ನವದೆಹಲಿ :ಸರ್ಕಾರಿ ನೌಕರರು ವಿನಾಕಾರಣ ಅಕ್ರಮವಾಗಿ ಮುಷ್ಕರ ಹೂಡಿದರೆ, ಅಂಥ ಕೃತ್ಯಗಳಿಗೆ ಹಣಕಾಸಿನ ನೆರವು ಅಥವಾ ಇನ್ನಾವುದೇ ರೀತಿಯ ನೆರವು ನೀಡಿದ್ರೆ ಅಂಥವರು ಇನ್ನು ಸೆರೆವಾಸ ಅನುಭವಿಸುವುದು ಗ್ಯಾರೆಂಟಿ ! ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ಇಂಥದ್ದೊಂದು ಮಸೂದೆಯನ್ನು ಅಂಗೀಕರಿಸಿದೆ.
ಹೌದು ಈ ಕಾನೂನು ಜಾರಿಯಾಗುತ್ತಿರುವುದು ಒಡಿಶಾದಲ್ಲಿ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರ ಇದನ್ನು ಜಾರಿಗೊಳಿಸುತ್ತಿದೆ. ಒಡಿಶಾ ಎಸೆನ್ಶಿಯಲ್​ ಸರ್ವೀಸಸ್​ (ಮೇಂಟೆನೆನ್ಸ್) ಆ್ಯಕ್ಟ್ ಎಂಬುದು ಕಾಯ್ದೆಯ ಹೆಸರು. ಈ ಮಸೂದೆಯನ್ನು ಮುಖ್ಯಮಂತ್ರಿಯವರ ಪರವಾಗಿ ಗೃಹ ಖಾತೆ ರಾಜ್ಯ ಸಚಿವರ ಡಿಎಸ್ ಮಿಶ್ರಾ ಮಂಡಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಈ ಮಸೂದೆಯಲ್ಲಿನ ವಿವಾದಾತ್ಮಕ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಸರ್ಕಾರ ಮಸೂದೆಯನ್ನು ಅಂಗೀಕರಿಸಿದೆ.
ಇದನ್ನೂ ಓದಿ:ಐಎಸ್​ಐ ಕಂಟ್ರೋಲ್​ಗೆ ನ್ಯಾಷನಲ್​ ಇಂಟೆಲಿಜೆನ್ಸ್ ಕೋಆರ್ಡಿನೇಷನ್​ ಕಮಿಟಿ
ಮಸೂದೆ ಪ್ರಕಾರ, ಯಾರಾದರೂ ಅಕ್ರಮ ಮುಷ್ಕರಗಳಿಗೆ ಹಣಕಾಸು ನೆರವು ನೀಡುವುದು, ಅಕ್ರಮ ಮುಷ್ಕರ ಮಾಡುವಂತೆ ಪ್ರಚೋದಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದು ಸಾಬೀತಾದರೆ ಒಂದು ವರ್ಷದ ತನಕದ ಸಜೆ ಮತ್ತು 5,000 ರೂಪಾಯಿ ತನಕ ದಂಡ ವಿಧಿಸುವುದಕ್ಕೆ ಅವಕಾಶವಿದೆ. ಇದಲ್ಲದೇ, ಸರ್ಕಾರಿ ನೌಕರರೇನಾದರೂ ವಿಶೇಷವಾಗಿ ಅಗತ್ಯಸೇವೆಗಳ ಅಂದರೆ ಅಗ್ನಿಶಾಮಕ, ಅಬಕಾರಿ, ಅರಣ್ಯ, ಬಂದೀಖಾನೆ, ಸುಧಾರಣೆ, ಇಲೆಕ್ಟ್ರಾನಿಕ್ಸ್ ಸೇರಿ ಇತರೆ ಅಗತ್ಯ ಸೇವೆಗಳ ನೌಕರರು ಮುಷ್ಕರ ಘೋಷಿಸುವಂತಿಲ್ಲ. (ಏಜೆನ್ಸೀಸ್)
ಫೇಕ್ ಟಿಆರ್​ಪಿ ಹಗರಣ- ಚಾರ್ಜ್​ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
