ಗುನಾ:ಪೊಲೀಸರಿಂದ ಹಲ್ಲೆಗೊಳಗಾದ ದಲಿತ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಇದೀಗ ಇನ್ನೊಂದು ಅಂಥದ್ದೇ ಘಟನೆ ವರದಿಯಾಗಿದೆ. ಇತರ ಹಿಂದುಳಿದ ವರ್ಗಕ್ಕೆ(ಒಬಿಸಿ)ಸೇರಿದ ಯುವಕನೋರ್ವನಿಗೆ ಜನರ ಗುಂಪೊಂದು ಅಮಾನುಷವಾಗಿ ಹೊಡೆದಿದೆ. ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲೇ ಈ ಘಟನೆಯೂ ನೀಡಿದೆ. ಯುವಕ ಅಂಗಡಿಯೊಂದರಿಂದ ಕೀಟನಾಶಕ ಕದಿಯುವಾಗ ಸಿಕ್ಕಿಬಿದ್ದಿದ್ದರಿಂದ ಜನರು ಮನಸಿಗೆ ಬಂದಂತೆ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಹಿಂದುಳಿದ ವರ್ಗದ ಈ ಯುವಕನಿಗೆ ಊರ ಜನರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಎರಡು ಮೂರು ಜನ ಸೇರಿಕೊಂಡು ಯುವಕನಿಗೆ ಹೊಡೆಯುತ್ತಿದ್ದಾರೆ. ಆತನ ಮೈಯೆಲ್ಲ ರಕ್ತವಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಅಷ್ಟೇ ಅಲ್ಲ, ಯುವಕನ ಕುತ್ತಿಗೆಗೆ ಟವೆಲ್​ ಹಾಕಿ ಎಳೆದು ಹಿಂಸೆ ಮಾಡಿದ್ದಾರೆ.ಕೊನೆಗೆ ಯುವಕ ನೋವು ತಾಳಲಾರದೆ ಎಚ್ಚರ ತಪ್ಪಿ ಬಿದ್ದ ಮೇಲಷ್ಟೇ ಅವರು ಹೊಡೆಯುವುದನ್ನು ನಿಲ್ಲಿಸುತ್ತಾರೆ. ಈ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.ಇದನ್ನೂ ಓದಿ:ಬೆಕ್ಕಿನ ಮರಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಕ್ರೂರಿ; ಅವನ ಬಂಧನಕ್ಕೆ ಸಹಕರಿಸಿದವರಿಗೆ 50 ಸಾವಿರ ರೂ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆ ಯುವಕ ಕಳ್ಳ ಮತ್ತು ಮಾದಕವಸ್ತು ವ್ಯಸನಿ. ಈತನ ವಿರುದ್ಧ ಪ್ರಕರಣವೂ ಇದೆ ಎಂದಿದ್ದಾರೆ. ಯುವಕನನ್ನು ಬಂಧಿಸಲಾಗಿದೆ ಹಾಗೇ ಅವನನ್ನು ಥಳಿಸಿದವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಗುನಾ ಜಿಲ್ಲೆಯ ಎಸ್​ಪಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)
https://twitter.com/SurajKrBauddh/status/1284743947080826881?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
