ನವದೆಹಲಿ:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರ ವಾಹನದ ಮೇಲೆ ಪಾಕ್ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ.
ಬಾಲಾಕೋಟ್ ದಾಳಿ:2019ರ ಫೆ.14ರಂದು ಜೈಷ್ ಸಂಘಟನೆಯ ಉಗ್ರ ಆದಿಲ್ ದರ್ ಭಾರಿ ಪ್ರಮಾಣದ ಸುಧಾರಿತ ಸ್ಪೋಟಕಗಳನ್ನು ತುಂಬಿದ್ದ ಕಾರೊಂದನ್ನು ಶ್ರೀನಗರದ ಕಡೆಗೆ ತೆರಳುತ್ತಿದ್ದ ಸಿಆರ್​ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಈ ವೇಳೆ ಸಂಭವಿಸಿದ ಭೀಕರ ಸ್ಪೋಟದಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಇಡೀ ದೇಶವೇ ಬೆಚ್ಚಿಬಿದ್ದಿದ್ದ ಈ ಘಟನೆಯಿಂದಾಗಿ ಪಾಕ್ ವಿರುದ್ಧ ಪ್ರತೀಕಾರದ ಕೂಗು ಜೋರಾಗಿತ್ತು. ಜತೆಗೆ ಉಭಯ ದೇಶಗಳ ನಡುವೆ ಯುದ್ಧದ ಕಾಮೋಡ ಮೂಡಿತ್ತು. ಪುಲ್ವಾಮಾ ದಾಳಿ ನಡೆದ 12ನೇ ದಿನಕ್ಕೆ ಪಾಕ್​ಗೆ ತಕ್ಕ ಉತ್ತರ ನೀಡಲು ನಿರ್ಧರಿಸಿದ ಭಾರತ ಕಳೆದ ವರ್ಷ ಇದೇ ದಿನ(ಫೆ.26) ನಸುಕಿನ ವೇಳೆ, ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಜೈಷ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ್ದ 12 ಮಿರಾಜ್ -2000 ಯುದ್ಧ ವಿಮಾನಗಳು ಜೈಷ್​ನ ತರಬೇತಿ ಕೇಂದ್ರಗಳ ಮೇಲೆ ಅತ್ಯಾಧುನಿಕ ಬಾಂಬ್​ಗಳನ್ನು ಹಾಕಿ ಸಂಪೂರ್ಣ ನಾಶಮಾಡಿದ್ದವು. ನಸುಕಿನ 3.30ರಿಂದ 3.55ರ ಅವಧಿಯಲ್ಲಿ ನಡೆದ ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದುಹಾಕಲಾಗಿತ್ತು. ಆದರೆ ಪಾಕಿಸ್ತಾನ ತನ್ನ ಉಗ್ರ ಪೋಷಣೆಯನ್ನು ಮುಚ್ಚಿಕೊಳ್ಳಲು ದಾಳಿಯನ್ನು ಅಲ್ಲಗಳೆದಿತ್ತು.
ವೀರ ಅಭಿನಂದನ್
ಭಾರತ ತನ್ನ ನೆಲದಲ್ಲಿ ದಾಳಿ ನಡೆಸಿದೆ ಎಂಬುದು ಗೊತ್ತಾಗುತ್ತಿದ್ದಂತೆ ಪಾಕ್ ಕೂಡ ತನ್ನ ಮೂರು ಎಫ್-16 ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್​ನ ವಿಮಾನಗಳು ಭಾರತ ಗಡಿದಾಟಿ ಒಳಗೆ ಬಂದಿದ್ದವು. ತಕ್ಷಣ ಭಾರತದ ಕಡೆಯಿಂದ ಮಿಗ್-21 ವಿಮಾನಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು ಮುಗಿಬಿದ್ದವು. ಈ ವೇಳೆ ಮಿಗ್-21 ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್, ಪಾಕ್​ನ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನ ಅಪಘಾಕ್ಕೀಡಾಗಿತ್ತು. ನಂತರ ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಭಾರತ ಹಾಗೂ ಜಾಗತಿಕ ಮಟ್ಟದ ಒತ್ತಡಕ್ಕೆ ಮಣಿದ ಪಾಕ್ ಅಭಿನಂದನ್​ರನ್ನು ಭಾರತಕ್ಕೆ ಹಸ್ತಾಂತರಿಸಿತು.
ದಾಳಿ ಹೇಗೆ ನಡೆಯಿತು?
# ಫೆ. 25 ರಾತ್ರಿ 11 ಗಂಟೆ – ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸುವ ಕುರಿತು ಪ್ರಧಾನಿ ಕಚೇರಿ, ರಕ್ಷಣಾ ಸಚಿವಾಲಯದಿಂದ ಅಂತಿಮ ಒಪ್ಪಿಗೆ
# ಫೆ. 26 ರಾತ್ರಿ 12.15 – ವೈಮಾನಿಕ ದಾಳಿ ಕುರಿತು ವಾಯುಪಡೆಯ ಹಿರಿಯ ಅಧಿಕಾರಿಗಳಿಂದ ಅಂತಿಮ ಸಿದ್ಧತೆ. ಅಂಬಾಲಾ, ಗ್ವಾಲಿಯರ್, ಬರೇಲಿ ವಾಯುನೆಲೆಯಲ್ಲಿ ಹೈ ಅಲರ್ಟ್ ಘೋಷಣೆ
# ರಾತ್ರಿ 1 – ವಿವಿಧ ವಾಯುನೆಲೆಯಲ್ಲಿದ್ದ ಮಿರಾಜ್-2000 ವಿಮಾನಗಳಿಗೆ ಲೇಸರ್ ಗೈಡೆಡ್ ಬಾಂಬ್ ಸಮೇತ ವಿವಿಧ ಶಸ್ತ್ರಾಸ್ತ್ರ, ಉಪಕರಣ ಅಳವಡಿಕೆ
# ರಾತ್ರಿ 2 – ದೆಹಲಿ ಸಮೇತ ಬಹುತೇಕ ಎಲ್ಲ ವಾಯುನೆಲೆಗಳಲ್ಲಿ ಚಟುವಟಿಕೆ ತೀವ್ರ
# 3.15 – 12 ಮಿರಾಜ್ ವಿಮಾನಗಳ ಹಾರಾಟ ಆರಂಭ
# 3.30 -3.55 – ಎಲ್​ಒಸಿ ದಾಟಿ, ಜೈಷ್ ಉಗ್ರರ ಮೂರು ಪ್ರತ್ಯೇಕ ತರಬೇತಿ ಕೇಂದ್ರದ ಮೇಲೆ ಬಾಂಬ್ ದಾಳಿ
# 4 ಗಂಟೆ ಬಳಿಕ – ವಿಮಾನಗಳು ವಾಯುನೆಲೆಗೆ ಸುರಕ್ಷಿತವಾಗಿ ವಾಪಸ್. ವೈಮಾನಿಕ ದಾಳಿಯ ಸಫಲತೆ ಕುರಿತು ಪ್ರಧಾನಿ ಕಚೇರಿ, ರಕ್ಷಣಾ ಸಚಿವಾಲಯಕ್ಕೆ ಮಾಹಿತಿ ರವಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + thirteen =
Remember me
