ನವದೆಹಲಿ: ಇನ್ನೇನು ಲಾಕ್‌ಡೌನ್‌ ಮುಕ್ತಾಯವಾಗಲು ಕೆಲವೇ ದಿನಗಳು ಬಾಕಿ ಇವೆ. ಆದರೆ ಇದರ ನಡುವೆಯೇ ಲಾಕ್‌ಡೌನ್‌ ವಿಸ್ತರಣೆಯಾಗುವ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗಿದ್ದು, ವಿಸ್ತರಣೆಯ ಸಾಧ್ಯತೆಯೂ ದಟ್ಟವಾಗಿದೆ. ಈ ಪ್ರಶ್ನೆಗಳಿಗೆ ಇನ್ನೊಂದೆರಡು ದಿನಗಳಲ್ಲಿಯೇ ಉತ್ತರ ಸಿಗುವ ಸಾಧ್ಯತೆ ಇದೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಲಾಕ್‌ಡೌನ್‌ ಕುರಿತಂತೆ ಮಾತನಾಡಲಿದ್ದಾರೆ ಎನ್ನಲಾಗಿದೆ.
ಒಂದೇ ಬಾರಿಗೆ ಏ.14ಕ್ಕೆ ಎಲ್ಲೆಡೆಯೂ ಲಾಕ್‌ಡೌನ್‌ ಮುಗಿದು ಹೋಗಲಿದೆಯೆ? ಹಂತಹಂತವಾಗಿ ಮುಗಿಯುತ್ತದೆಯೆ ಅಥವಾ ಎಲ್ಲೆಡೆಯೂ ಇದರ ಅವಧಿ ವಿಸ್ತರಣೆ ಆಗಲಿದೆಯ? ಇಂದಿನ ಪರಿಸ್ಥಿತಿ ಹೇಗಿದೆ? ಲಾಕ್‌ಡೌನ್‌ ಮುಂದುವರಿಕೆ ಅಗತ್ಯವಾಗಿದ್ದಲ್ಲಿ ಅದಕ್ಕೆ ಕಾರಣವೇನು? ಇತ್ಯಾದಿ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ನೀಡಲಿದ್ದಾರೆ.
ಈ ಕುರಿತಂತೆ ಬುಧವಾರ ಎಲ್ಲಾ ಪಕ್ಷಗಳ ಮುಖಂಡದ ಜತೆ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಒಂದೇ ಸಲಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಲಾಕ್‌ಡೌನ್‌ ಮುಕ್ತಾಯ ಮಾಡುವುದು ಕಷ್ಟ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೂ ಲಾಕ್‌ಡೌನ್‌ ಕುರಿತಂತೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಪೂರ್ವದಲ್ಲಿ ನಾಳೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಇನ್ನೊಮ್ಮೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಲಿದ್ದಾರೆ.
ಹಂತ ಹಂತವಾಗಿ ಲಾಕ್‌ಡೌನ್‌ ಮುಕ್ತಾಯವಾಗಲಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಅಂತರ್‌ರಾಜ್ಯಗಳ ನಡುವಿನ ಓಡಾಟಕ್ಕೆ ನಿರ್ಬಂಧ ವಿಧಿಸುವುದು, ಶಾಲಾ, ಕಾಲೇಜುಗಳನ್ನು ತೆರೆಯದೇ ಇರುವುದು ಸೇರಿದಂತೆ ಕೆಲವೊಂದು ನಿರ್ಬಂಧಗಳನ್ನು ಮುಂದುವರೆಸಲಾಗುವುದು. ಆದರೆ ದೀರ್ಘ ಕಾಲದ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿರುವ ಕಾರಣ, ಕೆಲವೊಂದು ಕ್ಷೇತ್ರಗಳಿಗೆ ರಿಯಾಯಿತಿ ನೀಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ಚಟುವಟಿಕೆ ನಡೆಸಲು ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶದ ಆರ್ಥಿಕತೆಗೆ ಧಕ್ಕೆ ಬಂದಿರುವ ಕ್ಷೇತ್ರಗಳಲ್ಲಿ ಮುಖ್ಯವಾದದ್ದು ವಿಮಾನ ನಿಲುಗಡೆ. ಆದ್ದರಿಂದ ಕೆಲವೊಂದು ನಿಯಮಗಳನ್ನು ಪಾಲಿಸುವ ಮೂಲಕ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಎಲ್ಲಾ ವಿಮಾನಗಳಲ್ಲಿ ನಡುವಿನ ಸೀಟುಗಳನ್ನು ಖಾಲಿ ಬಿಟ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಎಲ್ಲಾ ರೀತಿಯ ಕಟ್ಟುನಿಟ್ಟಿನ ನಿಯಮಗಳ ನಡುವೆ ವಿಮಾನ ಹಾರಾಟಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
ಲಾಕ್‌ಡೌನ್‌ ನಂತರ ಪರಿಸ್ಥಿತಿ ಹಿಂದಿನಂತೆ ಇರುವುದಿಲ್ಲ. ಜನರ ಸ್ವಭಾವ, ಸಾಮಾಜಿಕ, ವೈಯಕ್ತಿಯ ನಡವಳಿಕೆ ಎಲ್ಲದರಲ್ಲಿಯೂ ವ್ಯತ್ಯಾಸವಾಗಲಿದೆ ಎಂದೂ ಮೋದಿ ನಿನ್ನೆ ನಡೆದ ಮಾತುಕತೆಯಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ. ಇವೆಲ್ಲವನ್ನೂ ಸವಿಸ್ತಾರವಾಗಿ ಪ್ರಧಾನಿ ಜನರ ಮುಂದಿಡಬಹುದು ಎಂದು ನಿರೀಕ್ಷಿಸಲಾಗಿದೆ. (ಏಜನ್ಸೀಸ್‌)
ಉದ್ಧವ್ ಠಾಕ್ರೆ ಕುರ್ಚಿ ಮೇಲೆ ಕರೊನಾ ಕರಿಛಾಯೆ?- ಸಿಎಂ ಪಟ್ಟ ಉಳಿಸಿಕೊಳ್ಳೋಕೆ ಅವರೇನು ಮಾಡಬಹುದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
