ನವದೆಹಲಿ:ಭಾಷೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಬೇಕಿದ್ದ ಮನವಿಗಳುಳ್ಳ ಕಿರುಹೊತ್ತಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ನಿರ್ಣಯವೊಂದನ್ನು ದಾಖಲಿಸಿದ್ದಕ್ಕೆ ಕುಪಿತಗೊಂಡ ರಾಜ್ಯ ಕಾಂಗ್ರೆಸ್ ಸಂಸದರು ಬುಧವಾರ ಪ್ರಾಧಿಕಾರದ ಸಭೆ ಬಹಿಷ್ಕರಿಸಿ ಹೊರನಡೆದರು.
ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ನೇತೃತ್ವದ ನಿಯೋಗ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನಿವಾಸದಲ್ಲಿ ರಾಜ್ಯದ ಎಲ್ಲ ಸಂಸದರ ಸಭೆ ಏರ್ಪಡಿಸಿತ್ತು. ಸಭೆಯಲ್ಲಿ ಮನವಿ ಪುಸ್ತಕದ ಬಗ್ಗೆ ಆಕ್ಷೇಪ ಎತ್ತಿದ ಕಾಂಗ್ರೆಸ್ ಸಂಸದರಾದ ರಾಜೀವ್ ಗೌಡ, ಬಿ.ಕೆ. ಹರಿಪ್ರಸಾದ್, ನಾಸಿರ್ ಹುಸೇನ್, ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಮತ್ತು ಡಿ.ಕೆ. ಸುರೇಶ್, ಭಾಷೆಗಳ ಕುರಿತ ಆರ್​ಎಸ್​ಎಸ್ ನಿರ್ಣಯಗಳನ್ನು ಪ್ರಾಧಿಕಾರದ ಪುಸ್ತಕದಲ್ಲಿ ನಮೂದಿಸುವ ಅಗತ್ಯವೇನಿತ್ತು? ಸಂಘ ಪರಿವಾರದವರು ಹಿಂದಿನಿಂದಲೂ ಹಿಂದಿ ಮತ್ತು ಸಂಸ್ಕೃತ ಹೇರಿಕೆಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದು ತಾರಕಕ್ಕೇರುತ್ತಿದ್ದಂತೆ ಕಾಂಗ್ರೆಸ್ ಸಂಸದರು ಸಭೆಯಿಂದ ಹೊರನಡೆದರು. ಕೇಂದ್ರ ಸಚಿವ ಸುರೇಶ ಅಂಗಡಿ, ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ, ಶಿವಕುಮಾರ್ ಉದಾಸಿ, ಪ್ರಭಾಕರ ಕೋರೆ ಮತ್ತಿತರರು ಸಭೆಯಲ್ಲಿದ್ದರು.
ಮನವಿ ಸಲ್ಲಿಕೆ:ಚಿಂತಕ ಗುರುರಾಜ ಕರಜಗಿ, ರಾ.ನಂ. ಚಂದ್ರಶೇಖರ್, ಮಾಳವಿಕಾ ಅವಿನಾಶ್, ನಿರಂಜನ ಆರಾಧ್ಯ, ಸಿದ್ದಯ್ಯ, ಮುರಳೀಧರ್ ಅವರಿದ್ದ ನಿಯೋಗ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಕಾಶ್ ಜಾವ್ಡೇಕರ್, ಪ್ರಲ್ಹಾದ್ ಜೋಷಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಸಂಘದ ನಿರ್ಣಯವೇ ಏಕೆ?
ಆರ್​ಎಸ್​ಎಸ್​ನ 2018ರ ಸಭೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಅಥವಾ ಭಾರತೀಯ ಭಾಷೆಯಲ್ಲೇ ಬೋಧಿಸಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿತ್ತು. ವಾಸ್ತವ ದಲ್ಲಿ ಇದು ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳ ಪರವಾದ ಧೋರಣೆಯಾಗಿದೆ. ಆದರೆ, ಆರ್​ಎಸ್​ಎಸ್ ಸಂಘಟನೆಯ ನಿರ್ಣಯವನ್ನು ಪುಸ್ತಕದಲ್ಲಿ ದಾಖಲಿಸಿದ್ದು ಕಾಂಗ್ರೆಸ್ ನಾಯಕರನ್ನು ಕೆರಳಿಸಿತು. ಕನ್ನಡ ಸಾಹಿತ್ಯ ಪರಿಷತ್ತು ಸೇರಿ ವಿವಿಧ ಸಂಘಟನೆಗಳು ಕನ್ನಡದ ಬಗ್ಗೆ ಅನೇಕ ನಿರ್ಣಯ ಅಂಗೀಕರಿಸಿವೆ. ಅವೆಲ್ಲವೂ ಬಿಟ್ಟು ಆರ್​ಎಸ್​ಎಸ್​ನ ನಿರ್ಣಯ ಮಾತ್ರ ಏಕೆ ಕಾಣುತ್ತಿದೆ ಎಂದು ಕಾಂಗ್ರೆಸ್ ಸಂಸದರು ಪ್ರಶ್ನಿಸಿದರು.
ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂಬ ಆರ್​ಎಸ್​ಎಸ್ ನಿರ್ಣಯವನ್ನು ಉದಾಹರಣೆಯಾಗಿ ನೀಡುವ ಉದ್ದೇಶದಿಂದ ಉಲ್ಲೇಖಿಸಲಾಗಿದೆ. ಇದಕ್ಕೆ ರಾಜಕೀಯ ತಳುಕು ಹಾಕುವುದು ಸರಿಯಲ್ಲ.
| ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಹಾಗಾಗಿ, ಆರ್​ಎಸ್​ಎಸ್ ಕಾರ್ಯಕರ್ತರ ಅಭಿಪ್ರಾಯ ಮುಖ್ಯವಾಗುತ್ತದೆ. ಅದನ್ನು ಉಲ್ಲೇಖಿಸಿದ್ದು ಸರಿಯಾಗಿದೆ.
| ಪ್ರಕಾಶ್ ಬೆಳವಾಡಿ ಚಿತ್ರನಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + two =
Remember me
