ಅಹಮದಾಬಾದ್:ಈದ್​ ಮೆರವಣಿಗೆಯಲ್ಲಿ ಪೊಲೀಸರ ಎದುರಲ್ಲೇ ಸರ್​ ತಾನ್​ ಸೇ ಜುದಾ (ತಲೆ ಕಡಿಯುವುದು) ಘೋಷಣೆಗಳನ್ನು ಕೂಗುತ್ತಾ, ಹಾಡಿಗೆ ಹೆಜ್ಜೆ ಹಾಕಿರುವ ಘಟನೆ ಗುಜರಾತ್​ನ​ ವಡೋದರಾದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪ್ರಕರಣ ಸಂಬಂಧ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಸೆಪ್ಟೆಂಬರ್​ 29ರಂದು ನಡೆದ ಈದ್​ ಮೆರವಣಿಗೆ ವೇಳೆ ಬಂಧಿತ ಆರೋಪಿಗಳು ಘೋಷಣೆಗಳನ್ನು ಕೂಗುತ್ತ, ಡಿಜೆಯಲ್ಲಿ ಜೋರಾಗಿ ಆಕ್ಷೇಪಾರ್ಹ ಹಾಡುಗಳನ್ನು ಹಾಕುವ ಮೂಲಕ ಉದ್ದಟತನ ಮೆರೆದಿದ್ದಾರೆ. ಘಟನೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ಆರೋಪಿಗಳು ತಲೆಮಾರಿಸಿಕೊಂಡಿದ್ದರು.
वड़ोदरा में ईद-ए-मिलाद के जुलुस के दौरान .. सर तन से जुदा के नारे के साथ DJ बजाने के खिलाफ पुलिस ने कार्यवाही करते हुए तीन लोगों को गिरफ्तार किया हैआरोपियों के नाम हैं1. हैदर खान पठान2. सरफ़राज़ उर्फ़ छोटू उर्फ़ कालिया अंसारी3. राहुल राधेश्याम धोबीइसमें राहुल DJ BAND का…https://t.co/i6CJJeyzVBpic.twitter.com/0o8zoy6S2j
ಇದನ್ನೂ ಓದಿ:ಪ್ರಶ್ನೆ ಕೇಳಿದ ವರದಿಗಾರ್ತಿ ಮೇಲೆ ಸಿಟ್ಟಾದ ಅಣ್ಣಾಮಲೈ; ವ್ಯಾಪಕ ಖಂಡನೆ
ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ 20 ಮಂದಿಯನ್ನು ಅರೆಸ್ಟ್​ ಮಾಡಲಾಗಿದ್ದು, ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ (IPC Section) 153A,153B,188,114,GP Act Sections 131,135 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಡಿಯೋ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿರುವ ನೆಟ್ಟಿಗರು, ಇಂತಹ ಸಮಾಜ ವಿರೋಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಹಾಳುಗೆಡವಲು ಮುಂದಾಗಿರುವ ಇಂತಹವರನ್ನು ದೇಶದಿಂದಲ್ಲೇ ಗಡಿಪಾರು ಮಾಡಿ ಎಂದು ಹಲವರು ಆಗ್ರಹಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + thirteen =
Remember me
