ಭುವನೇಶ್ವರ:ಯಾರ್ಯಾರೋ ಏನೇನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೇಳಿರುತ್ತೀರಿ, ಕಂಡಿರುತ್ತೀರಿ. ಆದರೆ ಇದು ಬಹುಶಃ ಅತ್ಯಪರೂಪದ ಪ್ರಕರಣ. ಇಲ್ಲೊಬ್ಬಳು ನರ್ಸಿಂಗ್ ವಿದ್ಯಾರ್ಥಿನಿ ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
19 ವರ್ಷದ ಈ ಯುವತಿ ತಾನು ನೆಲೆಸಿದ್ದ ಹಾಸ್ಟೆಲ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಡಿಶಾದ ಬೊಲಂಗಿರ್ ಜಿಲ್ಲೆಯ ಜಮುಕೊಲಿ ಎಂಬಲ್ಲಿರುವ ಖಾಸಗಿ ಹಾಸ್ಟೆಲ್​ನಲ್ಲಿ ಈ ಪ್ರಕರಣ ನಡೆದಿದೆ. ಭಾನುವಾರ ರಾತ್ರಿ ಹಾಸ್ಟೆಲ್​​ ರೂಮ್​ನಲ್ಲಿನ ಸೀಲಿಂಗ್ ಫ್ಯಾನ್​ಗೆ ಈಕೆ ನೇಣು ಬಿಗಿದುಕೊಂಡಿದ್ದಳು.
ಕಳೆದ ಕೆಲವು ದಿನಗಳಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲ. ಅದಕ್ಕಾಗಿ ಸಾಯಲು ನಿರ್ಧರಿಸಿದ್ದಾಗಿ ಬರೆದಿದ್ದ ಡೆತ್​ನೋಟ್​ ರೂಮ್​ನಲ್ಲಿ ಸಿಕ್ಕಿದೆ. ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ ಎಂದು ಹೇಳಿರುವ ಈಕೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮನೆಯವರು ಹಾಗೂ ಸ್ನೇಹಿತರ ಕ್ಷಮೆಯನ್ನೂ ಕೋರಿದ್ದಾಳೆ. ಫೊರೆನ್ಸಿಕ್ ಪರಿಣತರು ಕೈಬರಹವನ್ನು ಪರಿಶೀಲಿಸಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈಕೆ ಎಲ್ಲರೂ ನಿದ್ರಿಸುತ್ತಿರುವಾಗ ರಾತ್ರಿ ಹಾಸ್ಟೆಲ್​ನಲ್ಲಿ ಓಡಾಡುತ್ತಿದ್ದಳು. ನಿದ್ರೆ ಬರದ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈಕೆಯನ್ನು ಮನೆಗೆ ಕರೆದೊಯ್ಯುವಂತೆ ಪಾಲಕರಿಗೆ ಶನಿವಾರವೇ ತಿಳಿಸಲಾಗಿತ್ತು ಎಂದು ಹಾಸ್ಟೆಲ್​ ನಿರ್ವಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. –ಏಜೆನ್ಸೀಸ್
62 ವರ್ಷಗಳ ಹಿಂದೆ ಕಳವಾಗಿದ್ದ ನಟರಾಜ ಮೂರ್ತಿ ನ್ಯೂಯಾರ್ಕ್​ನಲ್ಲಿ ಪತ್ತೆ!
18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
