ಭುವನೇಶ್ವರ್​:ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿ ಜೈಲುವಾಸ ಅನುಭವಿಸುತ್ತಿರುವ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್​ಗೆ ಮತ್ತೊಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಕೂಡ ಇನ್ನೊಂದು ಪ್ರಕರಣ ಬಾಕಿ ಇರುವುದರಿಂದ ಜೈಲಿನಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಭುವನೇಶ್ವರದ ಖಂಡಗಿರಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಅರ್ಚನಾಗೆ ಜಾಮೀನು ದೊರೆತಿದೆ. ಅರ್ಚನಾಳ ಪರಮಾಪ್ತೆ ಶ್ರದ್ಧಾಂಜಲಿ ಬೆಹೆರಾ ಖಂಡಗಿರಿ ಠಾಣೆಯಲ್ಲಿ ಅರ್ಚನಾ ವಿರುದ್ಧ ದೂರು ದಾಖಲಿಸಿದ್ದರು. ನಾನು ಕೂಡ ಹನಿಟ್ರ್ಯಾಪ್​ ಪ್ರಕರಣದ ಸಂತ್ರಸ್ತೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದರು. ಎಫ್‌ಐಆರ್ ಆಧರಿಸಿ, ಖಂಡಗಿರಿ ಪೊಲೀಸರು ಅರ್ಚನಾ, ಅವರ ಪತಿ ಜಗಬಂಧು ಚಂದ್ ಮತ್ತು ಅವರ ಸಹಾಯಕ ಖಗೇಶ್ವರ್ ಪಾತ್ರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:ಫ್ಲ್ಯಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ!; ಪೊಲೀಸರಿಂದ ತನಿಖೆ ಆರಂಭ
ಈ ಪ್ರಕರಣದಲ್ಲಿ ಅರ್ಚನಾ ಪತಿ ಜಗಬಂಧುಗೆ ಮಾರ್ಚ್​ 15ರಂದು ಹೈಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿತ್ತು. ಭುವನೇಶ್ವದ ಹೆಚ್ಚುವರಿ ನ್ಯಾಯಾಲಯ ಅರ್ಚನಾಗೆ ಜಾಮೀನು ನಿರಾಕರಿಸಿದ್ದರಿಂದ ಆಕೆ ಒರಿಸ್ಸಾ ಹೈಕೋರ್ಟ್​ ಮೊರೆ ಹೋಗಿದ್ದಳು. ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಷರತ್ತುಬದ್ಧ ಜಾಮೀನು ನೀಡಿದೆ. ಇದಕ್ಕೂ ಮುನ್ನ ನಾಯಪಲ್ಲಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲೂ ನ್ಯಾಯಾಲಯ ಜಾಮೀನು ನೀಡಿದೆ. ಸಿನಿಮಾ ನಿರ್ಮಾಪಕ ಅಕ್ಷಯ್​ ಪಾರಿಜಾ ಅವರು ನೀಡಿದ ದೂರಿನ ಆಧಾರದ ಮೇಲೆ ನಾಯಪಲ್ಲಿ ಠಾಣಾ ಪೊಲೀಸರು ಅರ್ಚನಾ ವಿರುದ್ಧ ಕೇಸು ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿತ್ತು.
ಸದ್ಯ ಎರಡು ಪ್ರಕರಣಗಳಲ್ಲಿ ಅರ್ಚನಾಗೆ ಜಾಮೀನು ದೊರೆತಿದೆ. ಆದರೆ, ಅರ್ಚನಾ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಆಕೆಯ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಹೀಗಾಗಿ ಜೈಲುವಾಸ ಮುಂದುವರಿದಿದೆ.
26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗಿದೆ.
ಇದನ್ನೂ ಓದಿ:RSS ಕಚೇರಿ ಗೋಡೆ ಮೇಲೆ ಮೂತ್ರ ವಿರ್ಸಜಿಸಿದ ಕಿಡಿಗೇಡಿಗಳು; ಪ್ರಶ್ನಿಸಿದ್ದಕ್ಕೆ ಥಳಿಸಿ ಕಲ್ಲು ತೂರಿದ ದುಷ್ಕರ್ಮಿಗಳು
ಅಂದಹಾಗೆ ಅರ್ಚನಾ ನಾಗ್​, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.
2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು ಅಚ್ಚರಿಯ ಸಂಗತಿ.(ಏಜೆನ್ಸೀಸ್​)
ಅರ್ಚನಾ ನಾಗ್ ಹನಿಟ್ರ್ಯಾಪ್​ ಕೇಸ್​: ಸಾಲದ ಹಣ ವಾಪಸ್​ ಕೇಳಿದ ಉದ್ಯಮಿಗೆ ಈಕೆ ಕೊಟ್ಟಿದ್ದಳು ಬಿಗ್​ ಶಾಕ್!

18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಕೇಸ್​ ಏನಾಯ್ತು? ತನಿಖಾಧಿಕಾರಿಗಳಿಗೆ ಹೈಕೋರ್ಟ್​ ಶಾಕ್​!

18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ದಂಗಾದ ಇಡಿ ಅಧಿಕಾರಿಗಳು!

18 ಶಾಸಕರನ್ನು ಬಲೆಗೆ ಬೀಳಿಸಿದ ಹನಿಟ್ರ್ಯಾಪ್​ ರಾಣಿ ಅರ್ಚನಾ ಕಾಲೇಜಿನಲ್ಲಿ ಹೇಗಿದ್ದಳು ಅಂತಾ ತಿಳಿದ್ರೆ ಬೆರಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
