ಭುವನೇಶ್ವರ:ಒಡಿಯಾ ಕಿರುತೆರೆ ನಟಿ ರಶ್ಮಿರೇಖಾ ಓಜಾ ಜೂನ್ 18 ರಂದು ನಗರದ ನಯಾಪಲ್ಲಿ ಪೊಲೀಸ್ ವ್ಯಾಪ್ತಿಯ ಗಡಸಾಹಿ ಪ್ರದೇಶದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಾತ್ರಿ 10.30ರ ಸುಮಾರಿಗೆ ನಟಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಶವದ ಬಳಿ ಮೇಜಿನ ಮೇಲೆ ಡೆತ್​ ನೋಟ್​ ಪತ್ತೆ ಆಗಿದೆ. ಈ ಟಿಪ್ಪಣಿಯನ್ನು ನಟಿಯೇ ಬರೆದಿದ್ದಾರಾ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಡೆತ್​ನೋಟ್​ನಲ್ಲಿ ನನ್ನ ಸಾವಿಗೆ ನಾನೆ ಕಾರಣ ಎಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಮಿತಿ ಕಹಿಬಿ ಕಹಾ ಧಾರಾವಾಹಿಯಿಂದ ಜನಪ್ರಿಯರಾಗಿದ್ದ ರಶ್ಮಿರೇಖಾ ಓಜಾ, ಮೂಲತಃ ಜಗತ್‌ಸಿಂಗ್‌ಪುರ ಜಿಲ್ಲೆಯ ಸಂಕೇತ್‌ಪಟಾನಾದವರು.
ಶಾಸಕ ರಾಮದಾಸ್​​ ಬೆನ್ನಿಗೆ ಪ್ರೀತಿಯಿಂದ ಗುದ್ದಿದ ಪಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 4 =
Remember me
