ಜಾಜ್ಪುರ್​:ವಾಟ್ಸ್​ಆ್ಯಪ್​ನಲ್ಲಿ ಮಾಜಿ ಪ್ರೇಯಸಿಯ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟ ಆರೋಪದಲ್ಲಿ ಒಡಿಶಾದ ಜಾಜ್ಪುರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಪ್ರಭಾತ್​ ನಾಯಕ್​ (32) ಎಂದು ಗುರುತಿಸಲಾಗಿದೆ. ಈತ ಜಾಜ್ಪುರ ಸರ್ದಾರ್​ ಪೊಲೀಸ್​ ಠಾಣಾ ವ್ಯಾಪ್ತಿಯ ಖೈರಾಬಾದ್​ ಗ್ರಾಮದ ನಿವಾಸಿ.
ಪೊಲೀಸ್​ ಮೂಲಗಳ ಪ್ರಕಾರ ಪ್ರಭಾತ್​​ ಆರು ವರ್ಷದ ಹಿಂದೆ ಯುವತಿಯೊಬ್ಬಳ ಜತೆ ಸಂಬಂಧ ಹೊಂದಿದ್ದನು. ಆ ಸಂದರ್ಭದಲ್ಲಿ ಇಬ್ಬರು ಕೂಡ ಜಿಲ್ಲೆಯ ಪನಿಕೋಳಿಯಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಯುವತಿಯ ಅಶ್ಲೀಲ ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದ.
ಇದನ್ನೂ ಓದಿರಿ:ತಾಪಂ ರದ್ದು ಮತ್ತೆ ಸದ್ದು: ರಾಜ್ಯ ಸರ್ಕಾರದ ಚಿಂತನೆ, ಕೇಂದ್ರಕ್ಕೆ ಅಂತಿಮ ಹೊಣೆ..
ಇಬ್ಬರ ನಡುವಿನ ಸಂಬಂಧ ಕೊನೆಯಾದ ಬಳಿಕ ಪ್ರಭಾತ್​​ ಮತ್ತೊಬ್ಬ ಯುವತಿಯನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದ. ಅದಕ್ಕೂ ಮುನ್ನ ಮದುವೆ ವಿಚಾರ ಗೊತ್ತಾಗಿ ಸಂತ್ರಸ್ತೆ ವ್ಯಕ್ತಿಯೊಬ್ಬನಿಂದ ಮದುವೆ ಪ್ರಸ್ತಾವನೆಯನ್ನು ಕಳುಹಿಸಿದ್ದಳು. ಆದರೆ, ಆರೋಪಿ ವಾಟ್ಸ್​ಆ್ಯಪ್​ ಮೂಲಕ ಯುವತಿಯ ಅಶ್ಲೀಯ ವಿಡಿಯೋವನ್ನು ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾನೆ.
ಈ ಆಧಾರದ ಮೇಲೆ ಆರೋಪಿಯ ಮೇಲೆ ದೂರು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಆತನನ್ನು ಜಾಜ್ಪುರ ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್​)
ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಖಾಸಗಿ ಆಸ್ಪತ್ರೆಗಳು, ಮೆಡಿಕಲ್​ ಕಾಲೇಜುಗಳ ಮೇಲೆ ಐಟಿ ದಾಳಿ

ಕರ್ನಾಟಕದ ಉದ್ಯಮಿ ಶೆಟ್ಟಿಗೆ ಭಾರಿ ಆಘಾತ: ವಿಶ್ವದೆಲ್ಲೆಡೆ ಇರುವ ಆಸ್ತಿಗಳ ಜಪ್ತಿಗೆ ಬ್ರಿಟನ್‌ ಕೋರ್ಟ್‌ ಆದೇಶ

ಭಾರತದ ವಿರುದ್ಧ ಮಹಾಸಂಚು ಆರೋಪ: ದಿಶಾ ಮುಗ್ಧೆ ಎಂದ ರಮ್ಯಾ, ಬಿಡುಗಡೆ ಮಾಡದಿದ್ರೆ ಹೋರಾಟ ಎಂದ ರೈತ ಮುಖಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
