ಇಂದೋರ್​:ಪ್ರೇಮವೈಫಲ್ಯದ ನೋವಿನಿಂದ ಹೊರಬರಲು, ಪ್ರೇಮಿಯನ್ನು ಮರೆಯಲು ಭಗ್ನಪ್ರೇಮಿಗಳು ನಾನಾ ಕಸರತ್ತು ಮಾಡುತ್ತಾರೆ. ಅದೇ ಥರ ಇಲ್ಲೊಬ್ಬಳು ನರ್ಸ್​ ತನ್ನ ಪ್ರೇಮವೈಫಲ್ಯ ಮರೆಯಲು ಅರಿವಳಿಕೆ ಚುಚ್ಚಮದ್ದು ಚುಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ಪೂಜಾ ಗಂಜನ್​ (27) ಅರಿವಳಿಕೆ ಚುಚ್ಚುಮದ್ದು ತೆಗೆದುಕೊಂಡ ನರ್ಸ್. ಪ್ರೇಮವೈಫಲ್ಯಕ್ಕೆ ಒಳಗಾಗಿದ್ದ ಈಕೆ ಆ ನೋವಿನಿಂದ ಹೊರಬರಲು, ಪ್ರಿಯತಮನನ್ನು ಮರೆಯಲು ಅನಸ್ತೇಷಿಯಾವನ್ನು ಓವರ್​ಡೋಸ್​ ಆಗಿ ಪಡೆದಿದ್ದಳು.
ಅನಸ್ತೇಷಿಯಾ ಪಡೆಯುವ ಮೊದಲು ಆಕೆ ಡೆತ್​ನೋಟ್ ಬರೆದಿಟ್ಟಿದ್ದು, ಆಸ್ಪತ್ರೆಯ ಸಹೋದ್ಯೋಗಿಯೊಂದಿಗೆ ಸಂಬಂಧ ಇರುವುದನ್ನು ತಿಳಿಸಿದ್ದಾಳೆ. ಆದರೆ ತಾನು ಪ್ರೀತಿಸುತ್ತಿದ್ದವ ಬೇರೆ ಮೆಡಿಕಲ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದಲ್ಲದೆ, ಇನ್ನೊಬ್ಬಳನ್ನು ಮದುವೆಯಾದ ಎಂಬುದನ್ನೂ ತಿಳಿಸಿದ್ದಾಳೆ. ತನಗೆ ಬೇರೆಯವರೊಂದಿಗೆ ಮದುವೆ ನಿಗದಿಯಾಗಿದೆ, ನಾವಿಬ್ಬರು ಮದುವೆ ಆಗಲು ಆಗುವುದಿಲ್ಲ ಎಂಬುದನ್ನು ಮೊದಲೇ ಹೇಳಿದ್ದೆ ಎಂಬುದಾಗಿ ಆರೋಪಿತ ಪ್ರಿಯಕರ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
‘ಉತ್ತಮ ವಿಲನ್’​: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!

ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
