ಅಬುಧಾಬಿ:ಜೂನ್​ 02ರಂದು ಒಡಿಶಾದ ಬಾಲಾಸೋರ್​ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು, 1,200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ ಬಾಣಸಿಗ ಸಹಜನ್​ ಮೊಹಮ್ಮದ್​ ಎಂಬುವವರು ತಾವು ಈಚೆಗೆ ಲಾಟರಿಯಲ್ಲಿ ಗೆದ್ದ 4 ಲಕ್ಷ ರೂ. ಹಣವನ್ನು ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಒಡಿಶಾದ ಜಸ್​ಪುರ್​ ಮೂಲಕ ಸಹಜನ್​ ಈಚೆಗೆ ಡ್ರೀಮ್​ ಐಲ್ಯಾಂಡ್​ ಸ್ಕ್ರ್ಯಾಚ್​ಕಾರ್ಡ್​ ಆಟದಲ್ಲಿ 20 ಸಾವಿರ ದಿರ್ಹಾಂ(4, 48, 885 ರೂಗಳನ್ನು) ಬಹುಮಾನವಾಗಿ ಗೆದ್ದಿದ್ದರು.
ಇದನ್ನೂ ಓದಿ:ಹಳಿ ಮೇಲೆ ಬಿದ್ದ ಬಂಡೆ; ಬೀದರ್​-ಕಲಬುರ್ಗಿ ನಡುವೆ 2 ಘಂಟೆ ರೈಲು ಸಂಚಾರ ಸ್ಥಗಿತ
ಈ ಕುರಿತು ಮಾತನಾಡಿರುವ ಸಹಜನ್​ ಅದೃಷ್ಟವಶಾತ್​ ಭೀಕರ ರೈಲು ಅಪಘಾತದಲ್ಲಿ ನನ್ನ ಪರಿಚಿತ ವ್ಯಕ್ತಿಗಳು ಯಾರು ಇರಲಿಲ್ಲ. ದುರಂತದಲ್ಲಿ ನನ್ನ ಗ್ರಾಮದವರು ಕೆಲವರು ಗಾಯಗೊಂಡಿದ್ದಾರೆ. ನಾನು ಮೊದಲು ಅವರಿಗೆ ಸಹಾಯ ಮಾಡುತ್ತೇನೆ.
ಜೂನ್​ 25ರಂದು ನಾನು ನನ್ನ ತವರಿಗೆ ಮರಳುತ್ತಿದ್ದು, ದುರಂತದ ಸಂತ್ರಸ್ತರಿಗೆ ಸಹಾಯ ಮಾಡುವುದರ ಜೊತೆಗೆ ಉಳಿದ ಹಣವನ್ನು ಮನೆ ಉಪಯೋಗಕ್ಕೆ ಉಪಯೋಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + five =
Remember me
