ಒಡಿಶಾ:ಇಲ್ಲಿನ ಬಾಲಸೋರ್​ನಲ್ಲಿ ಶುಕ್ರವಾರ ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಒಡಿಶಾ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ಮೂಲಕ ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವನ್ನೂ ಮಟ್ಟಹಾಕಲು ಮುಂದಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿನ ಪೋಸ್ಟ್​ಗಳ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸರು ಈ ಎಚ್ಚರಿಕೆ ನೀಡಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಅಂದಹಾಗೆ ಕೆಲವರು ಈ ಅಪಘಾತಕ್ಕೆ ‘ಕೋಮು’ ಬಣ್ಣ ಬಳಿಯಲು ಮುಂದಾಗಿದ್ದೇ ಪೊಲೀಸರು ಇಂಥದ್ದೊಂದು ಎಚ್ಚರಿಕೆ ನೀಡಲು ಕಾರಣ.
ಇದನ್ನೂ ಓದಿ:ಶಾಪಿಂಗ್​ಗೆ ಹೋಗುವಾಗ ಪ್ರಾಣ ಕಳ್ಕೊಂಡ ಮಹಿಳೆ; ಪತಿ-ಪುತ್ರಿಯ ಕಣ್ಣೆದುರೇ ಸಾವು!
ಬಾಲಸೋರ್​​ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತಕ್ಕೆ ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್​​ಗಳು ಕಿಡಿಗೇಡಿತನದಿಂದ ಕೋಮು ಬಣ್ಣ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಅಪಘಾತದ ಕಾರಣ ಮತ್ತು ಇತರ ಎಲ್ಲಾ ಅಂಶಗಳ ಬಗ್ಗೆ ಒಡಿಶಾದ ಜಿಆರ್​ಪಿ ತನಿಖೆ ನಡೆಯುತ್ತಿದೆ. ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್​​ಗಳನ್ನು ಪ್ರಸಾರ ಮಾಡದಂತೆ ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹರಡುವ ಮೂಲಕ ಕೋಮುಸಾಮರಸ್ಯ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
It has come to notice that some social media handles are mischievously giving communal colour to the tragic train accident at Balasore. This is highly unfortunate.
Investigation by the GRP, Odisha into the cause and all other aspects of the accident is going on.
— Odisha Police (@odisha_police)June 4, 2023

ತಂದೆ ಹೋದ ಮೇಲೆ ಸೊರಬ ಜನರು ನಮ್ಮ ಕೈಬಿಟ್ಟರಾ ಅನಿಸಿತ್ತು: ಭಾವುಕರಾದ ಗೀತಾ ಶಿವರಾಜಕುಮಾರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
