ನವದೆಹಲಿ:ಟೆಕ್ ದೈತ್ಯ ಕಂಪನಿಗಳಾದ ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಅನ್ನು ಮೀರಿಸಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಮಾರ್ಪಟ್ಟಿದೆ ಎನ್​ವಿಡಿಯಾ (Nvidia). ಷೇರುಗಳ ಬೆಲೆಯಲ್ಲಿ ಅಭೂತಪೂರ್ವ ಏರಿಕೆಯಿಂದಾಗಿ ಎನ್​ವಿಡಿಯಾ ಮೈಲಿಗಲ್ಲು ಮುಟ್ಟಿದೆ.
ಎನ್​ವಿಡಿಯಾ ಷೇರುಗಳ ಬೆಲೆ ಮಂಗಳವಾರ ಅಂದಾಜು 3.5% ರಷ್ಟು ಏರಿಕೆ ಕಂಡಿವೆ. ಈ ಮೂಲಕ ಈ ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 3.34 ಲಕ್ಷ ಕೋಟಿ ಡಾಲರ್​ಗೆ (278 ಲಕ್ಷ ಕೋಟಿ ರೂಪಾಯಿ) ಏರಿಕೆಯಾಗಿದೆ. ಈ ಜಿಗಿತದ ಮೂಲಕ ಟೆಕ್​ ಕಂಪನಿಗಳಲ್ಲಿ ಉನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಮೈಕ್ರೋಸಾಫ್ಟ್ ಮತ್ತು ಆ್ಯಪಲ್ ಅನ್ನು ಎನ್​ವಿಡಿಯಾ ಹಿಂದಿಕ್ಕಿದೆ.
ಎನ್​ವಿಡಿಯಾ ಮಾರುಕಟ್ಟೆ ಮೌಲ್ಯದಲ್ಲಿನ ಅಭೂತಪೂರ್ವ ಏರಿಕೆಯು ಪ್ರಾಥಮಿಕವಾಗಿ ಅದರ ಎಐ ಆಪ್ಟಿಮೈಸ್ಡ್ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಉತ್ತೇಜಿಸಲ್ಪಟ್ಟಿದೆ. ಈ ಕಂಪನಿಯ ಷೇರುಗಳ ಬೆಲೆ ಈ ವರ್ಷವೊಂದರಲ್ಲೇ 170% ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿವೆ, ಅಕ್ಟೋಬರ್ 2022ರಲ್ಲಿ ಕನಿಷ್ಠ ಬೆಲೆ ಮಟ್ಟದಿಂದ ಈ ಕಂಪನಿಯ ಷೇರು ಬೆಲೆ ಅಂದಾಜು 1,100% ರಷ್ಟು ಏರಿಕೆಯಾಗಿದೆ.
ಅಸಾಧಾರಣ ಗಳಿಕೆಗಳು ಮತ್ತು ಎಐ (ಆರ್ಟಿಫಿಷಿಯಲ್​ ಇಂಟಲಿಜೆನ್ಸ್​) ಕುರಿತು ಬೆಳೆಯುತ್ತಿರುವ ಹೂಡಿಕೆದಾರರ ಉತ್ಸಾಹವು ಕಂಪನಿಯ ಮೌಲ್ಯ ಹೆಚ್ಚಿಸಿದೆ. ಎನ್​ವಿಡಿಯಾದ ಮಾರುಕಟ್ಟೆ ಮೌಲ್ಯವು ಕೇವಲ 96 ದಿನಗಳಲ್ಲಿ 2 ಲಕ್ಷ ಕೋಟಿ ಡಾಲರ್​ನಿಂದ 3 ಲಕ್ಷ ಕೋಟಿ ಡಾಲರ್​ಗೆ ಏರಿದೆ.
ಇದೇ ಸಾಧನೆ ಮಾಡಲು ಮೈಕ್ರೋಸಾಫ್ಟ್ 945 ದಿನಗಳನ್ನು ಮತ್ತು ಆ್ಯಪಲ್ 1,044 ದಿನಗಳನ್ನು ತೆಗೆದುಕೊಂಡಿವೆ ಎನ್ನುತ್ತದೆ ಬೆಸ್ಪೋಕ್ ಇನ್ವೆಸ್ಟ್ಮೆಂಟ್ ಸಂಸ್ಥೆ.
1925 ರಿಂದ ಕೇವಲ 11 ಅಮೆರಿಕ ಕಂಪನಿಗಳು ಮಾರುಕಟ್ಟೆ ಮೌಲ್ಯದಲ್ಲಿ ಅಗ್ರ ಸ್ಥಾನ ಪಡೆದಿವೆ. ಉದಾಹರಣೆಗೆ, ಮೈಕ್ರೋಸಾಫ್ಟ್ 1990 ರ ದಶಕದ ಅಂತ್ಯದಲ್ಲಿ ಮೊದಲ ಸ್ಥಾನ ಗಳಿಸಿತು. ಆದರೆ ಕಳೆದ ದಶಕದಲ್ಲಿ ಬಲವಾಗಿ ಮತ್ತೆ ಮುಂಚೂಣಿಗೆ ಬರುವ ಮೊದಲು ಡಾಟ್​ಕಾಮ್​ ಗುಳ್ಳೆ ಒಡೆದ ಹಿನ್ನೆಲೆಯಲ್ಲಿ ಹಿನ್ನಡೆ ಕಂಡಿತ್ತು.
ಎಕ್ಸಾನ್ ಮೊಬಿಲ್ ಕಂಪನಿಯು ಒಮ್ಮೆ ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಯಾಗಿತ್ತು. ತೈಲ ಬೆಲೆಗಳ ಕುಸಿತದಿಂದಾಗಿ ಇದರ ಷೇರುಗಳ ಬೆಲೆ ಕುಸಿಯಿತು.
ಎನ್​ವಿಡಿಯಾದ ಅಸಾಧಾರಣ ಕಾರ್ಯಕ್ಷಮತೆಯು ಅದರ ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಿಂದ ಗೋಚರಿಸುತ್ತದೆ. ಇದರ ಆದಾಯವು 26 ಶತಕೋಟಿ ಡಾಲರ್​ ಆಗಿದ್ದು, ಮೂರು ಪಟ್ಟು ಹೆಚ್ಚಾಗಿದೆ. ನಿವ್ವಳ ಲಾಭ 14.9 ಶತಕೋಟಿ ಡಾಲರ್​ ಆಗಿದ್ದು, ಏಳು ಪಟ್ಟು ಹೆಚ್ಚಾಗಿದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯವು 120 ಶತಕೋಟಿ ಡಾಲರ್ ಆಗಿ, ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. 2026 ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ 33% ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ,
ಎನ್​ವಿಡಿಯಾದ ಮಾತ್ರವಲ್ಲದೆ, ಸೂಪರ್ ಮೈಕ್ರೋ ಕಂಪ್ಯೂಟರ್ ಮತ್ತು ಆರ್ಮ್ ಹೋಲ್ಡಿಂಗ್ಸ್‌ನಂತಹ ಇತರ ತಂತ್ರಜ್ಞಾನ ಕಂಪನಿಗಳು ಸಹ ಬೆಳೆಯುತ್ತಿರುವ ಎಐ ಮಾರುಕಟ್ಟೆಯಿಂದ ಗಮನಾರ್ಹ ಲಾಭಗಳನ್ನು ಕಂಡಿವೆ.
ಎನ್‌ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರು ಫೋರ್ಬ್ಸ್‌ನ ನೈಜ-ಸಮಯದ ಬಿಲಿಯನೇರ್ ಶ್ರೇಯಾಂಕಗಳ ಪ್ರಕಾರ ಜಾಗತಿಕವಾಗಿ 11ನೇ ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೆ ಏರಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯವು ಕೇವಲ ಒಂದೇ ದಿನದಲ್ಲಿ 4 ಶತಕೋಟಿ ಡಾಲರ್​ಗಳಷ್ಟು (33,381 ಕೋಟಿ ರೂಪಾಯಿ) ಏರಿಕೆಯಾಗಿದೆ. ಫೋರ್ಬ್ಸ್ ಪ್ರಕಾರ, 2019 ರಲ್ಲಿ ಜಾಗತಿಕವಾಗಿ 546 ನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನ ಪಡೆದಿದ್ದ ಜೆನ್ಸನ್ ಹುವಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು ಕಳೆದ ಐದು ವರ್ಷಗಳಲ್ಲಿ 114 ಶತಕೋಟಿ ಡಾಲರ್​ನಷ್ಟು ಏರಿಕೆ ಕಂಡಿದೆ. 2023ರ ಅಂತ್ಯದ ವೇಳೆಗೆ, ಹುವಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು 21 ಶತಕೋಟಿ ಡಾಲರ್ ​ತಲುಪಿತ್ತು. ಇದರಿಂದಾಗಿ ಅವರು ವಿಶ್ವದ76 ನೇ ಶ್ರೀಮಂತ ವ್ಯಕ್ತಿಯಾಗಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 5 =
Remember me
