ ಭಾರತ ಇತಿಹಾಸವನ್ನೇ ಸೃಷ್ಟಿಸಿಬಿಟ್ಟಿದೆ. ಕರೊನಾ ಮಹಾಮಾರಿಯನ್ನು ದೇಶದಿಂದ ತೊಲಗಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿಗೆ ರಕ್ಷಣಾ ಕವಚ ನೀಡುವ ಹೊಸ ಸಾಹಸಕ್ಕೆ ಕೈಹಾಕಿದ್ದ ಭಾರತ ಅಲ್ಪ ಅವಧಿಯಲ್ಲಿಯೇ ಯಶಸ್ಸನ್ನೂ ಸಾಧಿಸಿಬಿಟ್ಟಿದೆ!
ಹೌದು. ಕರೊನಾ ವೈರಸ್​ ಭಾರತದ ಮೇಲೆ ದಾಳಿ ಮಾಡಿದಾಗಿನಿಂದಲೂ ಈ ವೈರಸ್​ಗೆ ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳಿಗೆ ಭಾರತ ಸೇರಿದಂತೆ ಹಲವು ದೇಶಗಳು ಕರೊನಾ ತವರು ಚೀನಾದ ಮೇಲೆಯೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದರಲ್ಲಿಯೂ ವೈದ್ಯರಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಪಿಪಿಇ ಕಿಟ್​ಗೂ (ವೈಯಕ್ತಿಕ ರಕ್ಷಣಾ ಕವಚ) ಚೀನಾದ ಮೇಲೆ ಅವಲಂಬನೆ ಹೆಚ್ಚಿತ್ತು.
ಇದನ್ನೂ ಓದಿ:ಸರ್ಕಾರದ ವಿರುದ್ಧ ಮಾತನಾಡಿದರೆ ಕಠಿಣ ಶಿಕ್ಷೆ : ಹೊರಟಿದೆ ಹೊಸ ಆದೇಶ
ಇದೇ ಕಾರಣಕ್ಕೆ ಚೀನಾ ತನ್ನ ಕುತಂತ್ರ ಬುದ್ಧಿ ತೋರಿ ಕಳಪೆ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ವಿವಿಧ ದೇಶಗಳಿಗೆ ಸರಬರಾಜು ಮಾಡುತ್ತಿದೆ ಎಂಬ ಆರೋಪಗಳೂ ಬಂದಿವೆ. ಮಾತ್ರವಲ್ಲದೇ ಇದಕ್ಕೆ ಅಧಿಕ ಶುಲ್ಕವನ್ನೂ ವಿಧಿಸಬೇಕಾದ ಅನಿವಾರ್ಯತೆ ಬೇರೆ ಬೇರೆ ದೇಶಗಳಿಗೆ ಅನಿವಾರ್ಯವಾಗಿದೆ.
ಆದರೆ ಚೀನಾಕ್ಕೆ ಸೆಡ್ಡು ಹೊಡೆದಿರುವ ಭಾರತ, ಅತ್ಯಲ್ಪ ಅವಧಿಯಲ್ಲಿಯೇ, ಅತ್ಯುತ್ತಮ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ತಯಾರಿಸಿದೆ. ಅದರ ಸಂಖ್ಯೆ ಇದೀಗ ಒಂದು ಕೋಟಿಯನ್ನು ಮೀರಿದೆ. ಈ ಕುರಿತು ಜವಳಿ ಸಚಿವಾಲಯ ಟ್ವೀಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ 1 ಕೋಟಿ ಪಿಪಿಇ- ರಕ್ಷ ಕವಚಗಳನ್ನು ಉತ್ಪಾದಿಸಲಾಗಿದೆ. ಆತ್ಮ ನಿರ್ಭರ್ ಭಾರತ್ ಅಭಿಯಾನದ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ ಎಂದು ಜವಳಿ ಸಚಿವಾಲಯ ಟ್ವೀಟ್​ನಲ್ಲಿ ಹೇಳಲಾಗಿದೆ. ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಬ್ಬಬ್ಬಾ! ಇದು ರೆಡ್​ಝೋನ್​ ಕುದುರೆ: ಹತ್ತಿರ ಹೋದರೆ ಭಾರಿ ಡೇಂಜರ್​!
ಎರಡು ತಿಂಗಳೊಳಗೆ ಪಿಪಿಇ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕಳೆದ ವಾರವಷ್ಟೇ ಸರ್ಕಾರ ಹೇಳಿತ್ತು. ಅದನ್ನೀಗ ಸಾಧಿಸಿ ತೋರಿಸಿದೆ. ಸದ್ಯ ಈ ಕಿಟ್​ ತಯಾರಿಕೆಯಲ್ಲಿ ಚೀನಾ ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿದೆ.
Under the able leadership of Hon’ble Prime Minister@narendramodiJi total number of PPE Coveralls produced in India has crossed 1 crore today. A significant landmark towards the vision of#AatmaNirbharBharat.@smritiirani#MakeInIndia#VocalForLocalpic.twitter.com/2UrcsAPWMB
— Ministry of Textiles (@TexMinIndia)May 27, 2020

ಆಪ್ತ ಸಲಹೆ: ಗುರಿಗಳು ಸಾಕಷ್ಟಿವೆ, ಓದಲು ಆಗುತ್ತಲೇ ಇಲ್ಲ, ಇದಕ್ಕೆ ಕಾರಣವೇನು? ಪರಿಹಾರವೇನು?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one + ten =
Remember me
