ಭುವನೇಶ್ವರ:ನಾವು ಕೆಲವೊಮ್ಮೆ ನ್ಯೂಸ್​ ಚಾನಲ್​ಗಳನ್ನು ಹಾಕಿದಾಗ ನಾವು ಸುದ್ದಿ ಓದುವ ಆ್ಯಂಕರ್ ಮೇಲೆ ನಮ್ಮ ಕಣ್ಣು ಬೀಳುವುದಂತು ಸಹಜ. ಅವರ ಅಂದ ನಿಮ್ಮನ್ನು ಹೆಚ್ಚಾಗಿ ಸೆಳೆಯುತ್ತದೆ. ಒಂದುಕ್ಷಣ ನಾವು ನಮ್ಮ ನೆಚ್ಚಿನ ನಿರೂಪಕಿಯನ್ನು ನೋಡಿ ಖುಷಿಪಡುವುದಂತು ಸಹಜ. ಆದರೆ, ಇದೀಗ ಒಡಿಶಾದ ಖಾಸಗಿ ಸುದ್ದಿ ಸಂಸ್ಥೆಯೊಂದು ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸುದ್ದಿ ನಿರೂಪಕಿ ಲೀಸಾ ಅವರನ್ನು ಪರಿಚಯಿಸಿದೆ.
ಒಡಿಶಾ ಟೆಲಿವಿಷನ್ ಲಿಮಿಟೆಡ್ (OTV) ರಾಜ್ಯದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸುದ್ದಿ ನಿರೂಪಕಿ ಲೀಸಾ ಅವರನ್ನು ಪರಿಚಯಿಸಿದೆ. ಭಾನುವಾರ ಭುವನೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಎಐ ಸುದ್ದಿ ನಿರೂಪಕಿ ಲೀಸಾ ಅವರ ಪರಿಚಯ ನಡೆಯಿತು. ನ್ಯೂಸ್​ ಆ್ಯಂಕರ್​ ಆಗಿ ಲೀಸಾ ಯಶಸ್ವಿಯಾಗಿ ಸುದ್ದಿಯನ್ನು ಸಹ ಓದಿದ್ದಾರೆ.
OTV’s AI news anchor Lisa has the capability to speak in multiple languages. She will seamlessly present news in Odia apart from English for OTV and its digital platforms.#AIAnchorLisa#Lisa#Odisha#OTVNews#OTVAnchorLisapic.twitter.com/8Q0t3m6NEE
ಇದನ್ನೂ ಓದಿ:ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ; 14 ಮಂದಿ ವಿರುದ್ಧ ಪ್ರಕರಣ ದಾಖಲು
ಈ ಕುರಿತು ಟ್ವೀಟ್​ ಮಾಡಿರುವ OTV ಸುದ್ದಿ ಸಂಸ್ಥೆ AI ಸುದ್ದಿ ನಿರೂಪಕಿ ಲೀಸಾ ಬಹು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂಗ್ಲೀಷ್​ ಜೊತೆ ಒಡಿಯಾದಲ್ಲೂ ಸುದ್ದಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಟ್ವೀಟ್​ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ(MD) ಜಗ್ಗಿ ಮಂಗತ್​ ಪಾಂಡಾ ಇಂದಿನ ಕಾಲಘಟ್ಟದಲ್ಲಿ ಜನತೆ ತಮ್ಮ ಹೆಚ್ಚಿನ ಸಮಯವನ್ನು ಇಂಟರ್​ನೆಟ್​ನಲ್ಲಿ ಕಳೆಯುತ್ತಾರೆ. ಈ ನಿಟ್ಟಿನಲ್ಲಿ ನಾವು ತಾಂತ್ರಿಕ ಕ್ಷೇತ್ರದಲ್ಲಿ ಪ್ರಗತಿತನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು AI ಆ್ಯಂಕರ್​ ಲೀಸಾ ಅವರನ್ನು ಪರಿಚಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × two =
Remember me
