ಭುವನೇಶ್ವರ್​:ಮೊದಲ ಪತ್ನಿಯ ಜತೆಗಿನ ಡಿವೋರ್ಸ್​ ಕೇಸ್​ ಇತ್ಯರ್ಥವಾಗುವ ಮುನ್ನವೇ ಶಾಲೆಯಲ್ಲೇ ಎರಡನೇ ವಿವಾಹದ ಹೆಡ್​ ಮಾಸ್ಟರ್​ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಘಟನೆ ಒಡಿಶಾದ ಕಂಧಮಾಲ್​ ಜಿಲ್ಲೆಯ ದರಿಗಿನಿಬಾದಿ ಬ್ಲಾಕ್​ ಅಡಿಯಲ್ಲಿ ಬರುವ ಸುಜಮಾಜು ಹೈಸ್ಕೂಲ್​ನಲ್ಲಿ ನಡೆದಿದೆ.
ಶಾಲೆಯ ಆವರಣದಲ್ಲಿ ಸಹ ಶಿಕ್ಷಕರ ಸಮ್ಮುಖದಲ್ಲಿ ಹೆಡ್​ ಮಾಸ್ಟರ್​ ಮದುವೆಯಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಹೆಡ್​ಮಾಸ್ಟರ್​ ಅನ್ನು ಶ್ರೀಪಾಠಿ ನಾಯಕ್​ ಎಂದು ಗುರುತಿಸಲಾಗಿದೆ. ಶಾಲೆಯ ಸ್ಟೋರ್​ ರೂಮ್​ನಲ್ಲಿ ಸಹ ಶಿಕ್ಷಕರ ಉಪಸ್ಥಿತಿಯಲ್ಲಿ ಮತ್ತೊಂದು ಮಹಿಳೆಯ ಜೊತೆ ಹಾರ ಬದಲಾವಣೆ ಮಾಡಿಕೊಂಡು, ಕೇಕ್​ ಕತ್ತರಿಸುತ್ತಿರುವ ದೃಶ್ಯ ಫೋಟೋದಲ್ಲಿದೆ.
ಫೋಟೋ ವೈರಲ್​ ಆಗುತ್ತಿದ್ದಂತೆ ಅದು ಮೊದಲ ಪತ್ನಿ ನಿರುಪಮಾ ದಕುವಾ ಅವರ ಗಮನಕ್ಕೆ ಬಂದಿದ್ದು, ಅವರು ತಕ್ಷಣ ಬಲಿಗುಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಿವೋರ್ಸ್​ ಪ್ರಕರಣ ಇನ್ನೂ ಇತ್ಯರ್ಥವಾಗದಿರುವಾಗ ಶಾಲೆಯ ಆವರಣದಲ್ಲಿ ಹೆಡ್​ ಮಾಸ್ಟರ್​ ಒಬ್ಬರು ಮರು ಮದುವೆಯಾಗವುದೆಂದರೆ ಏನು ಅರ್ಥ ಎಂಬ ಪ್ರಶ್ನೆ ಕೇಳಿಬಂದಿದೆ. ಮೂಲಗಳ ಪ್ರಕಾರ ನಾಯಕ್​ ಮತ್ತು ನಿರುಪಮಾ 2003ರಲ್ಲಿ ಮದುವೆಯಾದರು. ದಂಪತಿಗೆ 12 ವರ್ಷದ ಹಣ್ಣು ಮಗಳಿದ್ದಾಳೆ.
ಸುಜಮಾಜು ಹೈಸ್ಕೂಲ್​ನಲ್ಲಿ ಹೆಡ್​ ಮಾಸ್ಟರ್​ ಆಗಿರುವ ಶ್ರೀಪಾಠಿ ನಾಯಕ್​ ನನ್ನ ಪತಿ. ಕಳೆದ 7 ವರ್ಷಗಳಿಂದ ಆತ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿ, ಆ ನಂತರ ಅದನ್ನು ಹಿಂಪಡೆದುಕೊಂಡಿದ್ದಾರೆ ಎಂದು ನಿರುಪಮಾ ಹೇಳಿದ್ದಾರೆ.
ಫೆ. 6ರಂದು ನನ್ನ ಪತಿ ಬೇರೊಂದು ಮಹಿಳೆಯ ಜೊತೆ ಮರುವಿವಾಹವಾಗಿದ್ದಾರೆ ಮತ್ತು ಶಾಲೆಯ ಸ್ಟೋರ್​ ರೂಮ್​ನಲ್ಲಿ ಆಕೆಯಿಂದ ವಾಸವಿದ್ದಾರೆ ಎಂದು ನಿರುಪಮಾ ಆರೋಪ ಮಾಡಿದ್ದಾರೆ. ಆದರೆ, ಆರೋಪವನ್ನು ನಾಯಕ್​ ತಿರಸ್ಕರಿಸಿದ್ದಾರೆ. ನನ್ನ ಹುಟ್ಟುಹಬ್ಬದ ಆಚರಣೆ ವೇಳೆ ತೆಗೆದ ಫೋಟೋ ಅದು ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಮೇಲಿನ ಆರೋಪಗಳೆಲ್ಲ ಆಧಾರರಹಿತ. ನಾನು ಈಗಾಗಲೇ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದೇನೆ. ಪ್ರಕರಣ ಇನ್ನೂ ಕೋರ್ಟ್​ನಲ್ಲಿ ಇತ್ಯರ್ಥವಾಗಿಲ್ಲ. ನನ್ನ ಹುಟ್ಟುಹಬ್ಬ ಆಚರಣೆ ವೇಳೆ ತೆಗೆದ ಫೋಟೋ ವೈರಲ್​ ಆಗಿದೆ. ಶಾಲೆಯ ಸಮಯದ ನಂತರ ನನ್ನ ಹುಟ್ಟುಹಬ್ಬದಂದು ನಾನು ಸಿಬ್ಬಂದಿಗೆ ಔತಣ ಕೂಟವನ್ನೂ ಏರ್ಪಡಿಸಿದ್ದೆ ಎಂದು ನಾಯಕ್ ಹೇಳಿದರು.(ಏಜೆನ್ಸೀಸ್​)
ಆರ್​ಸಿಬಿಗೆ ಸಾನಿಯಾ ಮೆಂಟರ್: ಬೆಂಗಳೂರಿನ ಮಹಿಳಾ ಕ್ರಿಕೆಟ್ ಫ್ರಾಂಚೈಸಿಗೆ ಟೆನಿಸ್ ತಾರೆ ಮಾರ್ಗದರ್ಶನ

ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್​ ಆಗಿರುವ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಭಾರೀ ಸಂಕಷ್ಟ! 15 ದಿನ ಡೆಡ್​ಲೈನ್​

ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋದ್ರೆ ನನ್ನ ತಾಯಿಗೆ ದ್ರೋಹ ಮಾಡಿದಂತೆ! ಸಚಿವ ಆನಂದ್​ ಸಿಂಗ್​ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
