ಮುಂಬೈ:ದೇಶಾದ್ಯಂತ ಕೋವಿಡ್​-19 ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಅನಿರ್ದಿಷ್ಟಾವಧಿಗೆ ಬಂದ್​ ಮಾಡಲಾಗಿದೆ. ಹೀಗಿರುವಾಗ ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟವಾಗದಂತೆ ತಡೆಯಲು ಆನ್​ಲೈನ್​ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತಿವೆ. ಆದರೆ, ಇದು ಸುರಕ್ಷಿತವಲ್ಲ ಎಂಬುದು ಇದೀಗ ಸಾಬೀತಾಗಿದೆ.
ಆನ್​ಲೈನ್​ ಬೋಧನೆಯ ವ್ಯವಸ್ಥೆಯನ್ನು ಹ್ಯಾಕ್​ ಮಾಡುತ್ತಿರುವ ಹ್ಯಾಕರ್​ಗಳು ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟು ವಿಕೃತಾನಂದ ಅನುಭವಿಸುತ್ತಿದ್ದಾರೆ. 9 ತರಗತಿಯ ಆನ್​ಲೈನ್​ ಬೋಧನೆ ಜಾಲಕ್ಕೆ ಲಾಗಿನ್​ ಆದ 10ನೇ ತರಗತಿ ವಿದ್ಯಾರ್ಥಿಯೊಬ್ಬ, ಅದನ್ನು ಹ್ಯಾಕ್​ ಮಾಡಿ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಇದು ಮುಂಬೈನಲ್ಲಿ ನಡೆದಿರುವ ಘಟನೆಯಾಗಿದೆ.
ಮತ್ತೊಂದು ಪ್ರಕರಣದಲ್ಲಿ ಅಪರಿಚಿತನೊಬ್ಬ ಶಾಲೆಯೊಂದರ ಆನ್​ಲೈನ್​ ತರಗತಿ ವ್ಯವಸ್ಥೆಯನ್ನು ಹ್ಯಾಕ್​ ಮಾಡಿ, ಅಶ್ಲೀಲ ಚಿತ್ರಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಅಳವಡಿಸಿದ್ದ. ಇದರಿಂದಾಗಿ ಆ ಶಾಲೆಯವರು ಐದಾರು ದಿನ ತಮ್ಮ ಆನ್​ಲೈನ್​ ಬೋಧನೆಯನ್ನೇ ನಿಲ್ಲಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಗ್ಯಾಸ್​ ಸ್ಪೋಟದಿಂದ ಇಡೀ ಮನೆ ಧ್ವಂಸವಾದ್ರೂ ತಾಯಿ-ಮಕ್ಕಳ ಜೀವ ಉಳಿಸಿದ ಫ್ರಿಡ್ಜ್​!
ವಿದ್ಯಾರ್ಥಿಯ ಪಾಲಕರೊಬ್ಬರು ಆನ್​ಲೈನ್​ ತರಗತಿ ಆರಂಭದಲ್ಲಿ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಯಾರಾದರೂ ತಡವಾಗಿ ಜಾಯಿನ್​ ಆಗಲು ಬಯಸಿದರೆ, ಅವರಿಗೆ ಅವಕಾಶ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆನ್​ಲೈನ್​ ತರಗತಿಯ ಎಲ್ಲ ವಿಷಯಗಳ ಬೋಧನೆ ಬಯಸಿ ನನ್ನ ಪುತ್ರ ಹಿಂದಿನ ರಾತ್ರಿಯೇ ತನ್ನ ಲಾಗಿನ್​ ಐಡಿಯನ್ನು ಎಲ್ಲ ವಿಷಯಗಳ ಶಿಕ್ಷಕರಿಗೆ ರವಾನಿಸಿದ್ದ. ಆದರೆ, ಆ ನೆಟ್​ವರ್ಕ್​ ಅನ್ನು ಹ್ಯಾಕ್​ ಮಾಡಿರುವ ದುಷ್ಕರ್ಮಿಗಳು, ಪುತ್ರನ ಲಾಗಿನ್​ ಬಳಸಿಕೊಂಡು ಅಶ್ಲೀಲ ದೃಶ್ಯಗಳನ್ನು ಅಳವಡಿಸಿರುವುದಾಗಿ ಮತ್ತೊಬ್ಬ ಪಾಲಕರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳು ತಮ್ಮ ಆನ್​ಲೈನ್​ ಬೋಧನೆಯ ನೆಟ್​ವರ್ಕ್​ನ ಭದ್ರತೆಯನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಚಾಪೆ ಕೆಳಗೆ ನುಸುಳಿದರೆ, ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂದು ದುಷ್ಕರ್ಮಿಗಳು ನೆಟ್​ವರ್ಕ್​ ಹ್ಯಾಕ್​ ಮಾಡುವ ಕೃತ್ಯವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − nine =
Remember me
