ಭುವನೇಶ್ವರ್:ಯಾಸ್​ ಚಂಡಮಾರುತದಿಂದ ಒಡಿಶಾದಲ್ಲಿ ಉಂಟಾಗಿರುವ ಪರಿಣಾಮ ಕುರಿತು ನ್ಯೂಸ್​ ರಿಪೋರ್ಟರ್​ ಒಬ್ಬರು ವರದಿ ಮಾಡುವ ಪ್ರಯತ್ನದ ವೇಳೆ ಹಾಸ್ಯ ಪ್ರಸಂಗವೊಂದು ಜರುಗಿದೆ.
ಒಡಿಶಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗುತ್ತಿದ್ದು, ಯಾಸ್​ ಚಂಡಮಾರುತ ಭೀಕರ ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಈ ಬಗ್ಗೆ ಪ್ರತ್ಯಕ್ಷ ವರದಿ ಮಾಡಲು ನಕ್ಷತ್ರ ನ್ಯೂಸ್​ ರಿಪೋರ್ಟರ್​ ಫೀಲ್ಡಿಗೆ ಇಳಿದಿದ್ದರು. ಚಂಡಮಾರುತ ಸಂದರ್ಭದಲ್ಲಿ ಹೊರಗ್ಯಾಕೆ ಬಂದಿದ್ದೀರಿ? ಎಂಬ ಆ್ಯಂಕರ್​ ಪ್ರಶ್ನೆಗೆ ಕಾಮನ್​ ಮ್ಯಾನ್​ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಯಾಸ್​ ಚಂಡಮಾರುತದಿಂದ ಬಿರುಗಾಳಿಯೇ ಸೃಷ್ಟಿಯಾಗಿದ್ದು, ನೀವೇಕೆ ಮನೆಯಿಂದ ಹೊರಗೆ ಬಂದಿದ್ದೀರಾ? ಎಂದು ವರದಿಗಾರ ಕಾಮನ್​ ಮ್ಯಾನ್​ ಒಬ್ಬರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾಮನ್​ ಮ್ಯಾನ್​, ನೀವು ಹೊರಗೆ ಬಂದಿರುವುದರಿಂದ ನಾವು ಸಹ ಬಂದಿದ್ದೇವೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಯಾಗಿ ನಾವು ನ್ಯೂಸ್​ ಕವರೇಜ್​ ಮಾಡಲು ಬಂದಿದ್ದೇವೆ ಎಂದು ಆ್ಯಂಕರ್​ ಹೇಳಿದರು. ನಾವು ಹೊರಗಡೆ ಬರದಿದ್ದರೆ ನೀವು ಯಾರನ್ನು ತೋರಿಸುತ್ತಿರಾ ಎಂಬ ಕಾಮನ್​ ಮ್ಯಾನ್​ ಪ್ರತಿಕ್ರಿಯೆಗೆ ಏನು ಉತ್ತರಿಸಬೇಕೆಂದು ತಿಳಿಯದೇ ಆ್ಯಂಕರ್​ ತಬ್ಬಿಬ್ಬರಾದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ನಕ್ಷತ್ರ ನ್ಯೂಸ್​ ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಾಮನ್​ ಮ್ಯಾನ್​ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದು, ಲೈಕ್ಸ್​ಗಳ ಸುರಿಮಳೆಗೈಯುತ್ತಿದ್ದಾರೆ.(ಏಜೆನ್ಸೀಸ್​​)
Such a kind hearted man. Doing so much for the humanity.
Respect.pic.twitter.com/SCB1zhA5SQ
— Arun Bothra 🇮🇳 (@arunbothra)May 26, 2021

ಪತ್ನಿಗೆ ಕರೆ ಮಾಡಿದಾಗಲೆಲ್ಲ ಬಿಜಿ: ಮುಂದಾಗಿದ್ದು ದುರಂತ ಅಂತ್ಯ, ಮಕ್ಕಳ ಪ್ರಾಣವೂ ಹೋಯ್ತು

ಸುಲಿಗೆಕೋರನನ್ನೇ ಅಪಹರಿಸಿ 3 ಲಕ್ಷ ರೂ.ಗೆ ಬೇಡಿಕೆಯಿಟ್ಟ ಹೆಡ್​ ಕಾನ್ಸ್​ಟೇಬಲ್​! ಮುಂದೆ ನಡೆದಿದ್ದೆಲ್ಲ ರೋಚಕ

ಹೀಗೂ ಇರ್ತಾರೆ! ತಲೆಬುರುಡೆ ಓಪನ್‌ ಮಾಡಿ ಕತ್ತರಿ ಹಾಕಿದರೂ ಜೋಕ್‌ ಮಾಡುತ್ತಿದ್ದ ರೋಗಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
