ಭುವನೇಶ್ವರ್​:ಪೈಶಾಚಿಕ ಕೃತ್ಯವೊಂದರಲ್ಲಿ ತಾಳಿ ಕಟ್ಟಿದ ಧರ್ಮ ಪತ್ನಿಯನ್ನೇ ವೇಶ್ಯಾವಾಟಿಕೆಗೆ ನೂಕಿದ ಪಾಪಿ ಪತಿ, ಇಷ್ಟಕ್ಕೆ ಸುಮ್ಮನಾಗದೇ ವೇಶ್ಯಾವಾಟಿಕೆ ಮುಂದುವರಿಸಲು ಪತ್ನಿ ಒಪ್ಪದಿದ್ದಾಗ ಆಕೆಯ ಜನನಾಂಗಕ್ಕೆ ಮದ್ಯದ ಬಾಟಲಿಯನ್ನು​ ಸೇರಿಸಿ ಮೃಗೀಯವಾಗಿ ವರ್ತಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಕಂಧಮಾಲ್​ ಜಿಲ್ಲೆಯ ತಮುದಿಬಂಧ ಗ್ರಾಮದ ನಿವಾಸಿಯಾಗಿರುವ ಮಹಿಳೆ ಕೇಂದ್ರಪರಾ ಜಿಲ್ಲೆಯ ಪಟ್ಟಮುಂಡೈ ಗ್ರಾಮದ ಚಂದನ್ ಆಚಾರ್ಯ ಎಂಬಾತನನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ವಾಸವಿದ್ದಾರೆ. ​
ಇದನ್ನೂ ಓದಿರಿ:ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!
ಮದುವೆ ಆದ ಎರಡು ವರ್ಷಗಳ ಬಳಿಕ ಚಂದನ್ ಪತ್ನಿಯನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ನೂಕಿದ್ದಾನೆ. ಆ ದಂಧೆಯನ್ನು ತನ್ನ ಮನೆಯಲ್ಲೇ ನಡೆಸುತ್ತಿದ್ದ. ಕಳೆದ ಐದು ದಿನಗಳ ಹಿಂದೆ ಸಂತ್ರಸ್ತೆ ವೇಶ್ಯಾವಾಟಿಕೆ ಮುಂದುವರಿಸಲು ವಿರೋಧಿಸಿದ್ದಾಳೆ.
ಮೊದಲೇ ಪಾನಮತ್ತ ಸ್ಥಿತಿಯಲ್ಲಿದ್ದ ಆರೋಪಿ ಪತಿ, ಪತ್ನಿಯ ಮಾತನ್ನು ಕೇಳಿ ಕೋಪಗೊಂಡು ಆಕೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಬೀಳಿಸಿ, ನಂತರ ಮದ್ಯದ ಬಾಟಲಿಯನ್ನು ಆಕೆಯ ಜನನಾಂಗಕ್ಕೆ ಸೇರಿಸಿದ್ದಾನೆ. ಇದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಸ್ಥಳೀಯರಿಗೆ ಈ ವಿಚಾರ ತಿಳಿದು ತಕ್ಷಣ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂತ್ರಸ್ತೆ ಮತ್ತು ಆಕೆಯ 5 ವರ್ಷದ ಮಗಳನ್ನು ರಕ್ಷಿಸಿ, ಆರೋಪಿ ಚಂದನ್​ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿರಿ:ಅಮೇಜಾನ್ ಉದ್ಯೋಗಿಯ ಭಯಾನಕ ಆತ್ಮಹತ್ಯೆ: ಯೂಟ್ಯೂಬ್​ನಲ್ಲಿ ಹುಡುಕಾಟ, ಸಾವಿನ ರಹಸ್ಯ ಬಿಚ್ಚಿಟ್ಟ ಡೆತ್​ನೋಟ್​!
ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.(ಏಜೆನ್ಸೀಸ್​​)
ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ: ವಿಡಿಯೋ ಕಾಲ್ ಪರಿಶೀಲಿಸಲು ಮೊಬೈಲ್ ವಶಕ್ಕೆ ಪಡೆದ ಪೊಲೀಸರು!

ಉದ್ಯಮಿಗಳ ಸುಲಿಗೆ ಹಿಂದಿದ್ದ ಇಡಿ ಅಧಿಕಾರಿ ಸಿಬಿಐ ಬಲೆಗೆ

ಮಲೈಕಾಗೆ ಮೊದಲನೇ ಪತಿಯಿಂದ ಗಿಫ್ಟ್​! ಅಂತದ್ದೇನಿದೆ ಆ ಗಿಫ್ಟ್​ ಬಾಕ್ಸ್​ನಲ್ಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 3 =
Remember me
