ನವದೆಹಲಿ:ದಕ್ಷಿಣ ಭಾರತದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಒಟ್ಟಾರೆ ಬೊಜ್ಜು ಹೊಂದಿರುವ ಮಹಿಳೆಯರ ಪ್ರಮಾಣ ಶೇ.24ರಷ್ಟಿದ್ದರೆ, ಪುರುಷರ ಪ್ರಮಾಣ ಶೇ. 22.9ರಷ್ಟಿದೆ. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ-5ರಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಹೈದರಾಬಾದ್​ನ ಕೌನ್ಸಿಲ್ ಫಾರ್ ಸೋಷಿಯಲ್ ಡೆವಲಪ್​ವೆುಂಟ್ 15ರಿಂದ 49 ವರ್ಷ ವಯಸ್ಸಿನ ಮಹಿಳೆಯರನ್ನು ಅಧ್ಯಯನಕ್ಕೊಳಪಡಿಸಿ ಈ ವರದಿ ಸಿದ್ಧಪಡಿಸಿದೆ. ಅದರ ಪ್ರಕಾರ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮತ್ತು ತೆಲಂಗಾಣದ ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ ಕಡಿಮೆ ಇದೆ. ಆದರೆ ರಾಷ್ಟ್ರೀಯ ಸರಾಸರಿ ಪ್ರಮಾಣದಲ್ಲಿ ಹೆಚ್ಚಿದೆ.
ವಿವಿಧ ವಿಭಾಗಗಳಲ್ಲಿ ಸಮೀಕ್ಷೆ:ಸಮೀಕ್ಷೆಯನ್ನು ವಿವಿಧ ವಿಭಾಗಗಳಲ್ಲಿ ನಡೆಸಲಾಗಿದೆ. ಯಾವ ರಾಜ್ಯದ ಮಹಿಳೆಯರಲ್ಲಿ, ಯಾವ ಧರ್ಮ ಹಾಗೂ ಜಾತಿಯ ಮಹಿಳೆಯರಲ್ಲಿ, ಯಾವ ವರ್ಗದ (ಶ್ರೀಮಂತ/ಬಡವ) ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆಯಿದೆ ಎಂಬುದನ್ನು ವಿವರಿಸಲಾಗಿದೆ. ಧರ್ಮದ ವಿಚಾರದಲ್ಲಿ ಕ್ರೖೆಸ್ತ ಮಹಿಳೆಯರು ಮಿತಿಮೀರಿದ ತೂಕ ಹೊಂದಿದ್ದಾರೆ. ಇವರ ಪ್ರಮಾಣ ಶೇ. 31.2ರಷ್ಟಿದೆ. ಮುಸ್ಲಿಂ ಮತ್ತು ಹಿಂದು ಮಹಿಳೆಯರಲ್ಲಿ ದೇಶದ ಒಟ್ಟು ಬೊಜ್ಜು ಹೊಂದಿರುವವರಲ್ಲಿ ನಾಲ್ಕನೇ ಒಂದು ಭಾಗ ಇದ್ದಾರೆ. ದಕ್ಷಿಣ ಭಾರತದಲ್ಲಿ ಹೆಚ್ಚಿನ ಬೊಜ್ಜು ಇದೆ. ಅದರಲ್ಲೂ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣದ ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ ಅಧಿಕವಾಗಿದೆ ಎಂದು ಅಧ್ಯಯನ ಹೇಳಿದೆ.
ಸಿರಿವಂತರಲ್ಲೇ ಅಧಿಕ:ಇನ್ನೂ ಜಾತಿ ಅಥವಾ ಸಮುದಾಯದ ವಿಚಾರಕ್ಕೆ ಬರುವುದಾದರೆ ರಾಷ್ಟ್ರೀಯ ಮಟ್ಟದಲ್ಲಿ ಮುಂದುವರಿದ ಜಾತಿಯ ಮಹಿಳೆಯರಲ್ಲಿ ಶೇ.28.6, ಹಿಂದುಳಿದ ವರ್ಗದ ಜಾತಿಯಲ್ಲಿ ಶೇ. 24.6, ಪರಿಶಿಷ್ಟ ಜಾತಿ ಶೇ. 21.6, ಪರಿಶಿಷ್ಟ ವರ್ಗದ ಶೇ. 12.6ರಷ್ಟು ಮಂದಿ ಅಧಿಕ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಾದೇಶಿಕ ವಿಭಾಗಕ್ಕೆ ಬರುವುದಾದರೆ ದಕ್ಷಿಣ ರಾಜ್ಯಗಳ ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ಹೆಚ್ಚಿನ ಬೊಜ್ಜು ಇದೆ. ಕರ್ನಾಟಕ ಮತ್ತು ತೆಲಂಗಾಣದ ಮಹಿಳೆಯರು ಅಧಿಕ ತೂಕ ಹೊಂದಿದ್ದಾರೆ ಎಂದು ವರದಿ ಹೇಳಿದೆ. ಅದೇ ರೀತಿ ಸಿರಿವಂತರ ಮಹಿಳೆಯರಲ್ಲಿ ಶೇ. 38.6, ಮೇಲ್ಮಧ್ಯಮ ವರ್ಗದ ಮಹಿಳೆಯರಲ್ಲಿ ಶೇ. 30.5ರಷ್ಟು ಹಾಗೂ ಸಾಮಾನ್ಯ ವರ್ಗದ ಮಹಿಳೆಯರಲ್ಲಿ ಶೇ. 23.7ರಷ್ಟು ಮಹಿಳೆಯರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ.
ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + twelve =
Remember me
