ಮಲ್ಕನಗಿರಿ:ನಕ್ಸಲ್​ ಪೀಡಿತ ಪ್ರದೇಶಗಳ ಮಕ್ಕಳಿಗೆ ಪಲ್ಸ್​ ಫೊಲಿಯೋ ಹಾಕಲು ಹೋಗಿದ್ದ ವೈದ್ಯ ಮತ್ತು ಅವರೊಂದಿಗೆ ಇದ್ದ ಆರೋಗ್ಯ ಕಾರ್ಯಕರ್ತರ ತಂಡ ಎಲ್ಲರ ಮನಮೆಚ್ಚುವ ಕೆಲಸವನ್ನೊಂದು ಮಾಡಿದೆ.
ಒಡಿಶಾದ ಮಲ್ಕನಗಿರಿ ಜಿಲ್ಲೆಯ ಕೊಡಿಡುಲಗುಂಡಿ ಎಂಬ ಹಳ್ಳಿ ನಕ್ಸಲ್​ ಪೀಡಿತ ಗ್ರಾಮ ಎನಿಸಿಕೊಂಡಿದೆ. ಅಲ್ಲಿ ಮೂಲಸೌಕರ್ಯಗಳೂ ಇಲ್ಲ. ಮೊನ್ನೆ ಭಾನುವಾರ ಆ ಹಳ್ಳಿಯ ಮಕ್ಕಳಿಗೆ ಪೋಲಿಯೋ ಹನಿ ಹಾಕಲು ಮಲ್ಕಂಗಿರಿಯ ಕಲಿಮೇಲಾ ಕಮ್ಯುನಿಟಿ ಆರೋಗ್ಯ ಕೇಂದ್ರದ ವೈದ್ಯ ರಾಧೇಶ್ಯಾಮ್ ಜೇನಾ​ ತಮ್ಮ ಸಹಾಯಕರ ತಂಡದೊಂದಿಗೆ ತೆರಳಿದ್ದರು. ಅದೇ ವೇಳೆ ಹಳ್ಳಿಯ ಮಹಿಳೆಯೋರ್ವರಿಗೆ ಹೆರಿಗೆ ದಿನ ಹತ್ತಿರ ಬಂದು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಗ್ರಾಮದಲ್ಲೇ ಚಿಕಿತ್ಸೆ ಕೊಡಲು ಅಗತ್ಯ ಸಾಮಗ್ರಿಗಳೂ ಇರಲಿಲ್ಲ. ಆಸ್ಪತ್ರೆಗೆ ಸೇರಿಸೋಣವೆಂದರೆ ಅವರಿದ್ದ ಹಳ್ಳಿಗೆ ಯಾವುದೇ ವಾಹನಗಳೂ ಬರುವಂತಿರಲಿಲ್ಲ.
ಕೂಡಲೇ ಆಕೆಯನ್ನು ಕೈಮಂಚದ ಮೇಲೆ ಮಲಗಿಸಿ, ಆ ಮಂಚವನ್ನು ವೈದ್ಯ ಹಾಗೂ ಅವರ ಸಹಾಯಕರ ತಂಡ ಹೊತ್ತು ನಡೆದರು. ಬರೋಬ್ಬರಿ 30 ಕಿ.ಮೀ.ಗಳಷ್ಟು ದೂರ ಗರ್ಭಿಣಿಯನ್ನು ಹೊತ್ತು ಸಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ನಾನು ಹಳ್ಳಿಯಲ್ಲಿರುವ ಮಹಿಳೆಯ ಮನೆಗೆ ತೆರಳಿದಾಗ ಈಕೆಗೆ ರಕ್ತಸ್ರಾವ ಆಗುತ್ತಿತ್ತು. ಅಲ್ಲದೆ ಸುತ್ತಮುತ್ತಲೂ ಒಂದು ಸ್ವಲ್ಪವೂ ಸ್ವಚ್ಛತೆಯೆಂಬುದೇ ಇರಲಿಲ್ಲ. ನಾನು ಆಕೆಗೆ ಹೆರಿಗೆ ಮಾಡಿಸಲು ಯಶಸ್ವಿಯಾದೆ. ಗಂಡು ಮಗು ಹುಟ್ಟಿತು. ಆದರೆ ವಿಪರೀತ ಬ್ಲೀಡಿಂಗ್​ ಆಗುತ್ತಿತ್ತು. ಅಷ್ಟೇ ಅಲ್ಲ ಗರ್ಭಕೋಶದಲ್ಲಿ ಇನ್ನೊಂದು ಮಗುವೂ ಇತ್ತು. ಮಹಿಳೆಯ ಪರಿಸ್ಥಿತಿ ತುಂಬ ಶೋಚನೀಯವಾಗಿತ್ತು. ಬೇರೆ ವೈದ್ಯರಿಗೆ ಕರೆ ಮಾಡೋಣವೆಂದರೆ ಅಲ್ಲೆಲ್ಲೂ ಮೊಬೈಲ್​ ನೆಟ್​ವರ್ಕ್​ ಕೂಡ ಬರುತ್ತಿರಲಿಲ್ಲ. ಆದರೂ ಬಿಡದೆ ಅಲ್ಲೇ ಪಕ್ಕದ ಗುಡ್ಡ ಏರಿ ನನ್ನ ಸೀನಿಯರ್​ ಡಾಕ್ಟರ್​ ಜತೆ ಮಾತನಾಡಿ ಪರಿಸ್ಥಿತಿ ವಿವರಿಸಿದೆ. ಅವರು ಕೂಡಲೇ ಆಸ್ಪತ್ರೆಗೆ ಸೇರಿಸುವಂತೆ ಸಲಹೆ ಕೊಟ್ಟರು. ಆದರೆ ಅಲ್ಲಿ ಯಾವುದೇ ವಾಹನವೂ ಬರುವಂತೆ ಇರಲಿಲ್ಲ. ಹಾಗಾಗಿ ಆ ಮಹಿಳೆಯನ್ನು ಹೊತ್ತೇ ನಡೆದವು. ನಮ್ಮ ತಂಡದಲ್ಲಿ ಆರು ಜನರಿದ್ದರು. ಮಹಿಳೆಯ ಕುಟುಂಬದವರೂ ಸೇರಿಕೊಂಡರು. ಬಳಿಕ ಆಕೆಗೆ ಸರಿಯಾಗಿ ಚಿಕಿತ್ಸೆ ನೀಡಲಾಯಿತು ಎಂದು ವೈದ್ಯ ರಾಧೇಶ್ಯಾಮ್​ ಜೇನಾ ತಿಳಿಸಿದ್ದಾರೆ.
ಇದನ್ನೂ ಓದಿ:ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೊತ್ತು 6 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದ ಯೋಧರ ತಂಡ
ಅಲ್ಲದೆ ಇಂದು ಕೂಡ ಸಿಆರ್​ಪಿಎಫ್​ ಯೋಧರ ತಂಡವೊಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಂಚದ ಮೇಲೆ ಹಾಕಿಕೊಂಡು ಸುಮಾರು 6 ಕಿ.ಮೀ ದೂರದ ಆಸ್ಪತ್ರೆಗೆ ನೆಡದುಕೊಂಡೇ ತೆರಳಿರುವ ಘಟನೆ ಛತ್ತೀಸ್​ಗಢದ ಬಿಜಾಪುರ್​ ಜಿಲ್ಲೆಯ ಪಡೇದಾ ಗ್ರಾಮದಲ್ಲಿ ನಡೆದಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
