ಒಡಿಶಾ:ಸೋಮವಾರ (ನಾಳೆ) ಅಯೋಧ್ಯಾ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ದೇಶದ ಮೂಲೆ-ಮೂಲೆಗಳಲ್ಲಿ ರಾಮಜಪ ಜೋರಾಗುತ್ತಿದೆ. ಕೋಟ್ಯಾಂತರ ಭಕ್ತ ಸಮೂಹ ಭಕ್ತಿ ಭಾವೈಕ್ಯತೆಯಲ್ಲಿ ಮುಳುಗುತ್ತಿದೆ. ಇನ್ನು ಒಡಿಶಾದ ಬರ್ಹಾಂಪುರದ ಕಲಾವಿದರೊಬ್ಬರ ವಿಶಿಷ್ಟ, ವಿಭಿನ್ನ ಸೇವೆ ಇಡೀ ದೇಶದ ಗಮನ ಸೆಳಿಯುತ್ತಿದೆ.
ಇದನ್ನೂ ಓದಿ:ನೀವು 1.67 ಲಕ್ಷ ಹೂಡಿಕೆ ಮಾಡಿದ್ದರೆ ಒಂದೇ ವರ್ಷದಲ್ಲಿ ಕೋಟ್ಯಧಿಪತಿ: 2023ರಲ್ಲಿ ಬಂಪರ್​ ಲಾಭ ನೀಡಿದ ಷೇರು ಇದು

ಕಲಾವಿದ ಕೆ.ಬಿಜಯ್​ ಕುಮಾರ್ ರೆಡ್ಡಿ ಎಂಬುವವರು ಚಾಕ್‌ ಪೀಸ್‌ನಲ್ಲಿ 3 ಸೆಂ.ಮೀ ಎತ್ತರದ ಭಗವಾನ್ ಶ್ರೀರಾಮ ಮತ್ತು 2.5 ಸೆಂ.ಮೀ ಎತ್ತರದ ಪ್ರಧಾನಿ ಮೋದಿ ಇರುವ ವಿಗ್ರಹವನ್ನು ಕೆತ್ತುವ ಮೂಲಕ ವಿಭಿನ್ನ ರೀತಿಯಲ್ಲಿ ರಾಮನ ಬಗೆಗಿನ ಪ್ರೀತಿಯನ್ನು ತೋರಿಸಿದ್ದಾರೆ. ಕಲಾವಿದ ಸಾಧನೆಗೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಕಲಾಕೃತಿಗಳನ್ನು ಕೆತ್ತಿರುವ ರೆಡ್ಡಿ ಅವರಿಗೆ ಬಾಲರಾಮನ ಕೆತ್ತನೆ ಬಹಳ ವಿಶೇಷವಂತೆ. ಚಾಕ್‌ ಪೀಸ್‌ನಲ್ಲಿ 3 ಸೆಂ.ಮೀ ಎತ್ತರದ ಭಗವಾನ್ ಶ್ರೀರಾಮ ಕೆತ್ತಲು ಒಂದು ದಿನ ಬೇಕಾಯಿತು ಎಂದು ಕಲಾವಿದ ಹೇಳಿದ್ದಾನೆ. ಅಲ್ಲದೆ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.
ಕಲಾವಿದ ಕೆ.ಬಿಜಯ್​ ಕುಮಾರ್ ರೆಡ್ಡಿ ಗಮನಾರ್ಹ ಪ್ರತಿಭೆಗೆ ಪ್ರಧಾನಿ ಮೋದಿ, ಉಪ ರಾಷ್ಟ್ರಪತಿಗಳು ಸೇರಿದಂತೆ ಹಲವು ಮಹಾನ್ ಸಾಧಕರಿಂದಲೂ ಬೇಷ್‌ ಎನಿಸಿಕೊಂಡಿದ್ದಾರೆ.
ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಪ್ರಧಾನಿ ಮೋದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 15 =
Remember me
