ಆಸ್ಟ್ರಿಯಾ:ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಬೆಳೆ ಉತ್ಪಾದಕತೆ ಹಾಗೂ ರೈತರ ಆದಾಯ ಸುಧಾರಿಸಲು ಸದಾ ಚಿಂತಿಸುವ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅವರು ಆಸ್ಟ್ರಿಯಾ ದೇಶದಲ್ಲಿ ರೈತರೊಂದಿಗೆ ಚರ್ಚಿಸಿದರು
ಆಸ್ಟ್ರಿಯಾ ಪ್ರವಾಸದಲ್ಲಿರುವ ಶ್ರೀಜಗದ್ಗುರುಗಳು ಈ ದೇಶದ ರಾಜಧಾನಿ ವಿಯೆನ್ನಾದಲ್ಲಿ 1977-79ರ ಅವಧಿಯಲ್ಲಿ ವ್ಯಾಸಂಗ ಮಾಡಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ನೆರವಾದ ಅಧ್ಯಾಪಕರನ್ನು ಭೇಟಿ ಮಾಡಿ ಗೌರವ ಸಮರ್ಪಿಸಲು ಅವರು ಆಸ್ಟ್ರಿಯಾಗೆ ಆಗಮಿಸಿದ್ದರು.
ಜಗದ್ಗುರುಗಳು ಆಸ್ಟ್ರಿಯಾದಲ್ಲಿನ ಕೃಷಿ ಪದ್ಧತಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇಲ್ಲಿನ ರೈತ ಸಮುದಾಯಕ್ಕೆ ಸಂದೇಶ ನೀಡಿದ್ದಾರೆ. ಆಸ್ಟ್ರಿಯಾದ ಪಶ್ಚಿಮ ಭಾಗದಲ್ಲಿ ಇನ್ಸ್‌ಬ್ರಕ್ ಬಳಿಯ ಟ್ರಿನ್ ಎಂಬ ಸ್ಥಳದಲ್ಲಿ ಕೃಷಿ ಭೂಮಿಗೆ ಭೇಟಿ ನೀಡಿದೆವು. ಈ ಸ್ಥಳವು ಜರ್ಮನ್ ಗಡಿಗೆ ಹತ್ತಿರದಲ್ಲಿದೆ. ಇಲ್ಲಿನ ಜಮೀನಿನಲ್ಲಿ ದುಡಿಯುತ್ತಿರುವ ರೈತ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದೆವು. ಮನೆಯವರೆಲ್ಲರೂ – ತಂದೆ, ತಾಯಿ, ಮಗ ಮತ್ತು ಮಗಳು ಒಟ್ಟಾಗಿ ಹೊಲದಲ್ಲಿ ಹುಲ್ಲು ಕತ್ತರಿಸುವ ಮತ್ತು ಒಂದೆಡೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಹುಲ್ಲು ಕತ್ತರಿಸುವ ಟ್ರಾಕ್ಟರ್ ನೋಡುತ್ತ ನಾವು ಆ ಹುಡುಗ ಓಡಿಸುತ್ತಿದ್ದ ಆ ಟ್ರ್ಯಾಕ್ಟರ್ ಹತ್ತಿ ಸವಾರಿ ಮಾಡಿದೆವು. ತನಗೆ ಉನ್ನತ ವ್ಯಾಸಂಗದಲ್ಲಿ ಆಸಕ್ತಿಯಿಲ್ಲ, ಆದರೆ ಪೂರ್ವಿಕರ ಆ ಜಮೀನಿನ ಸಾಗುವಳಿಯಲ್ಲಿ ತನಗೆ ಆಸಕ್ತಿ ಇದೆ ಎಂದು ಆ ಹುಡುಗ ನಮಗೆ ತಿಳಿಸಿದ. ರೈತರು ಹುಲ್ಲನ್ನೆಲ್ಲ ಸಂಗ್ರಹಿಸಿ, ಬೇಸಿಗೆ ಕಾಲದಲ್ಲಿ ಅದನ್ನೆಲ್ಲ ಒಂದು ಕಡೆ ಒಟ್ಟು ಮಾಡಿ, ಚಳಿಗಾಲದಲ್ಲಿ ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಆಹಾರಕ್ಕಾಗಿ ಸಂಗ್ರಹಿಸುತ್ತಾರೆ. ನಾವು ಭೇಟಿಯಾದ ರೈತ ಕುಟುಂಬವು ವರ್ಷಕ್ಕೆ ಸುಮಾರು 1,20,000/- ಯುರೋ ಡಾಲರ್ ಗಳಿಸುತ್ತದೆ. ಅಂದರೆ ಅದರ ಮೌಲ್ಯ ಸುಮಾರು 11,00,000 ರೂಪಾಯಿಗಳು.

ನಾವಿದ್ದ ಆ ಪ್ರದೇಶದ ಭೂಮಿಯ ಸುತ್ತಲೂ ಕಾಣುವ ಪರ್ವತಗಳನ್ನು ಆಲ್ಪ್ಸ್ ಪರ್ವತಗಳು ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಈ ಎಲ್ಲಾ ಪರ್ವತಗಳು ಹಿಮದಿಂದ ಆವೃತವಾಗುತ್ತವೆ. ಚಳಿಗಾಲದಲ್ಲಿ ಸ್ಕೀಯಿಂಗ್ (Skiing) ಮಾಡಲು ಯುರೋಪಿನಾದ್ಯಂತ ಜನರು ಇಲ್ಲಿಗೆ ಬರುತ್ತಾರೆ. ಆಸ್ಟ್ರಿಯನ್ ಸರ್ಕಾರವು ಭೂಮಿಯ ವಿಸ್ತೀರ್ಣವನ್ನು ಆಧರಿಸಿ ರೈತರಿಗೆ ತಮ್ಮ ಭೂಮಿಯನ್ನು ನಿರ್ವಹಿಸಲು ಪ್ರತಿ ವರ್ಷ ಸ್ವಲ್ಪ ಹಣವನ್ನು ಪಾವತಿಸುತ್ತದೆ. ಮರಗಳನ್ನು ಕಡಿಯಲು ರೈತರಿಗೆ ಇಲ್ಲಿ ಯಾವುದೇ ಪರವಾನಗಿಯ ಅಗತ್ಯವಿಲ್ಲ. ಆದರೆ ಯಾವುದೇ ಮರವನ್ನು ಕಡಿಯುವ ಮೊದಲು ಅವರು ಹೊಸ ಮರಗಳನ್ನು ನೆಡಬೇಕು.

ಅದು ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಸೈರನ್​ ಪರೀಕ್ಷೆ ಮಾಡಲಾಗುತ್ತದೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಬೆಟ್ಟ ಪ್ರದೇಶದಲ್ಲಿ ಯಾವುದೇ ಅವಘಡ ಸಂಭವಿಸಿದಾಗ, ಜನರನ್ನು ಎಚ್ಚರಿಸಲು ಮತ್ತು ಬೆಂಕಿ ನಂದಿಸಲು ಮತ್ತು ಗಾಯಗೊಂಡವರಿಗೆ ಸಹಾಯ ಮಾಡಲು ಮೂರು ಬಾರಿ ಸೈರನ್ ನುಡಿಸಲಾಗುತ್ತದೆ ಎಂದು ಸ್ವಾಮೀಜಿ ಸಂದೇಶದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಳೆ ಇಲ್ಲಿಂದ ಸ್ವಿಟ್ಜರ್ಲೆಂಡ್‌ ದೇಶದ ಜ್ಯೂರಿಚ್‌ ನಗರಕ್ಕೆ ಜಗದ್ಗುರುಗಳವರು ಪ್ರಯಾಣಿಸಲಿದ್ದಾರೆ.
ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ ನನಗೆ ಕೊಡೆ: ಹೈಕೋರ್ಟ್​​ ತಡೆ ಸಿಗುತ್ತಿದ್ದಂತೆ ಉಪೇಂದ್ರ ಫಸ್ಟ್ ರಿಯಾಕ್ಷನ್​

ಆಶ್ರಮದಲ್ಲಿ 70 ವರ್ಷದ ಸ್ವಾಮೀಜಿಯ ಕೈಕಾಲು ಕಟ್ಟಿ ಇರಿದು ಕೊಂದ ದುಷ್ಕರ್ಮಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
