ಆಲಪ್ಪುಳ:ತನ್ನನ್ನೇ ಹೋಲುವ ಯುವತಿಯೊಬ್ಬಳ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಕೇರಳದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೀನು ಸಜೀವ್ ದೂರು ನೀಡಿದ್ದಾರೆ.
ವಲ್ಲಿಕ್ಕುನ್ನು ಮೂಲದ ವಲಸಿಗರೊಬ್ಬರು ಅಶ್ಲೀಲ ವಿಡಿಯೋವನ್ನು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿದ್ದಾರೆ ಎಂದು ಅಲಪ್ಪುಳ ಎಸ್‌ಪಿಗೆ ನೀಡಿದ ದೂರಿನಲ್ಲಿ ಮೀನು ಸಜೀವ್​ ಉಲ್ಲೇಖಿಸಿದ್ದಾರೆ. ವಲಸಿಗನ ಪತ್ನಿಯೂ ಸಹ ತನ್ನ ಫ್ರೆಂಡ್ಸ್​ಗೆ ಅಶ್ಲೀಲ ವಿಡಿಯೋವನ್ನು ಶೇರ್​ ಮಾಡಿದ್ದಾಳೆ ಎಂದು ಮೀನು ಆರೋಪಿಸಿದ್ದಾರೆ.
ಮೊದಲು ವಲ್ಲಿಕ್ಕುನ್ನಂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಸ್‌ಪಿಗೆ ದೂರು ನೀಡಿದ್ದೇನೆ ಎಂದು ಮೀನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಸೈಬರ್‌ಸ್ಪೇಸ್‌ನಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಡಿಟ್​ ಮಾಡಲಾದ ವಿಡಿಯೋಗಳನ್ನು ಹರಿಬಿಟ್ಟು ಮಾನಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಈ ಕಾರಣದಿಂದಲೇ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿರುವುದಾಗಿ ಮೀನು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯ ಹಿಂದೆ ಏನಾದರೂ ರಾಜಕೀಯ ಉದ್ದೇಶವಿದೆಯೇ ಎಂದು ಪೊಲೀಸರು ತನಿಖೆ ನಡೆಸಿ ಪತ್ತೆ ಮಾಡಬೇಕು ಎಂದು ಮೀನು ಹೇಳಿದರು.(ಏಜೆನ್ಸೀಸ್​)
ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

ಶಾಲೆಯ ಆವರಣದೊಳಗೆ ಬಿಜೆಪಿ ಕಾರ್ಯಕರ್ತೆಯ ಶವ ಪತ್ತೆ! 4 ದಿನ ಮುಚ್ಚಿದ್ದ ಸ್ಟೇಷನರಿ ಶಾಪ್ ರಹಸ್ಯ ಬಯಲು ​

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:11 − ten =
Remember me
