ಭುವನೇಶ್ವರ್​:ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿಗೆ ಪೋಸ್​ ನೀಡುವ ಮುನ್ನ ತಾವು ನಿಂತ ಸ್ಥಳ ಎಷ್ಟು ಸುರಕ್ಷಿತ ಎಂಬುದನ್ನು ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಏನು ನಡೆಯಬಹುದು ಎಂಬುದಕ್ಕೆ ಒಡಿಶಾದಲ್ಲಿ ನಡೆದ ಈ ಒಂದು ಘಟನೆ ಉದಾಹರಣೆಯಾಗಿದೆ.
ಹೌದು. ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿಯೊಬ್ಬಳು ಕಾಲು ಜಾರಿ ನದಿಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದಲ್ಲಿ ಜನವರಿ 10ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ
ಒಡಿಶಾದ ಸುಂದರಗಢ್​ ಜಿಲ್ಲೆಯಲ್ಲಿರುವ ಕನಕುಂದಾದ ನದಿಯಲ್ಲಿ ಘಟನೆ ನಡೆದಿದ್ದು, ಮೃತ ಯುವತಿಯನ್ನು ನಿರುಪಮಾ ಪ್ರಜಾಪತಿ ಎಂದು ಗುರುತಿಸಲಾಗಿದೆ. ನದಿಯಲ್ಲಿ ಕೊಚ್ಚಿ ಹೋದ ಯುವತಿ ಕೊನೆಗೆ ನದಿಯ ಜಲಪಾತದ ಕೆಳಗೆ ಶವವಾಗಿ ಪತ್ತೆಯಾಗಿದಳು.
ವಿಡಿಯೋದಲ್ಲಿ ಏನಿದೆ?: ನಿರುಪಮಾ ವೇಗವಾಗಿ ಹರಿಯುವ ನದಿಯ ಪಕ್ಕದಲ್ಲಿನ ಬಂಡೆ ಮೇಲೆ ನಿಂತು ಸೆಲ್ಫಿಗೆ ಪೋಸ್​ ನೀಡುವಾಗ ಪಕ್ಕದಲ್ಲಿ ಇದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಬೀಳುವಾಗ ನಿರುಪಮಾಳಿಗೂ ಆನತ ದೇಹ ತಾಗುತ್ತದೆ ಇದರಿಂದ ಸಮತೋಲನ ಕಳೆದುಕೊಳ್ಳುವ ಆಕೆ ಬಂಡೆಯಿಂದ ಜಾರಿ ನೀರಿನ ಒಳಗೆ ಬೀಳುತ್ತಾಳೆ. ಇದನ್ನೂ ನೋಡಿದ ಮತ್ತೊಬ್ಬ ಯುವತಿ ಜೋರಾಗಿ ಕಿರುಚಿಕೊಳ್ಳುತ್ತಾಳೆ. ಆದರೆ, ನೀರಿನ ಹರಿವು ಹೆಚ್ಚಾಗಿದ್ದರಿಂದ ನಿರುಪಮಾ ಕೊಚ್ಚಿ ಹೋಗುತ್ತಾಳೆ.
ಇದನ್ನೂ ಓದಿ:ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ ಮಹಿಳೆ: ವಿಡಿಯೋ ವೈರಲ್​ ಬೆನ್ನಲ್ಲೇ ಯೂಟ್ಯೂಬರ್​ ಅರೆಸ್ಟ್​!
(ವಿಡಿಯೋ ಕೃಪೆ: OTV)

ಬೀಳುವಾಗ ಏನಾದರೂ ಹಿಡಿದುಕೊಳ್ಳಲು ಅನುಪಮಾ ಪ್ರಯತ್ನಪಟ್ಟರು ಸಹ ಸಾಧ್ಯವಾಗಲಿಲ್ಲ. ಘಟನೆ ಕಣ್ಣು ಮಿಟುಕಿಸುವುದರಲ್ಲಿ ನಡೆದಿದ್ದರಿಂದ ಸ್ಥಳದಲ್ಲಿದ್ದ ಇತರರು ಸಹ ಆಕೆಯ ರಕ್ಷಣೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಕೆಲವೇ ದೂರದಲ್ಲಿ ಜಲಪಾತದ ಕೆಳಗೆ ಬಂಡೆಯೊಂದಕ್ಕೆ ಸಿಲುಕಿಕೊಂಡಿದ್ದ ಸ್ಥಿತಿಯಲ್ಲಿ ನಿರುಪಮಾ ಶವ ಪತ್ತೆಯಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಫೇಸ್​ಬುಕ್​ ಗೆಳತಿಗಾಗಿ 2ಸಾವಿರ ಕಿ.ಮೀ ಹೋದ ಬೆಂಗಳೂರು ಯುವಕ ರಾತ್ರಿ ಕಳೆದದ್ದು ಎಲ್ಲಿ ಗೊತ್ತಾ?
ಸೆಕ್ಸ್​ ಡಾಲ್​ ಮದ್ವೆಯಾದ ಬಾಡಿಬಿಲ್ಡರ್​ಗೆ ನೆಟ್ಟಿಗನ ಪ್ರಶ್ನೆ: ಬಂದ ಉತ್ತರ ಕೇಳಿ ಹೌಹಾರಿದ ನೆಟ್ಟಿಗ!

ಪತಿಗೆ ಕೈಕೊಟ್ಟು ಮಲಮಗನನ್ನೇ ಮದ್ವೆಯಾಗಿ ಗರ್ಭಿಣಿಯಾಗಿರೋ ಮಹಿಳೆಯ ವಿಚಿತ್ರ ಹೊಸ ನಿರ್ಧಾರವಿದು!

ಗಾಳಿಪಟ ಹಿಡಿಯಲು ಹೋದ ಬಾಲಕನನ್ನು ಹಿಂಬಾಲಿಸಿದ ಜವರಾಯ: ಸಂಕ್ರಾಂತಿಯಂದೇ ದುರಂತ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
