ನೋಯ್ಡಾ:ಹೋಳಿ ಹಬ್ಬದಂದು ದೆಹಲಿ ಮೆಟ್ರೋದಲ್ಲಿ ಮತ್ತು ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತ ಯುವತಿಯರು ಅಶ್ಲೀಲ ಇನ್‌ಸ್ಟಾಗ್ರಾಮ್ ರೀಲ್ಸ್​ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋಗಳು ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ದೃಶ್ಯ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ನೋಯ್ಡಾ ಪೊಲೀಸರು, ಇದೀಗ ಯುವತಿಯರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:593 ಕೋಟಿ ರೂ. ಒಡೆಯನಾದ್ರು ಸ್ವಂತ ಕಾರಿಲ್ಲ; ಡಿ.ಕೆ. ಸುರೇಶ್​ ಹೆಸರಿನಲ್ಲಿದೆ 150 ಕೋಟಿ ರೂ. ಸಾಲ
ಪ್ರತ್ಯೇಕ ವಿಡಿಯೋಗಳಲ್ಲಿ ಸ್ಕೂಟರ್ ಓಡಿಸುತ್ತಿದ್ದ ಯುವಕನ ಹಿಂಬದಿ ಕುಳಿತ್ತಿದ್ದ ಇಬ್ಬರು ಹುಡುಗಿಯರು ಅಶ್ಲೀಲವಾಗಿ ತಬ್ಬಿಕೊಂಡು, ಚುಂಬಿಸಿದ್ದರು. ಈ ವಿಡಿಯೋ ಆಧರಿಸಿದ ನೋಯ್ಡಾ ಪೊಲೀಸರು, ಬಣ್ಣದ ಹಬ್ಬದ ನೆಪದಲ್ಲಿ ನೊಯ್ಡಾದ ಬೀದಿಗಳಲ್ಲಿ ಮತ್ತು ದೆಹಲಿ ಮೆಟ್ರೋದಲ್ಲಿ ಅಶ್ಲೀಲತೆಯನ್ನು ಹರಡಿಸಿದ್ದ ಯುವತಿಯರನ್ನು ಇದೀಗ ಬಂಧಿಸಿದ ಅಧಿಕಾರಿಗಳು, ಭಾರಿ ದಂಡ ವಿಧಿಸಿದ್ದಾರೆ.
ಟ್ರಿಪಲ್ ರೈಡಿಂಗ್​ ಮತ್ತು ಹೆಲ್ಮೆಟ್ ಇಲ್ಲದೆ ಸ್ಕೂಟರ್‌ನಲ್ಲಿ ಚಲಿಸಿದ್ದಲ್ಲದೇ, ಅಶ್ಲೀಲ ರೀಲ್‌ಗಳನ್ನು ಮಾಡಿದ್ದಕ್ಕಾಗಿ ನೋಯ್ಡಾ ಪೊಲೀಸರು ಪ್ರೀತಿ, ವಿನೀತಾ ಮತ್ತು ಪಿಯೂಷ್‌ಗೆ 33,000 ರೂ. ದಂಡ ವಿಧಿಸಿದ್ದಾರೆ. ಆದರೆ, ಅಧಿಕಾರಿಗಳ ಬಳಿ ಅಳಲು ತೋಡಿಕೊಂಡ ಯುವತಿಯರು ನಮ್ಮ ಬಳಿ ದಂಡ ಪಾವತಿಸಲು ಹಣವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೃಷಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: 17 ಸೈಟ್​, 3 ವಾಣಿಜ್ಯ ಮಳಿಗೆ, 826 ಗ್ರಾಂ ಚಿನ್ನ, 47 ಲಕ್ಷ ವಶಕ್ಕೆ ಅಧಿಕಾರಿಗಳು
ಅಧಿಕಾರಿಗಳು ನೀಡಿದ ದಂಡ ಕಟ್ಟಲು ತಮ್ಮ ಬಳಿ ಹಣವಿಲ್ಲ ಎಂದು ಯುವತಿಯರು ತಿಳಿಸಿದ್ದು, ಸ್ಕೂಟರ್‌ನಲ್ಲಿ ಇದೇ ಮೊದಲ ಬಾರಿಗೆ ರೀಲ್ಸ್​ ಮಾಡಿದ್ದೇವೆ. ಆದರೆ, ಅಧಿಕಾರಿಗಳು ನಮಗೆ ಭಾರಿ ದಂಡ ವಿಧಿಸಿದ್ದಾರೆ. ಇಂತಹ ತಪ್ಪನ್ನು ಮುಂದೆಂದೂ ನಾವು ಮಾಡೋದಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕೈಮುಗಿದು ಅಂಗಲಾಚಿ ಬೇಡಿಕೊಂಡರು.
Big Breaking :दिल्ली मेट्रो से लेकर नोएडा की सड़कों पर अश्लीलता फैलाने वाले विनीता, प्रीति और पीयूष गिरफ्तार हुए। पुलिस ने IPC सेक्शन– 279, 290, 294, 336, 337 में FIR दर्ज की। इनकी स्कूटी का पहले ही करीब 80K का चालान कट चुका है।#Noida#Uphttps://t.co/bbg1LPfLJXpic.twitter.com/05w8EGPSSC
— Sachin Gupta (@SachinGuptaUP)March 28, 2024

ಪ್ರಕರಣ ದಾಖಲು: ಯುವತಿಯರು ಮತ್ತು ಅವರ ಸಂಗಾತಿಯನ್ನು ಬಂಧಿಸಿದ ಪೊಲೀಸರು, ಸೆಕ್ಷನ್ 279, 290, 294, 336 ಮತ್ತು 337ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಅವರ ಸ್ಕೂಟರ್‌ನ ಒಟ್ಟು ದಂಡವನ್ನು 80,000 ರೂ.ಗೆ ಏರಿಸಿದ್ದು, ತಮ್ಮ ಸ್ಕೂಟರ್‌ ಬಳಸಿಕೊಂಡು ಅಸಭ್ಯ ಮತ್ತು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವ ಹಲವಾರು ಇತರ ವೀಡಿಯೊಗಳು ಯುವತಿಯರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಲಭ್ಯವಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
