ಅಹಮದಾಬಾದ್​:ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರನ್ನು ಸಹಾಯಕ ಸಬ್​ ಇನ್​ಸ್ಪೆಕ್ಟರ್ ಗೋಪಾಲ್ ದಾಸ್​ ಶೂಟ್ ಮಾಡಿ ಕೊಂದಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವಂಥ ವಿಷಯವೇ. ಆದರೆ ಅದಕ್ಕಾಗಿ ಆತ ಏನು ಸಿದ್ಧತೆ ಮಾಡಿಕೊಂಡಿದ್ದ ಎಂಬ ಸಂಗತಿ ಹೊರಬಿದ್ದಿದೆ.
54 ವರ್ಷದ ಎಎಸ್​ಐ ಗೋಪಾಲ್ ದಾಸ್​ ಜ. 29ರಂದು ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರಿಗೆ ಶೂಟ್ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸಚಿವರು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಅಂದೇ ಈತನನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರೂ, ಸರಿಯಾದ ಮಾಹಿತಿ ಈತ ಬಾಯಿಬಿಟ್ಟಿರಲಿಲ್ಲ. ಹೀಗಾಗಿ ಪೊಲೀಸರು ನಾರ್ಕೊಅನಾಲಿಸಿಸ್​ಗೆ ಒಳಪಡಿಸಿದ್ದರು.
ಅನಾಲಿಸಿಸ್​ಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ಗುಟ್ಟಾಗಿದ್ದರೂ ಒಂದಷ್ಟು ಸ್ವಾರಸ್ಯಕರ ಸಂಗತಿ ಮೂಲಗಳಿಂದ ಬಹಿರಂಗಗೊಂಡಿದೆ. ಬೈಪೋಲಾರ್ ಡಿಸಾರ್ಡರ್​ನಿಂದ ಬಳಲುತ್ತಿದ್ದ ಈತ ಅದಕ್ಕಾಗಿ ಔಷಧ ತೆಗೆದುಕೊಳ್ಳುವುದನ್ನು ಎರಡು ತಿಂಗಳಿನಿಂದ ನಿಲ್ಲಿಸಿದ್ದ ಎಂಬುದು ಗೊತ್ತಾಗಿದೆ. ಅದರಲ್ಲೂ ಸಚಿವರ ವಿರುದ್ಧದ ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲಿ ಎಂಬ ಕಾರಣಕ್ಕೇ ಈತ 2 ತಿಂಗಳು ಮದ್ದು ತೆಗೆದುಕೊಂಡಿಲ್ಲ ಎಂಬುದು ಅನಾಲಿಸಿಸ್​ ವೇಳೆ ತಿಳಿದುಬಂದಿದೆ. ಹತ್ಯೆಗೆ ವೈಯಕ್ತಿಕ ದ್ವೇಷ, ಸಿದ್ಧಾಂತಭೇದವೂ ಕಾರಣ ಎನ್ನಲಾಗಿದೆ. ಅದಾಗ್ಯೂ ಖಚಿತ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ಬಹಿರಂಗಗೊಂಡಿಲ್ಲ.
ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

2021ರಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿ ಗರ್ಭಿಣಿಯಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
