ಕಟಕ್​: ನಾಗರಹಾವು ಅಂದ್ರೇನೇ ಎಲ್ಲರಿಗೂ ಭಯ. ಇನ್ನು ಐದಡಿ ಉದ್ದದ ನಾಗಿಣಿಯೊಂದು ಮಂಚದ ಮೇಲೆ ಮಲ್ಕೊಂಡಿದ್ರೆ ಎಂಥವರೂ ಬೆಚ್ಚಿಬಿದ್ದಾರು. ಇಂಥದ್ದೇ ಒಂದು ಘಟನೆ ಒಡಿಶಾದ ಕಟಕ್ ಜಿಲ್ಲೆಯ ಹರೀರಾಪುರ ಗ್ರಾಮದಲ್ಲಿ ನಡೆದಿದೆ.
ಹರೀರಾಪುರ ಗ್ರಾಮದ ಶರತ್ ಪಾಂಡಾ ಎಂಬುವವರ ಮನೆಯಲ್ಲೇ ಇಂಥದ್ದೊಂದು ಘಟನೆ ನಡೆದಿರುವಂಥದ್ದು. ಸ್ವಲ್ಪ ಕತ್ತಲಿರುವ ಮಲಗುವ ಕೋಣೆಯೊಳಗೆ ನುಸುಳಿದ್ದ ಆ ಹಾವು, ಮಂಚವನ್ನೇರಿತ್ತು. ಶರತ್ ಪಾಂಡಾ ಮಲಗುವ ಕೋಣೆಯೊಳಗೆ ಪ್ರವೇಶಿಸಿ ಲೈಟ್ ಹಾಕಿದಾಗ ಅಲ್ಲಿ ಮಂಚದ ಮೇಲೆ ಏನೋ ಅಲ್ಲಾಡುತ್ತಿರುವುದು ಕಾಣಿಸಿತು. ಏನೆಂದು ನೋಡಲು ಬೆಡ್ ಶೀಟ್ ಮೇಲೆತ್ತಿದರೆ ಐದು ಅಡಿ ಉದ್ದದ ನಾಗರ ಹಾವು ಬುಸ್​ ಗುಡುತ್ತಿತ್ತು.
ಇದನ್ನೂ ಓದಿ:ಬಿಡಿಸಲಾಗದ ಕಿಮ್‌ ರಹಸ್ಯ: ಸತ್ತೇ ಹೋದ ಎಂದ ಸರ್ವಾಧಿಕಾರಿ ಮತ್ತೊಮ್ಮೆ ಪ್ರತ್ಯಕ್ಷ!
ಬೆಚ್ಚಿ ಬಿದ್ದು ಹೊರಗೋಡಿದ ಶರತ್​ ಪಾಂಡಾ ಕೂಡಲೇ ಸ್ನೇಕ್ ಹೆಲ್ಪ್​ಲೈನ್​ಗೆ ಕರೆಮಾಡಿದ್ರು. ಸಹಾಯವಾಣಿಯವರು ಇಬ್ಬರು ಸ್ಥಳಕ್ಕೆ ಆಗಮಿಸಿ ಹಾವನ್ನು ಸ್ವಲ್ಪ ಸಾಹಸಪಟ್ಟು ಹಿಡಿದು, ಸಮೀಪದ ಅರಣ್ಯಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ ಎಂದು ಕಳಿಂಗ ಟಿವಿ ವರದಿ ಮಾಡಿದೆ. (ಏಜೆನ್ಸೀಸ್)
ಹೋಂಡಾ ಜಾಝ್​ 2020 ಮಾರುಕಟ್ಟೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
