ಭುವನೇಶ್ವರ:ನವಜಾತ ಹೆಣ್ಣು ಮಗುವಿಗೆ ತಂದೆಯೇ ವಿಷದ ಇಂಜೆಕ್ಷನ್​ ಚುಚ್ಚಿರುವ ಹೃದಯವಿದ್ರಾವಕ ಘಟನೆ ಒಡಿಸ್ಸಾದ ಭುವನೇಶ್ವರ ಹತ್ತಿರದ ಬಾಲಸೋರ್‌ ಎಂಬಲ್ಲಿ ನಡೆದಿದೆ.
ಚಂದನ್ ಮಹಾನಾ ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇನ್ನು, 20 ದಿನಗಳ ಹೆಣ್ಣು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಇದನ್ನೂ ಓದಿ:ಶುಭಮನ್ ಗಿಲ್‌ನಿಂದ ಯಶಸ್ವಿ ಜೈಸ್ವಾಲ್‌ವರೆಗೆ: IPL 2023 ಸೀಸನ್​ನ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ…
ಒಂದು ವರ್ಷದ ಹಿಂದೆ ಸಿಂಘಿರಿ ಗ್ರಾಮದ ತನ್ಮಯಿ-ಚಂದನ್​ ವಿವಾಹವಾಗಿತ್ತು. 20 ದಿನಗಳ ಹಿಂದೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ತನ್ಮಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆಯ ನಂತರ ಆಕೆ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು.
ಚಂದನ್ ತನ್ನ ಮಗಳನ್ನು ನೋಡಲು ಬಂದಿದ್ದ ವೇಳೆ, ನವಜಾತ ಮಗುವನ್ನು ತನ್ನ ಪತಿಯೊಂದಿಗೆ ಬಿಟ್ಟು ತನ್ಮಯಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ನಾನಕ್ಕೆ ತೆರಳಿದ್ದಳು. ಆದರೆ, ಮಗು ಏಕಾಏಕಿ ಜೋರಾಗಿ ಅಳಲು ಆರಂಭಿಸಿತು. ಕೂಡಲೇ ಆಕೆ ಹಾಸಿಗೆಯ ಕೆಳಗೆ ಸಿರಿಂಜ್​ನ್ನು ನೋಡಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
