ಕಟಕ್​:ಒಡಿಶಾದ ಪುರಿ ಜಿಲ್ಲೆಯ ಮಹಿಳಾ ಕ್ರಿಕೆಟರ್​ ರಾಜಶ್ರೀ ಸ್ವೈನ್​ ಅವರು ನಿಗೂಢ ಸ್ಥಿತಿಯಲ್ಲಿ ಕಟಕ್​ ನಗರದಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಸಂಬಂಧ ಆಕೆಯ ಕೋಚ್​ ಕಟಕ್​ನ ಮಂಗಳಬಾಗ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜಶ್ರೀ ಅವರ ಸ್ಕೂಟರ್ ಅಥಾಗಢ ಏರಿಯಾದ ಅರಣ್ಯ ಪ್ರದೇಶದಲ್ಲಿ​ ಪತ್ತೆಯಾಗಿದ್ದು, ಏನೋ ಅನ್ಯಾಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ರಾಜಶ್ರೀ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟಿಗರು ಪುದುಚೇರಿಯಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಾಗಿ ಕಟಕ್​ನ ಬಜ್ರಕಬಾಟಿಯಲ್ಲಿ ಆಯೋಜಿಸಲಾದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಎಲ್ಲರು ಹೋಟೆಲ್‌ನಲ್ಲಿ ತಂಗಿದ್ದರು.
ಜನವರಿ 10 ರಂದು ಅಂತಿಮ ಒಡಿಶಾ ತಂಡವನ್ನು ಘೋಷಿಸಲಾಯಿತು. ಆದರೆ, ರಾಜಶ್ರೀ ಅಂತಿಮ ಪಟ್ಟಿಗೆ ಆಯ್ಕೆಯಾಗಲಿಲ್ಲ. ಮರುದಿನ ಬೆಳಗ್ಗೆ ಆಟಗಾರರು ಅಭ್ಯಾಸಕ್ಕಾಗಿ ಕ್ರಿಕೆಟ್ ಮೈದಾನಕ್ಕೆ ಹೋದರು. ಆದರೆ, ರಾಜಶ್ರೀ ತನ್ನ ತಂದೆಯನ್ನು ಭೇಟಿ ಮಾಡಲು ಪುರಿಗೆ ಹೋಗುವುದಾಗಿ ತನ್ನ ಕೋಚ್‌ಗೆ ತಿಳಿಸಿದಳು. ಆದರೆ, ಆಕೆ ಮರಳಿ ಬರಲೇ ಇಲ್ಲ. ಫೋನ್​ ಮಾಡಿದರೆ ಸ್ವಿಚ್​ ಆಫ್​ ಅಂತಾ ಬಂದ ಕಾರಣ, ಆಕೆಯ ಕೋಚ್​​ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಮತ್ತೊಂದೆಡೆ ರಾಜಶ್ರೀ ಅವರ ಪಾಲಕರು ಇಂದು ಭುವನೇಶ್ವರದಲ್ಲಿರುವ ಒಡಿಶಾ ಕ್ರೀಡಾ ಸಚಿವರ ನಿವಾಸಕ್ಕೆ ಆಗಮಿಸಿ, ತಮ್ಮ ಮಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)
ಮಾಜಿ ಸಿಎಂ ಸಿದ್ದು ಕ್ಷೇತ್ರ ಗೊಂದಲಕ್ಕೆ ತೆರೆ ಎಳೆದ ಮನೆ ದೇವರು ಚಿಕ್ಕಮ್ಮತಾಯಿ! ಮತ್ತಷ್ಟು ಕುತೂಹಲ ಮೂಡಿಸಿದ ದೇವರ ನುಡಿ

ಶಿರಡಿ ಸಾಯಿಬಾಬ ಭಕ್ತರಿದ್ದ ಬಸ್​ ಅಪಘಾತ: 10 ಮಂದಿ ದುರ್ಮರಣ, ಐವರ ಸ್ಥಿತಿ ಗಂಭೀರ

ಚಲಿಸುತ್ತಿದ್ದ ರೈಲಿನಲ್ಲಿ ಸಿಗರೇಟ್​ ಸೇದಿ ಪುಂಡಾಟ ಮೆರೆದ ಯುವಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 4 =
Remember me
