ಕಟಕ್:ಲಾಕ್​ಡೌನ್​​ನಿಂದ ಅದೆಷ್ಟೋ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಹಲವು ಅತಿಥಿ ಶಿಕ್ಷಕರಂತೂ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದಾರೆ. ಕೃಷಿಯಲ್ಲಿ ತೊಡಗಿಕೊಂಡವರೂ ಇದ್ದಾರೆ.
ಇದೀಗ ವಕೀಲರೋರ್ವರು ತಮ್ಮ ಜೀವನ ನಡೆಸಲು ಅದೇ ಮಾರ್ಗ ಕಂಡುಕೊಂಡಿದ್ದಾರೆ. ಕರೊನಾ ವೈರಸ್​ ಸಾಂಕ್ರಾಮಿಕದಿಂದ ಕೆಲಸವಿಲ್ಲದೆ, ಕೈಯಲ್ಲಿ ದುಡ್ಡಿಲ್ಲದೆ ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಆರ್ಥಿಕ ಸಂಕಷ್ಟಕ್ಕೀಡಾದಾಗ ವಕೀಲ ಸಪನ್​ ಕುಮಾರ್​ ಪಾಲ್​ ಅವರು ಒಡಿಶಾ ಸ್ಟೇಟ್​ ಬಾರ್​ ಕೌನ್ಸಿಲ್​ ಬಳಿ ತೆರಳಿ ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಯಾರೂ ಅವರ ಮನವಿಯನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಹಣ್ಣು, ತರಕಾರಿ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.
ಸಪನ್​ ಕುಮಾರ್​ ಅವರು 2012ರಿಂದಲೂ ಒಡಿಶಾ ಹೈಕೋರ್ಟ್​ನಲ್ಲಿ ಪ್ರಾಕ್ಟೀಸ್​ ಮಾಡುತ್ತಿದ್ದರು. ಒಡಿಶಾ ಸ್ಟೇಟ್​ ಬಾರ್​ ಕೌನ್ಸಿಲ್​ ಬಳಿ ಸಹಾಯ ಕೇಳಲು ಹೋದಾಗ, ನಾವು ಇಲ್ಲಿ 10 ವರ್ಷದಿಂದ ಅಭ್ಯಾಸ ಮಾಡುತ್ತಿರುವವರಿಗೆ ಮಾತ್ರ ಆರ್ಥಿಕ ನೆರವು ನೀಡುತ್ತೇವೆ. ನೀವು ಬಂದು ಎಂಟು ವರ್ಷವಷ್ಟೇ ಆಗಿದೆ ಎಂದು ನುಣುಚಿಕೊಂಡಿದ್ದಾರೆ ಎಂದು ಸಪನ್​ ಕುಮಾರ್​ ತಿಳಿಸಿದ್ದಾರೆ.
ಲಾಕ್​ಡೌನ್​ ಸಮಯದಲ್ಲಿ ಹಣ ಇಲ್ಲದೆ ತುಂಬ ಕಷ್ಟಪಡುವಂತಾಯಿತು. ನಂತರ ಸ್ನೇಹಿತನ ಬಳಿ 1000 ರೂಪಾಯಿ ಸಾಲ ಪಡೆದು ತರಕಾರಿ ಮಾರಾಟಕ್ಕೆ ಬೇಕಾದ ವಸ್ತುಗಳನ್ನೆಲ್ಲ ಹೊಂದಿಸಿಕೊಂಡೆ. ಇದೀಗ ಹೈಕೋರ್ಟ್​ ಎದುರೇ ತರಕಾರಿ ಮಾರುತ್ತಿದ್ದೇನೆ. ಹೀಗಾದರೂ ನಮ್ಮ ಕಷ್ಟ ಒಡಿಶಾ ಸ್ಟೇಟ್​ ಬಾರ್​ ಕೌನ್ಸಿಲ್​ ಗೆ ಗೊತ್ತಾಗಬೇಕು ಎಂದು ಹೇಳಿದ್ದಾರೆ. ನನ್ನ ಹೊಟ್ಟೆಪಾಡಿಗೂ ಆಯ್ತು…ಈ ಮೂಲಕ ಪ್ರತಿಭಟನೆಯೂ ಆಯ್ತು ಎಂಬ ಕಾರಣಕ್ಕೆ ಹೀಗೆ ಇಲ್ಲಿ ತರಕಾರಿ ಮಾರುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್​)
ಕರೊನಾ ವಾರಿಯರ್ಸ್​ಗೆ ಬುದ್ಧಿ ಹೇಳಲು ಹೋಗಿ ಪ್ರಧಾನಿಯನ್ನ ಮಾತಿನ ಮಲ್ಲ ಎಂದ ರೇಣುಕಾಚಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + one =
Remember me
